ನನಗೆ ಕನ್ನಡ ಅಷ್ಟು ಶುದ್ಧವಾಗಿ ಓದಲು ಬರಲ್ಲ, ಸ್ವಲ್ಪ ಉಚ್ಚಾರಣೆ ತಪ್ಪಾಗುತ್ತೆ: ಶಿಕ್ಷಣ ಸಚಿವ

ಶಿವಮೊಗ್ಗ: ೨೦೨೩-೨೦೨೪ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಈ ವಿಚಾರವಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ, ನಾನು ಓದುವುದರಲ್ಲಿ ಅಷ್ಟು ಬುದ್ದಿವಂತನಾಗಿರಲಿಲ್ಲ. ನಾನು ಸಹ ಫೇಲ್ ಆಗಿದ್ದೇನೆ. ನನಗೆ ಕನ್ನಡ ಅಷ್ಟು ಶುದ್ಧವಾಗಿ ಓದಲು ಬರಲ್ಲ. ಸ್ವಲ್ಪ ಉಚ್ಚಾರಣೆ ತಪ್ಪಾಗುತ್ತೆ. ನನ್ನ ಬಗ್ಗೆ ಕೆಟ್ಟ ಟ್ರೋಲ್ ಮಾಡುವವರು ಎಂದೂ ಉದ್ಧಾರಾಗಲ್ಲ ಎಂದು ಶಾಪ ಹಾಕಿದರು. 

ಬಾಗಲಕೋಟೆ ಜಿಲ್ಲೆಯ ಮಳ್ಳಿಗೇರಿ ಮುರರ‍್ಜಿ ವಸತಿ ಶಾಲೆಯ ವಿದ್ಯರ‍್ಥಿನಿ ಅಂಕಿತಾ ಬಸಪ್ಪ ಕೊಣ್ಣೂರ‌‌‌ 625 ಕ್ಕೆ 625 ಅಂಕ ಪಡೆಯುವ ಮುಖಾಂತರ ಸಾಧನೆ ಮಾಡಿದ್ದಾರೆ. ನಮ್ಮ ಇಲಾಖೆವತಿಯಿಂದ ವಿದ್ಯರ‍್ಥಿನಿ ಮತ್ತು ಆಕೆಯ ಪೋಷಕರಿಗೆ ಧನ್ಯವಾದ ತಿಳಿಸುತ್ತೇನೆ. ಇಲಾಖೆಯಲ್ಲಿ ಅನೇಕ ಬದಲಾವಣೆ ಮಾಡಿದ್ದೇವೆ. ಪಠ್ಯ ಪುಸ್ತಕ ಬದಲಾವಣೆ, ಶಿಕ್ಷಕರ ನೇಮಕ ಹೀಗೆ ಅನೇಕ ಬದಲಾವಣೆ ತಂದಿದ್ದೇವೆ. ಅನುದಾನಿತ ಶಾಲೆಗಳಿಗೂ ಶಿಕ್ಷಕರ ನೇಮಕ‌ ಮಾಡುತ್ತೇವೆ ಎಂದು ತಿಳಿಸಿದರು.

ಈ ವರ್ಷ ಮಾತ್ರ ಕೃಪಾಂಕ ಅಂಕ ಸೀಮಿತ:

ಪರೀಕ್ಷೆಯ ಪಾವಿತ್ರ‍್ಯತೆಯನ್ನು ಕಾಪಾಡಲು ನಾವು ಅನೇಕ ಕ್ರಮ ಕೈಗೊಂಡಿದ್ದೇವೆ. ಕೊರೊನಾ ಸಮಯದ ವಿದ್ಯರ‍್ಥಿಗಳು ಈಗ ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿದ್ದಾರೆ. ಶೇ ೨೦ ರಷ್ಟು ಕೃಪಾಂಕ ಅಂಕ ಕೊಟ್ಟಿದ್ದೇವೆ. ಈ ರ‍್ಷಕ್ಕೆ ಮಾತ್ರ ಕೃಪಾಂಕ ಅಂಕ ಸೀಮಿತವಾಗಿರುತ್ತದೆ. ನಮ್ಮ ಶಿಕ್ಷಣ ಇಲಾಖೆ ಈಗಾಗಲೆ ತರಗತಿ ಪ್ರಾರಂಭಕ್ಕೆ ಸಿದ್ದತೆ ಮಾಡಿಕೊಂಡಿದೆ. ಜಸ್ಟ್ ಪಾಸ್ ಆದ ಮಕ್ಕಳು ಮತ್ತೆ ಪರೀಕ್ಷೆ ಬರೆದು ಅಂಕ ಹೆಚ್ಚಿಸಿಕೊಳ್ಳಿ. ವಿದ್ಯರ‍್ಥಿಗಳಿಗೆ ಸ್ಪೇಷಲ್ ಕ್ಲಾಸ್ ತೆಗೆದುಕೊಳ್ಳುತ್ತೇವೆ ಎಂದರು.

