ಬಳ್ಳಾರಿ : ಬಳ್ಳಾರಿ ಜಿಲ್ಲಾ ಬಿಜೆಪಿ ಕಾರ್ಯಲಯದಲ್ಲಿ ಬೆಳಿಗ್ಗೆ ಈಶಾನ್ಯ ಪದವೀಧರ ಮತಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಬಿಜೆಪಿ ಪ್ರಚಾರ ಕಚೇರಿಯನ್ನು ಪ್ರಾರಂಭಿಸಲಾಯಿತು.
ರಾಜ್ಯ ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕರಾಗಿರುವ ಎನ್ ರವಿಕುಮಾರ್ ಹಾಗೂ ವಿಧಾನಪರಿಷತ್ ಚುನಾವಣೆಯ ಬಿಜೆಪಿ ಅಭ್ಯರ್ಥಿ ಅಮರನಾಥ್ ಪಾಟೀಲ್, ಮಾಜಿ ಶಾಸಕ ಜಿ ಸೋಮಶೇಖರ ರೆಡ್ಡಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಅನಿಲ್ ನಾಯ್ಡು ಡಾಕ್ಟರ್ ಮೈ ಪಾಲ ಮತ್ತಿತರರು ಪರಿಷತ್ತಿನ ಚುನಾವಣಾ ಪ್ರಚಾರ ಕಚೇರಿಯನ್ನು ಉದ್ಘಾಟಿಸಿದರು.
ಬಿಜೆಪಿ ಕಾರ್ಯಕರ್ತರು ದುರುಗಿನರು ಪಕ್ಷದ ಅಭ್ಯರ್ಥಿ ಅಮರ್ನಾಥ್ ಪಾಟೀಲ್ ಗೆಲುವಿಗೆ ಶ್ರಮಿಸಬೇಕು ಪದವೀಧರ ಮತದಾರರ ಮನೆಮನೆಗಳಿಗೆ ತೆರಳಿ ಈ ಹಿಂದಿನ ಬಿಜೆಪಿ ಸರ್ಕಾರದ ಸಾಧನೆಗಳ ಬಗ್ಗೆ ಮನವರಿಕೆ ಮಾಡಿಕೊಡಬೇಕು ಎಂದು ರವಿಕುಮಾರ್ ತಿಳಿಸಿದರು.
ಬಿಜೆಪಿ ಮುಖಂಡರುಗಳಾದ ಎಚ್ ಹನುಮಂತಪ್ಪ ಕೆ ಮಹೇಶ್ವರ ಸ್ವಾಮಿ ಕೇಸುಗುಣ ಸೇರಿದಂತೆ ಅನೇಕ ಪ್ರಮುಖರು ಉಪಸ್ಥಿತರಿದ್ದರು.
Facebook
Twitter
LinkedIn
Telegram
WhatsApp
Email
Print