ಸ್ಯಾಂಡಲ್ ವುಡ್ ಹೊಸ ಬದಲಾವಣೆಗೆ ಸಾಕ್ಷಿಯಾಗಿದೆ. ಇಬ್ಬರು ಸ್ಟಾರ್ ನಟರ ನಡುವಿನ ವೈಮನಸ್ಸು ಶಮನ ಆಗಿರುವ ಸೂಚನೆ ಕಂಡುಬಂದಿದೆ. I stand with Darshan sir ಎಂದು ಹೇಳುವ ಮೂಲಕ ದರ್ಶನ್ ಬೆಂಬಲಕ್ಕೆ ಧ್ರುವ ಸರ್ಜಾ (Dhruva Sarja) ನಿಂತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಈ ಮೂಲಕ ಕನ್ನಡ ಚಿತ್ರರಂಗದಲ್ಲಿ ಮತ್ತೆ ದರ್ಶನ್, ಧ್ರುವ ಒಂದಾಗುವ ಘಾಟು ಬಂದಿದೆ.
ತಮ್ಮದೇ ಬಣದಲ್ಲಿ ಗುರುತಿಸಿಕೊಂಡಿದ್ದ ಪ್ರಥಮ್ ವಿರುದ್ಧವೇ ಧ್ರುವ ಮಾತನಾಡಿದ್ದಾರೆ. ಈ ಮೂಲಕ ದರ್ಶನ್ ಪರ ಧ್ರುವ ಸರ್ಜಾ ಬ್ಯಾಟಿಂಗ್ ಮಾಡಿದ್ದಾರೆ. ದರ್ಶನ್ ಫ್ಯಾನ್ಸ್ ಎನ್ನಲಾದ ವ್ಯಕ್ತಿಗಳಿಂದ ಜೀವಬೆದರಿಕೆ ಇದೆ ಎಂದು ದೂರು ದಾಖಲಿಸಿರುವ ಪ್ರಥಮ್ ದರ್ಶನ್ ವಿರುದ್ಧ ಹರಿಹಾಯ್ದಿದ್ದರು. ಇದೀಗ ಪ್ರಥಮ್ ಹೇಳಿಕೆ ತಪ್ಪೆಂದು ಖಡಕ್ಕಾಗಿ ಹೇಳಿದ್ದಾರೆ ಧ್ರುವ ಸರ್ಜಾ.
ಈ ಮೊದಲು ಆಪ್ತರಾಗಿದ್ದ ದರ್ಶನ್, ಧ್ರುವ ನಡುವೆ ವೈಯಕ್ತಿಕ ವಿಚಾರಕ್ಕೆ ಮುನಿಸು ಉಂಟಾಗಿತ್ತು. ಈ ವಿಚಾರ ಅಧಿಕೃತವಾಗಿ ಗೋಚರಿಸಿತ್ತು. ಇದೇ ದರ್ಶನ್ ಕೊಲೆ ಆರೋಪದ ಮೇಲೆ ಜೈಲು ಸೇರಿದ್ದಾಗ ಧ್ರುವ ಕಟುವಾಗಿ ಮಾತನಾಡಿದ್ದರು. ಅದಕ್ಕೂ ಮುನ್ನವೇ ದರ್ಶನ್ ವಿಚಾರವಾಗಿ ತಮ್ಮದೇ ಹುಟ್ಟುಹಬ್ಬದ ದಿನ ನೇರವಾಗೇ ಆಕ್ರೋಶ ಹೊರಹಾಕಿದ್ದರು ಧ್ರುವ. ಇದೀಗ ದಿಢೀರ್ ಬದಲಾವಣೆ ಎನ್ನುವಂತೆ ಧ್ರುವ I stand with Darshan sir ಎಂದಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಅಸಲಿಗೆ ಹಿಂದೆ ಈ ಇಬ್ಬರು ಸ್ಟಾರ್ ನಟರ ನಡುವಿನ ಮುನಿಸು ಕಾವೇರಿ ನೀರಿಗಾಗಿ ಹೋರಾಟದ ವೇದಿಕೆಯಲ್ಲಿ ಜಗಜ್ಜಾಹೀರಾಗಿತ್ತು, ಬಳಿಕ ಅದೇ ನಿಜವಾಗಿತ್ತು. ಇದೀಗ ದರ್ಶನ್ ಫ್ಯಾನ್ಸ್ ವಿರುದ್ಧದ ಹೋರಾಟದಲ್ಲಿ ಧ್ರುವ ಸರ್ಜಾ ಮಾತು ಸಾಫ್ಟ್ ಕಾರ್ನರ್ ಆಗಿದ್ದು ಇದು ಬೇರೆಯದ್ದೇ ಅರ್ಥ ಕಲ್ಪಿಸುತ್ತಿದೆ.