ಮೊಳಕಾಲ್ಮುರು : ಸಹಕಾರ ಸಂಘಗಳ ಸಹಾಯದಿಂದ ಇಂದು ಅನೇಕ ಬಡ ಕುಟುಂಬಗಳು ತಮ್ಮ ಜೀವನ ಮತ್ತು ವ್ಯವಹಾರವನ್ನು ನೆಮ್ಮದಿಯಾಗಿ ನಿಭಾಯಿಸುತ್ತಾ ಜೀವನ ದಾಗಿಸುತ್ತಿದ್ದಾರೆ ಎಂದು ಸಿದ್ದಯ್ಯಕೋಟೆ ವಿಜಯ ಮಹಾಂತೇಶ ಶಾಖಾ ಮಠದ ಬಸವಲಿಂಗ ಸ್ವಾಮಿಗಳು ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದರು. ಮೊಳಕಾಲ್ಮುರು ಪಟ್ಟಣದಲ್ಲಿ ಆಯೋಜಿಸಿದ್ದನೂತನವಾಗಿ ಪ್ರಾರಂಭವಾದ ನಕ್ಷತ್ರ ಸಹಕಾರ ಪತ್ತಿನ ಸಹಕಾರ ಸಂಘವನ್ನು ಕುರಿತು ಮಾತನಾಡಿದರು. ಸಹಕಾರ ಸಂಫಗಳು ಜನರ ಜೀವನದಲ್ಲಿ ಅತೀ ಪ್ರಮುಖ ಪಾತ್ರ ವಹಿಸುತ್ತಿದ್ದೂ ಅದರ ಉಪಯೋಗ ಪಡೆದುಕೊಳ್ಳಬೇಕಾಗಿದೆ.

ಹನಿ ಹನಿ ಕುಡಿದರೆ ಹಳ್ಳ ಎನ್ನುವ ಹಾಗೆ ಬಡತನದ ಜೀವನಕ್ಕೆ ಒಂದು ಒಂದು ರೂಪಾಯಿನೂ ಅಮೂಲ್ಯವಾಗಿದ್ದು ಸಹಕಾರ ಸಂಘಗಳಲ್ಲಿ ಠೇವಣಿ ಇಟ್ಟು ಸಾಲ ಪಡೆದು ವ್ಯವಹಾರ ಮಾಡಬಹುದಾಗಿದೆ. ಸಹಕಾರ ಸಂಘಗಳ ಸಹಾಯ ದಿಂದ ಸಾಲ ಪಡೆದು ಸಾಕಷ್ಟು ಜನರ ಮನೆಗಳನ್ನು ಮಾಡಿ ಕೊಳ್ಳಲು ಮತ್ತು ಜೀವನ ಸಾಗಿಸಲು ಸಹಕಾರಿಯಾಗಿದೆ. ಇಂದು ಮಹಿಳೆಯರು ಸ್ವಾವಲಂಬಿ ಜೀವನ ಮಾಡಲು ತಮ್ಮ ಮಕ್ಕಳ ವಿದ್ಯಾಭ್ಯಾಸ ಮಾಡಿಸಲು ಉಪಯೋಗವಾಗಿದೆ.ಇಂತಹ ಸಹಕಾರವನ್ನು ಜಾಗೃತಿವಹಿಸಿ ನಿಭಾಯಿಸಿಕೊಂಡು ಹೋಗಬೇಕು. ಸಂದರ್ಭದಲ್ಲಿಜಗದೀಶ್ ಡಿ. ಸಿ ಸಿ ಬ್ಯಾಂಕ್ ವ್ಯವಸ್ಥಾಪಕರು,ಅಬ್ದುಲ್ ಕಲೀಮ್ ಸಾಬ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು,ಅಬ್ದುಲ್ ಸುಭಾನ್ ಸಾಬ್ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಲಿ ಮೈನರೀಟಿ ಅಧ್ಯಕ್ಷರು, ಡಿ ಎಂ ಮಂಜುನಾಥ್ ಮಾಜಿ ತಾ. ಪ ಅಧ್ಯಕ್ಷರು,ಎಂ. ಸಿ ದೇವದಾಸ್ ಸಹಕಾರ ಸಂಘದ ಅಧ್ಯಕ್ಷರು, ಜಿಂಕಲು ಶ್ರೀನಿವಾಸ್ ಮೂರ್ತಿ, ಅಬ್ದುಲ್ ವಹೀದ್ ಪ ಪ. ಸದ್ಯಸರು, ಜಿಯಾಉಲ್ಲಾ ನಕ್ಷತ್ರ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು ವಾಸಿಮ್ ಎಸ್ ಎಂ ಆರ್ ಎಸ್ ಬಸ್ ಮಾಲೀಕರು ಹಾಗೂ ಸಂಘದ ಸದಸ್ಯರು ಭಾಗವಹಿಸಿದ್ದರು.