ಪ್ರೀಡಂ ಪಾರ್ಕ್‌ ನಲ್ಲಿ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿಯಿಂದ ಅನಿರ್ದಿಷ್ಟಾವಧಿ ಮುಷ್ಕರ

ಹೆಚ್‍ಐವಿ ರಕ್ತ ಪರೀಕ್ಷೆ, ರೋಗಿಗಳಿಗೆ ಮಾತ್ರೆ ವಿತರಣೆ ಸ್ಥಗಿತ

ಬೆಂಗಳೂರು;  ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿಯಲ್ಲಿ  ಸುಮಾರು 1800 ಕ್ಕೂ ಅಧಿಕ ಸಿಬ್ಬಂದಿ ಸೇವೆಯನ್ನು ಆರೋಗ್ಯ ಇಲಾಖೆಯೊಂದಿಗೆ ವಿಲೀನ ಮಾಡಿ ಖಾಯಂ ಗೊಳಿಸುವುದು ಸೇರಿದಂತೆ ಹಲವು ನ್ಯಾಯಯುತ ಬೇಡಿಕೆಗಳ‌ ಈಡೇರಿಕೆಗೆ ಒತ್ತಾಯಿಸಿ ರಾಜ್ಯದ ಎಲ್ಲಾ ಕೇಂದ್ರಗಳಲ್ಲಿ ಹೆಚ್‍ಐವಿ ರಕ್ತ ಪರೀಕ್ಷೆ, ರೋಗಿಗಳಿಗೆ ಮಾತ್ರೆ ವಿತರಣೆ ಇತರೆ ಎಲ್ಲಾ ಸೇವೆಗಳನ್ನು  ಸ್ಥಗಿತಗೊಳಿಸಿ ಗುತ್ತಿಗೆ ಸಿಬ್ಬಂದಿ ಪ್ರೀಡಂ ಪಾರ್ಕ್‍ನಲ್ಲಿ ಅನಿರ್ದಿಷ್ಟಾವಧಿ ಬೃಹತ್ ಪ್ರತಿಭಟನೆ ಆರಂಭಿಸಿದ್ದಾರೆ.

 

ಕಳೆದ 22 ವರ್ಷಗಳಿಂದ ಸಿಬ್ಬಂದಿ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿದ್ದು, ನಮ್ಮ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದ್ದಾರೆ.

ರಾಜ್ಯ ಏಡ್ಸ್ ಪ್ರಿವೆನ್ನನ್ ಸೊಸೈಟಿ ಗೌರವಾಧ್ಯಕ್ಷರಾದ ಕೆ. ಅಕ್ಷತಾ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿ, ಏಡ್ಸ್ ಪ್ರಿವೆನ್ಷನ್ ಸೊಸೈಟಿ ಗುತ್ತಿಗೆ ನೌಕರರು  ಎಲ್ಲಾ ಜಿಲ್ಲಾ ಆಸ್ಪತ್ರೆಜಿಲ್ಲಾ ಡ್ಯಾಪ್ಕೋ ಕಚೇರಿ, ವೈದ್ಯಕೀಯ ಕಾಲೇಜುಗಳುತಾಲ್ಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ  ಹೆಚ್‍ಐವಿ ರಕ್ತ ಪರೀಕ್ಷೆ, ರೋಗಿಗಳಿಗೆ ಮಾತ್ರೆಗಳ ವಿತರಣೆ ಮಾಡುತ್ತಿದ್ದು ಇಂದಿನಿಂದ ಸೇವೆ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ.

ರಾಜ್ಯ ಏಡ್ಸ್ ಪ್ರಿವೆನ್ನನ್ ಸೊಸೈಟಿಯ ಐಸಿಟಿಸಿ, ಎಆರ್‍.ಟಿ ಹಾಗೂ ಇತರೆ ಗುತ್ತಿಗೆ ನೌಕರರಿಗೆ ಆರೋಗ್ಯ ಇಲಾಖೆಯ ಸಮಾನಾಂತರ ಹುದ್ದೆಗಳಿಗೆ ವಿಲೀನಗೊಳಿಸುವುದು, ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವ ಜೊತೆಗೆ ಸರ್ಕಾರದಿಂದ ಪ್ರೋತ್ಸಾಹ ಧನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದರು.

 

ಕೆಸಾಪ್ಟ್ ನೌಕರರ ಕ್ಷೇಮಾಭಿವೃದ್ಧಿ ಮಂಡಳಿ ಸ್ಥಾಪನೆ, ಸಾಮಾನ್ಯ ವರ್ಗಾವಣೆ, ಪರಸ್ಪರ ವರ್ಗಾವಣೆಗೆ ಅವಕಾಶ ನೀಡುವುದು. ನೌಕರರ ಕುಂದು ಕೊರತೆ ಸಮಿತಿ ರಚನೆ, ವೇತನ ಬಡ್ತಿ, ಎನ್.ಹೆಚ್.ಎಂ ಅಡಿ 86 ಕೇಂದ್ರಗಳನ್ನು ಮರು ಆಪ್ತಸಮಾಲೋಚಕರು ಮತ್ತು ಪ್ರಯೋಗಶಾಲಾ ತಂತ್ರಜ್ಞರ ಪ್ರಯೋಗಶಾಲಾ ತಂತ್ರಜ್ಞರ 11ತಿಂಗಳ ವೇತನ ಹಿಂಬಾಕಿ ವೇತನ ಬಿಡುಗಡೆ ಒಳಗಡಂತೆ ನಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು  ಎಂದರು.

Facebook
Twitter
LinkedIn
WhatsApp
Email
Print
Telegram

Leave a Comment

Your email address will not be published. Required fields are marked *

Translate »
Scroll to Top