ನಮ್ಮ ಜಿಲ್ಲೆ ಮೂರನೇ ಸ್ಥಾನಕ್ಕೆ ಏರಿದೆ. ಫೇಲ್ ಆಗಿರುವ ಮಕ್ಕಳು ಮತ್ತೆ ಪರೀಕ್ಷೆ ಬರೆದು ಪಾಸ್ ಆಗಿ. ನಮ್ಮ ರ‍್ಕಾರಿ ಶಾಲೆಯಲ್ಲಿ ಉತ್ತಮ ಶಿಕ್ಷಕರು ಇದ್ದಾರೆ. ೩ ಸಾವಿರ ಕೆಪಿಎಸ್ಸಿ ಶಾಲೆಗಳನ್ನು ಪ್ರಾರಂಭಿಸುತ್ತೇವೆ. ಎಸ್ಇಪಿ ಜಾರಿಗೆ ನಾವು ತಯಾರಾಗಿದ್ದೇವೆ ಎಂದು ಹೇಳಿದರು. ನನ್ನ ಶಿಕ್ಷಣದ ಬಗ್ಗೆ ಚುನಾವಣೆ ಸಮಯದಲ್ಲಿ ಚರ‍್ಚೆ ನಡೆಯಿತು. ನಾನೂ ಸಹ ಫೇಲ್ ಆಗಿದ್ದೇನೆ. ಶಿಕ್ಷಕರ ಸಹಕಾರ, ಪೋಷಕರ ಸಹಕಾರದಿಂದ ನಿಮ್ಮ ಮುಂದೆ ಬಂದಿದ್ದೇನೆ ಎಂದರು.

ಅಣ್ಣಾಮಲೈ ಒಬ್ಬ ಅಯೋಗ್ಯ. ನಮ್ಮ ರಾಜ್ಯದಿಂದ ನಿವೃತ್ತಿ ಸಂಬಳ ತಗೆದುಕೊಂಡು ಇಲ್ಲಿ ಬಂದು ಪುಕ್ಸಟ್ಟೆ ಭಾಷಣ ಮಾಡುತ್ತಾರೆ. ನನ್ನ ಬಗ್ಗೆ ಅಣ್ಣಾಮಲೈ ಬಂದು ಮಾತಾಡುತ್ತಾರೆ. ನಮ್ಮ ಇಲಾಖೆಯಲ್ಲಿ ತುಂಬಾ ನ್ಯೂನತೆ ಇದೆ. ನಾವು ಎಲ್ಲವನ್ನೂ ಸಹ ಸರಿ ಮಾಡಿಕೊಳ್ಳುತ್ತೇವೆ. ರ‍್ಕಾರಿ ಶಾಲೆಯ ಶಿಕ್ಷಕರ ಪ್ರತಿಭೆಯನ್ನು ನಾವು ಬಳಸಿಕೊಳ್ಳಬೇಕಿದೆ. ಹಳೆ ರ‍್ಕಾರದ ಶಿಕ್ಷಣ ಇಲಾಖೆ ೫೦೦ ಕೋಟಿ ಸಾಲ ನಾವು ತೀರಿಸುತ್ತಿದ್ದೇವೆ ಎಂದು ತಿಳಸಿದರು.

 

ಕೊಡಗು ವಿದ್ಯರ‍್ಥಿನಿ ಕೊಲೆ ಪ್ರಕರಣ ಕಾನೂನು ಕ್ರಮ ಕೈಗೊಳ್ಳಲಿದೆ. ರಾಜ್ಯದ ಸರ್ಕಾರಿ ಶಾಲೆಗಳ ದುರಸ್ತಿ ಕಾರ್ಯ ಮಾಡುತ್ತೇವೆ. ಸರ್ಕಾರಿ ಶಾಲೆಗೆ ಮಕ್ಕಳು ಬರಬೇಕು. ಖಾಸಗಿ ಶಾಲೆಗಳಲ್ಲಿ ಬೇಕಾಬಿಟ್ಟಿ ಶುಲ್ಕ ವಸೂಲಿ ಮಾಡುವಂತಿಲ್ಲ ಎಂದು ಎಚ್ಚರಿಕೆ ನೀಡಿದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top