ಬೆಂಗಳೂರಿನಲ್ಲಿ ಮೊದಲ ಬಾರಿಗೆ ಪ್ರೇಕ್ಷಾಧ್ಯಾನ ಶಿಬಿರ ಆರಂಭ

ಬೆಂಗಳೂರು: ಆಧುನಿಕ ಜೀವನ ಶೈಲಿಯ ಒತ್ತಡ, ಮಾನಸಿಕ, ದೈಹಿಕ, ಭಾವನಾತ್ಮಕ ಖಾಯಿಲೆಗಳಿಂದ ಬಳಲುತ್ತಿರುವ ಹಾಗೂ ಆರೋಗ್ಯಪೂರ್ಣ ಜೀವನಕ್ಕಾಗಿ ಪ್ರೇಕ್ಷಾ ಫೌಂಡೇಷನ್ ಬೆಂಗಳೂರಿನ ಆಚಾರ್ಯ ತುಳಸಿ ಮಹಾ ಪ್ರಜ್ಞಾ ಸೇವಾ ಕೇಂದ್ರದಲ್ಲಿಂದು “ ಪ್ರೇಕ್ಷಾಧ್ಯಾನ ಶಿಬಿರಕ್ಕೆ ಸಮಾಜ ಸೇವಕ ಮಹೇಂದ್ರ ಮುನ್ನೋತ್ ಚಾಲನೆ ನೀಡಿದರು. ಪ್ರೇಕ್ಷಾಧ್ಯಾನ ಕೇವಲ ಆಸನಗಳ ಕಸರತ್ತಲ್ಲ, ಇದು ನಮ್ಮ ಆಲೋಚನೆಗಳು ಮತ್ತು ಪ್ರಜ್ಞೆಯನ್ನು ಶುದ್ದೀಕರಿಸುವ ಅಭ್ಯಾಸ. ಇದರಿಂದ ನಾವು ನಮ್ಮ ಸ್ವಭಾವ, ನಡವಳಿಕೆಯನ್ನು ರೂಪಿಸಿಕೊಳ್ಳಬಹುದು. ಈ ಪ್ರಕ್ರಿಯೆ ನಮ್ಮ ಪ್ರಾಚೀನ ಗ್ರಂಥಗಳು, ಆಧುನಿಕ ವಿಜ್ಞಾನ ಅನುಭವಗಳ ಸಮ್ಮಿಲನವಾಗಿದೆ. ವ್ಯಕ್ತಿ ತನ್ನನ್ನು ತಾನು ಅರಿತುಕೊಳ್ಳುವ ಮತ್ತು ಗುರುತಿಸಿಕೊಳ್ಳಲು ಆತ್ಮಬಲ ಹೆಚ್ಚಿಸಿಕೊಳ್ಳುವ ಅಭ್ಯಾಸವಾಗಿದೆ ಎಂದು ಮಹೇಂದ್ರ ಮುನ್ನೋತ್ ಹೇಳಿದರು.

ಜೈನಾಚಾರ್ಯ ಮಹಾಪ್ರಜ್ಞಾಜಿ ಅವರು ಈ ಪ್ರಕ್ರಿಯೆಗೆ ಮಾರ್ಗದರ್ಶನ ಮಾಡಿ ಲಕ್ಷಾಂತರ ದೇಶೀಯ ಮತ್ತು ವಿದೇಶೀಯರನ್ನು ಪರಿವರ್ತನೆ ಮಾಡಿದ್ದಾರೆ. ಉತ್ತಮ ಜೀವನಶೈಲಿ ಮೂಲಕ ಬದುಕು ಕಟ್ಟಿಕೊಳ್ಳುವಂತೆ ಮಾಡಿದ್ದಾರೆ. ಇದೇ ಪ್ರಥಮ ಬಾರಿಗೆ ಬೆಂಗಳೂರು ನಗರದ ನಿವಾಸಿಗಳಿಗೆ ಮಾನಸಿಕ ಉದ್ವೇಗದಿಂದ ಮುಕ್ತಿ, ದೈಹಿಕ ಶಕ್ತಿಯ ಪರಿವರ್ತನೆ ಮತ್ತು ಭಾವನೆಗಳನ್ನು ಉನ್ನತೀಕರಣ ಮಾಡಿಕೊಳ್ಳಲು ಶಿಬಿರ ಸಹಕಾರಿಯಾಗಿದೆ ಎಂದರು. ಈ ಶಿಬಿರದಲ್ಲಿ ನೂರಕ್ಕೂ ಹೆಚ್ಚು ಶಿಬಿರಾರ್ಥಿಗಳು ಭಾಗವಹಿಸಿದ್ದು, ಶಿಬಿರಾರ್ಥಿಗಳಿಗೆ ಸೂಕ್ತ ವಸತಿ ಮತ್ತು ಸಾತ್ವಿಕ ಆಹಾರದ ವ್ಯವಸ್ಥೆ ಕಲ್ಪಿಸಲಾಗಿದೆ ಇದರಿಂದ ಅನುಭವಿ ಬೋಧಕರ ಮಾರ್ಗದರ್ಶನದಲ್ಲಿ ಸಾತ್ವಿಕ ಶಕ್ತಿಯ ಹೊಸ ಚೈತನ್ಯ ಪಡೆಯಬಹುದು ಎಂದು ಪ್ರೇಕ್ಷಾ ಪೌಂಡೇಶನ್ ಸಂಯೋಜಕಿ ವೀಣಾ ಬೆಡ್ ಅವರು ತಿಳಿಸಿದರು. ಈ ಪ್ರೇಕ್ಷಾ ಧ್ಯಾನ ಶಿಬಿರದಲ್ಲಿ ಗಿರಿಯಾಸ್ ನ ಕನ್ಯಾಲಾಲ್ ಜೀ ಪ್ರೇಕ್ಷಾ ಪೌಂಡೇಶನ್ ಅಧ್ಯಕ್ಷ ಅಶೋಕ ಚಂಡಾಲ್ಯ, ಮುಖ್ಯ ತರಬೇತಿದಾರ ರಾಜೇಂದ್ರ ಮೋದಿ, ಮತ್ತಿತರರು ಹಾಜರಿದ್ದರು.

Leave a Comment

Your email address will not be published. Required fields are marked *

Translate »
Scroll to Top