ದೇಶದಲ್ಲಿ 42 ಲಕ್ಷ ಜನ ಸತ್ತಿದ್ದಾರೆ ಎಂದು ನಾನು ಈ ಹಿಂದೆಯೇ ಹೇಳಿದ್ದೆ

ಕೋವಿಡ್ ಸಾವಿನ ಲೆಕ್ಕ: ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರಗಳು ಕೋವಿಡ್ ಸಾವಿನ ಕುರಿತು ಸುಳ್ಳು ಲೆಕ್ಕ ಕೊಟ್ಟಿದ್ದು, ಈ ವಿಚಾರವಾಗಿ ನಾನು ಈ ಹಿಂದೆಯೇ ಪ್ರಶ್ನೆ ಕೇಳಿದ್ದೆ. ಬಿಜೆಪಿ ಸರ್ಕಾರ ಸಾವಿನ ಲೆಕ್ಕ ಮುಚ್ಚಿಟ್ಟ ಹಿನ್ನೆಲೆ 2019 ಹಾಗೂ 2020ರಲ್ಲಿ ಸತ್ತವರ ಸ್ನಾಖ್ಯೆಯಲ್ಲಿನ ವ್ಯತ್ಯಾಸದ ಅಂಕಿ ಅಂಶಗಳನ್ನು ಮುಂದಿಟ್ಟು ಸರ್ಕಾರದ ಸುಳ್ಳು ಲೆಕ್ಕವನ್ನು ಪ್ರಶ್ನಿಸಿದ್ದೆ. ದೇಶದಲ್ಲಿ 42 ಲಕ್ಷ ಜನ ಸತ್ತಿದ್ದಾರೆ ಎಂದು ನಾನು ಈ ಹಿಂದೆಯೇ ಹೇಳಿದ್ದೆ. ಆದರೆ, ಈಗ ವಿಶ್ವ ಆರೋಗ್ಯ ಸಂಸ್ಥೆ ಭಾರತದಲ್ಲಿ ಕೋವಿಡ್ ನಿಂದ ಸತ್ತವರ ಕುರಿತು ವರದಿ ಪ್ರಕಟಿಸಿದ್ದು, ಅವರ ಪ್ರಕಾರ ಭಾರತದಲ್ಲಿ 47 ಲಕ್ಷ ಜನ ಕೊರೋನಾಗೆ ಬಲಿಯಾಗಿದ್ದಾರೆ ಎಂದು ತಿಳಿಸಿದೆ. ಬಿಜೆಪಿ ಸರ್ಕಾರಗಳು ಸಾವಿನ ಸುಳ್ಳು ಲೆಕ್ಕ ನೀಡಿ ಕೋವಿಡ್ ಅನ್ನು ಸಮರ್ಥವಾಗಿ ನಿಭಾಯಿಸಿರುವುದಾಗಿ ಜಂಭ ಕೊಚ್ಚಿಕೊಳ್ಳುತ್ತಿದ್ದರು. ದೇಶದ ಇತಿಹಾಸದಲ್ಲಿ ಯಾವ ಸಾಂಕ್ರಾಮಿಕ ಮಹಾಮಾರಿ, ಪಿಡುಗಿಗೂ ಇಷ್ಟು ಜನ ಸತ್ತಿರಲಿಲ್ಲ. ವೈಜ್ಞಾನಿಕವಾಗಿ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಮುಂದುವರಿದಿದ್ದರೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಸಾವಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿ ಸರಿಯಿಲ್ಲ ಎಂದು ಬಿಜೆಪಿ ಹೇಳುತ್ತಿದೆ. ಮಧುಮೇಹ, ಹೃದಯ ಸಂಬಂಧಿ ಕಾಯಿಲೆ ಹಾಗೂ ಇತರೆ ಆರೋಗ್ಯ ಸಮಸ್ಯೆಗಳು ಇದ್ದವರು ಈ ಸೋಂಕಿನಿಂದ ಸತ್ತರೆ ಅವರಿಗೆ ಕೋವಿಡ್ ಸಾವಿನ ಪ್ರಮಾಣಪತ್ರ ನೀಡುವುದಿಲ್ಲ. ಹೀಗೆ ಬೇರೆ ಕಾಯಿಲೆ ಇರುವವರು ಕೋವಿಡ್ ಸೊಂಕಿನಿಂದ ಸತ್ತರೆ ಅವರ ಸಾವನ್ನು ಸರ್ಕಾರ ಮುಚ್ಚಿಟ್ಟಿದೆ.

