ಸಂತ್ರಸ್ತೆ ದೂರು ಕೊಟ್ಟರೆ ಶಾಸಕರ ವಿರುದ್ಧ ಕಾನೂನು ಕ್ರಮ

ರಾಮನಗರ ಶಾಸಕರಿಗೆ ಸಂಬಂಧಿಸಿದ ವಿಡಿಯೋ ಬಿಡುಗಡೆ ಬಗ್ಗೆ ಕೇಳಿದಾಗ, “ಮಾಡಲಿ ಸಂತೋಷ. ಸಂತ್ರಸ್ತೆ  ದೂರು ನೀಡಿದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸೂಚಿಸುತ್ತೇವೆ ಎಂದು ತಿಳಿಸಿದರು. 

ನಿಮ್ಮ ಆಪ್ತರು ಎಂದು ವಿಡಿಯೋ ವೈರಲ್ ಮಾಡಿದ್ದಾರಾ ಎಂದು ಕೇಳಿದಾಗ, “ಅಂತಹ ನೂರೆಂಟು ಇವೆ. ಬಾಂಬೆ ಬ್ಲೂ ಬಾಯ್ಸ್ ಗಳದ್ದು ಆಯ್ತು, ಯೋಗೇಶ್ವರ್ ಅವರು ಎಳ್ಲಾ ಮಠಗಳ ಪ್ರವಾಸ ಮಾಡಿದ್ದು ಆಯ್ತಾ? ಮಠದವರು ನಿಮ್ಮ ಬಳಿ ಖಾಸಗಿಯಾಗಿ  ಮಾತಾಡಿರಬೇಕಲ್ಲವೇ? ಅಮಿತ್ ಶಾ ಬಳಿ ಹೋಗಿ ಕೊಟ್ಟಿದ್ದಾಯ್ತು. ಸಿಎಂ ಸ್ಥಾನದಿಂದ ಯಡಿಯೂರಪ್ಪ ಅವರು ಬದಲಾವಣೆಯಾಗಲು ಕಾರಣವೇನು? ಅದನ್ನು ಯೋಗೇಶ್ವರ್ ಅವರೇ ಹೇಳಿದ್ದಾರೆ. ಹೀಗಾಗಿ ಒಬ್ಬೊಬ್ಬರದ್ದು ಒಂದೊಂದು ಇರುತ್ತದೆ ಎಂದು ತಿಳಿಸಿದರು.

ಸಂತ್ರಸ್ತೆಯರಿಗೆ ನ್ಯಾಯ ಒದಗಿಸಿಕೊಡುವುದು ಎಷ್ಟು ಮುಖ್ಯವೋ ವಿಡಿಯೋ ಬಿಡುಗಡೆ ಮಾಡಿದವರಿಗೆ ಶಿಕ್ಷೆಯಾಗುವುದು ಅಷ್ಟೇ ಮುಖ್ಯವಲ್ಲವೇ ಎಂದು ಕೇಳಿದಾಗ, “ಯಾರೆಲ್ಲಾ ಕಾನೂನು ಚೌಕಟ್ಟಿನಲ್ಲಿ ತಪ್ಪಿತಸ್ಥರಿದ್ದಾರೆ ಅವರ ವಿರುದ್ಧ ಕ್ರಮ ಜರುಗಿಸಬೇಕು. ಇದು ಒಬ್ಬರ ವಿಚಾರವಲ್ಲ. ನೂಲಿನಂತೆ ಸೀರೆ ಎಂದು ಯಾರೋ ವ್ಯಾಖ್ಯಾನ ಮಾಡುತ್ತಿದ್ದರು. ಮೇಲಿನಿಂದಲೂ ಇದೇ ರೀತಿ ಇದೆಯಂತೆ. ಹಾಸನದಲ್ಲಿ ಹೋಗಿ ಒಂದು ರೌಂಡ್ ಹಾಕಿ. ಎಲ್ಲೆಲ್ಲಿ ಏನು ಚರ್ಚೆಯಾಗುತ್ತಿದೆ ಗೊತ್ತಾಗುತ್ತದೆ ಎಂದರು.

ಪ್ರಕರಣದಲ್ಲಿ ರೇವಣ್ಣ ಅವರನ್ನು ಎ1 ಮಾಡಿರುವುದಕ್ಕೆ ಜೆಡಿಎಸ್ ವಿರೋಧ ವ್ಯಕ್ತಪಡಿಸುತ್ತಿದೆ ಎಂದು ಕೇಳಿದಾಗ, “ದೂರಿನಲ್ಲಿ ಏನಿದೆ ಎಂಬ ಮಾಹಿತಿ ನನಗಿಲ್ಲ. ನಾನು ಮಾಧ್ಯಮಗಳ ಮೂಲಕ ವಿಚಾರ ತಿಳಿದಿದೆ. ಸಂತ್ರಸ್ತೆ ದೂರಿನ ಆಧಾರದ ಮೇಲೆ ಎ1 ಮಾಡಿರುತ್ತಾರೆ. ಇದರಲ್ಲಿ ಯಾವುದೇ ರೀಜಕೀಯ ಬಣ್ಣವಿಲ್ಲ ಎಂದರು.

ಎಸ್ಐಟಿ ಬಳಿಕ ರಾಮನಗರ ಶಾಸಕರ ವಿಡಿಯೋ ಲೀಕ್ ಹಾಗೂ ಈಶ್ವರಪ್ಪ ಅವರ ಪುತ್ರ ಕಾಂತೇಶ್ ಅವರು ತಮ್ಮ ವಿಡಿಯೋ ಬಯಲಾಗದಂತೆ ತಡೆಯಾಜ್ಞೆ ಕೋರಿದ್ದು, ಇಂತಹ ಎಲ್ಲಾ ಪ್ರಕರಣಗಳನ್ನು ಒಟ್ಟಿಗೆ ಎಸ್ಐಟಿ ಮೂಲಕ ತನಿಖೆ ಮಾಡುವುದು ಉತ್ತಮವಲ್ಲವೇ ಎಂದು ಕೇಳಿದಾಗ, “ಇದಕ್ಕೆ ವಿಶೇಷವಾದ ಕಾನೂನು ತರಬೇಕು. ಈ ರೀತಿ ಬೆದರಿಸುವುದು, ಖಆಸಗಿ ಬದುಕಿಗೆ ಧಕ್ಕೆಯಾಗುವುದು, ಅಧಿಕಾರ ದುರ್ಬಳಕೆ ತಡೆಯಲು ಪ್ರತ್ಯೇಕ ಕಾನೂನು ತರಬೇಕು

 

ಉತ್ತರ ಕರ್ನಾಟಕದಲ್ಲಿ ಪ್ರಚಾರಕ್ಕೆ ಹೋಗುವುದಿಲ್ಲವೇ ಎಂದು ಕೇಳಿದಾಗ, “ಹೋಗಬೇಕಾಗಿತ್ತು. ನನ್ನ ಗಂಟಲು ಸರಿ ಇಲ್ಲ, ಔಷಧಿ ತೆಗೆದುಕೊಳ್ಳುತ್ತಿದ್ದೇನೆ ಎಂದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top