ಕಚ್ಚಾ ತೈಲದ ಬೆಲೆ ಹೆಚ್ಚಳ

ನವದೆಹಲಿ, ಡಿ.೧- ವಾಣಿಜ್ಯ ಬಳಕೆಯ ೧೯ ಕೆಜಿ ಗ್ಯಾಸ್ ಲಿಂಡರ್ ಬೆಲೆಯನ್ನು ತೈಲ ಉತ್ಪಾದನಾ ಕಂಪೆನಿಯಗಳು ೧೦೦ ರೂ.ನಷ್ಟು ಹೆಚ್ಚಿಸಿವೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಹೆಚ್ಚಳದ ಮಧ್ಯ ದೇಶಿಯವಾಗಿ ವಾಣಿಜ್ಯ ಬಳಕೆಯ ಅನಿಲದ ಬೆಲೆಯನ್ನು ಹೆಚ್ಚಿಸಲಾಗಿದೆ. ಕಳೆದ ತಿಂಗಳಲ್ಲಿ ೨೬೬ ರೂ. ಹೆಚ್ಚಿಸಲಾಗಿತ್ತು, ಆದರೆ ಇದೀಗ ೧೦೦ ರೂ. ಹೆಚ್ಚಳವಾಗಿದೆ.

ಇದರ ಮೂಲಕ ದೆಹಲಿ, ಕೊಲ್ಕತ್ತಾ, ಮುಂಬೈಗಳನ್ನು ಸೇರಿದಂತೆ ಬಹುತೇಕ ನಗರಗಳಲ್ಲಿ ಸಿಲಿಂಡರ್ ದರ ದುಪ್ಪಾಟ್ಟಾಗಿದೆ, ೨ ಸಾವಿರ ರೂ. ಗಡಿ ದಾಟಿದೆ. ಹೊಟೇಲ್, ವಾಹನ ಸೇರಿದಂತೆ ಇತರೆ ಕಡೆಗಳಲ್ಲಿ ಬಳಕೆಯಾಗುವ ವಾಣಿಜ್ಯ ಗ್ಯಾಸ್ ಬೆಲೆ ಹೆಚ್ಚಳದಿಂದ ಪರೋಕ್ಷವಾಗಿ ಜನರ ಜೀವನದ ಮೇಲೆ ಪರಿಣಾಮ ಬೀರಲಿದೆ. ಸದ್ಯಕ್ಕೆ ಅಡುಗೆ ಅನಿಲದ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂಬುದು ಸಮಾದಾನಕರ ಅಂಶವಾಗಿದೆ.

ಕಳೆದ ತಿಂಗಳು ನವೆಂಬರ್ ನಲ್ಲಿ ಕೇಂದ್ರ ಸರ್ಕಾರ ಪೆಟ್ರೋಲ್ ಮೇಲೆ ೫ ರೂ., ಡಿಸೇಲ್ ಮೇಲೆ ೧೦ ರೂ. ಅಬಕಾರಿ ಸುಂಕವನ್ನು ಕಡಿಮೆ ಮಾಡಲಾಗಿತ್ತು. ಅದನ್ನು ಆಧರಿಸಿ ರಾಜ್ಯ ಸರ್ಕಾರವೂ ಏಳು ರೂಪಾಯಿ ವ್ಯಾಟ್ ತೆರಿಗೆಯನ್ನು ಕಡಿಮೆ ಮಾಡಿತ್ತು. ಇದರಿಂದ ಪೆಟ್ರೋಲ್, ಡಿಸೇಲ್ ಬೆಲೆ ಸ್ವಲ್ಪ ಕಡಿಮೆಯಾಗಿದೆ. ಕೆಲ ಪೈಸೆಗಳಲ್ಲಿ ದರ ಹೆಚ್ಚಳವಾದರೂ ಅದೇನು ಹೆಚ್ಚು ಪರಿಣಾಮ ಬೀರಿಲ್ಲ. ಈ ವರ್ಷದ ಆರಂಭದಲ್ಲಿ ಅಕ್ಟೋಬರ್‍ವರೆಗೂ ಅಡುಗೆ ಅನಿಲದ ಬೆಲೆಯನ್ನು ಪರಿಷ್ಕರಣೆ ಮಾಡಲಾಗುತ್ತಿತ್ತು. ಅನಂತರ ಸ್ಥಗಿತಗೊಳಿಸಲಾಗಿದೆ. ಆದರೆ ವಾಣಿಜ್ಯ ಬಳಕೆಯ ಸಿಲಿಂಡರ್ ದರವನ್ನು ಕಾಲ ಕಾಲಕ್ಕೆ ಹೆಚ್ಚಿಸಲಾಗುತ್ತಿದೆ. ಇಂದು ೧೦೦ ರೂ. ಹೆಚ್ಚಳ ಮಾಡಿರುವುದರಿಂದ ಬೆಲೆ ಏರಿಕೆ ಮೇಲೆ ಅಡ್ಡ ಪರಿಣಾಮವಾಗುವ ಸಾಧ್ಯತೆ ಇದೆ.

Leave a Comment

Your email address will not be published. Required fields are marked *

Translate »
Scroll to Top