ಪಿಎಸ್ಐ ನೇಮಕಾತಿ ಹಗರಣ: ಈ ಹಗರಣದ ವಿಚಾರವಾಗಿ ಇದುವರೆಗೂ 30ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ದಾಖಲೆಗಳು ಇಲ್ಲವಾದರೆ ಇಷ್ಟು ಮಂದಿಯನ್ನು ಯಾಕೆ ಬಂಧಿಸಿದ್ದಾರೆ? ಇಷ್ಟು ಜನರನ್ನು ಬಂಧಿಸಿ ಸಾಕ್ಷಿಗಳಿಲ್ಲ ಎಂದು ಹೇಳುವುದು ಬಿಜೆಪಿಯ ಎಡಬಿಡಂಗಿತನಕ್ಕೆ ಸಾಕ್ಷಿ. ಈ ಪ್ರಕರಣದಲ್ಲಿ ಅಕ್ರಮ ನಡೆಯದಿದ್ದರೆ ಸಿಒಡಿಯಿಂದ ತನಿಖೆ ಯಾಕೆ ಮಾಡಿಸುತ್ತಿದ್ದಾರೆ? 545 ಅಭ್ಯರ್ಥಿಗಳ ಆಯ್ಕೆ ಪಟ್ಟಿ ರದ್ದು ಮಾಡಿದ್ದು ಯಾಕೆ? ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದು ಯಾಕೆ? ದಾಖಲೆ ಇಲ್ಲದೆ ಇಷ್ಟೆಲ್ಲಾ ಮಾಡಿದ್ದಾರಾ? ದಾಖಲೆ ಇಲ್ಲದೆ ಪ್ರಿಯಾಂಕ್ ಖರ್ಗೆ ಅವರು ಏನು ಮಾತನಾಡಲ್ಲ. ಅವರು ಹೇಳಿರುವ ಎಲ್ಲಾ ದಾಖಲೆಗಳು ಸಾರ್ವಜನಿಕವಾಗಿವೆ. ಆದರೂ ಪ್ರಿಯಾಂಕ್ ಖರ್ಗೆ ಅವರಿಗೆ ನೊಟೀಸ್ ಕೊಟ್ಟಿದ್ದು ಯಾಕೆ?ಯಾರೆಲ್ಲ ತಪ್ಪು ಮಾಡಿದ್ದಾರೋ ಅವರ ವಿರುದ್ಧ ಕ್ರಮ ಜರುಗಿಸಲಿ.

ಗೃಹ ಇಲಾಖೆ ವೈಫಲ್ಯ: ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಈ ಹಿಂದೆ ಪೊಲೀಸರನ್ನು ಎಂಜಲು ತಿನ್ನುವ ನಾಯಿಗಳೆಂದು ಬೈದಿದ್ದರು. ಗೃಹ ಮಂತ್ರಿಯಾಗಿ ಹೀಗೆ ಮಾತನಾಡಿದರೆ ಹೇಗೆ? ಇನ್ನು ಸಿ. ಟಿ ರವಿ ಅವರು ಕೂಡ ಪೊಲೀಸರನ್ನು ಇದೇ ರೀತಿ ಅಪಮಾನಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಪೊಲೀಸರು ಕೆಲಸ ಮಾಡುವುದಾದರೂ ಹೇಗೆ? ಶ್ರೀರಾಮಸೇನೆ ಸೇರಿದಂತೆ ಹಲವು ಹಿಂದೂ ಸಂಘಟನೆಗಳು ಕೋಮು ಸೌಹಾರ್ದ ಕದಡುವ ಪ್ರಯತ್ನ ಮಾಡುತ್ತಿದ್ದು, ಎಸ್ ಡಿ ಪಿ ಐ ಸೇರಿದಂತೆ ಇತರ ಸಂಘಟನೆಗಳ ವಿರುದ್ಧ ಕ್ರಮ ಯಾಕಿಲ್ಲ? ನಾನು ಗೃಹ ಮಂತ್ರಿಯಾಗಿದ್ದರೆ, ಎಲ್ಲವನ್ನೂ ಮಟ್ಟ ಹಾಕುತ್ತಿದ್ದೆ.

Leave a Comment

Your email address will not be published. Required fields are marked *

Translate »
Scroll to Top