ಮರಿಯಮ್ಮನಹಳ್ಳಿ: ನಿವೃತ್ತ ನ್ಯಾಯಮೂರ್ತಿ ಎ. ಜೆ. ಸದಾಶಿವ ನೇತೃತ್ವದ ಆಯೋಗವು ಅಸ್ಪೃಷ್ಯರ ಕುರಿತು ವೈಜ್ಞಾನಿಕವಾಗಿ ನೀಡಿರುವ ವರದಿ ಜಾರಿಗೊಳಿಸುವಂತೆ ಒತ್ತಾಯಿಸಿ 8.11.2021 ರಂದು ಸೋಮವಾರ ಮರಿಯಮ್ಮನಹಳ್ಳಿ ಬಂದ್‍ಗೆ ಕೆರೆ ನೀಡಲಾಗಿದೆ ಎಂದು ನ್ಯಾಯಮೂರ್ತಿ ಎ. ಜೆ. ಸದಾಶಿವ ಆಯೋಗ ವರದಿ ಅನುಷ್ಠಾನ ಹೋರಾಟ ಸಮಿತಿಯ ಮುಖಂಡ ಎಸ್. ಬಿ. ಚಂದ್ರಶೇಖರ್ ನುಡಿದರು. ಅವರು ಪಟ್ಟಣದ ಶ್ರೀಲಕ್ಷ್ಮೀನಾರಾಯಣಸ್ವಾಮಿ ಹಾಗೂ ಶ್ರೀ ಆಂಜಿನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಪಟ್ಟಣ ಬಂದ್ ಪೂರ್ಪಭಾವಿ ಸಭೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಪರಿಶಿಷ್ಟ ಜಾತಿಯಲ್ಲಿ ನೂರಾರು ಜಾತಿಗಳಿವೆ. ಮಾದಿಗ ಮತ್ತು ಚಲವಾದಿ ಸಮುದಾಯಗಳು ರಾಜಕೀಯವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಪ್ರಗತಿಯಾಗಿಲ್ಲ. ಒಳಮೀಸಲಾತಿ ನೀಡುವಂತೆ ಕಳೆದ 20 ವರ್ಷಗಳಿಂದ ಹೋರಾಟ ನಡೆಸಲಾಗುತ್ತಿದೆ. ಸರ್ಕಾರಗಳು ಮಾತ್ರ ಜಾಣಕುರುಡುತನ ಪ್ರದರ್ಶಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ 8.11.2021ರಂದು ಮರಿಯಮ್ಮನಹಳ್ಳಿ ಬಂದ್ ಮಾಡಲಾಗುತ್ತಿದೆ. ಪಟ್ಟಣ ಪಂಚಾಯಿತಿಯಿಂದ ನಾರಾಯಣದೇವರ ಕೆರೆ ವೃತ್ತದವರೆಗೆ ಪ್ರತಿಭಟನಾರ್ಯಾಲಿ ನಡೆಯಲಿದ್ದು. ಈ ಬಂದ್‍ನಲ್ಲಿ ಸುಮಾರು 2 ಸಾವಿರ ಜನರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ತಕ್ಷಣವೇ ಸರ್ಕಾರ ಸದಾಶಿವ ಆಯೋಗದ ವರದಿಯನ್ನು ಅಂಗೀಕರಿಸಿ, ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂದು ಅವರು ಒತ್ತಾಯಿಸಿದರು. ಈ ಸಂಧರ್ಭದಲ್ಲಿ ನ್ಯಾಯಮೂರ್ತಿ ಎ. ಜೆ. ಸದಾಶಿವ ಆಯೋಗ ವರದಿ ಅನುಷ್ಠಾನ ಹೋರಾಟ ಸಮಿತಿಯ ಮುಖಂಡರಾದ ನಿವೃತ್ತಿ ಶಿಕ್ಷಕ ಹಾಗೂ ಮಾದರ ಚನ್ನಯ್ಯ ಸೇನೆಯ ಜಿಲ್ಲಾ ಅಧ್ಯಕ್ಷರು ಬಿ.ವಿಜಯಕುಮಾರ್, ಎಲ್.ಜಗನ್ನಾಥ್, ಎಲ್.ಮಂಜುನಾಥ, ಎಲ್.ಕೃಷ್ಣ,ನಾಗರಾಜ್, ಎಚ್. ನಾಗಪ್ಪ, , ವಿರುಪಾಕ್ಷಿ, ರವಿಕಿರಣ್ ಕರವೇ, ಉಮೇಶ್, ಎಚ್. ಜಾಂಬುಮುನಿ, ಎಲ್. ನಾರಾಯಣ, ಗಾಳೆಪ್ಪ, ಹುಲುಗಪ್ಪ, ತಿಮ್ಮರಾಜು, ಕೃಷ್ಣ, ಮಹಾದೇವ್, ನಾಗಪ್ಪ, ಮಂಜುನಾಥ, ದುರುಗಪ್ಪ, ಸೂರ್ಯಪ್ರಕಾಶ್ ಇತರರಿದ್ದರು.