ಪತ್ರಕರ್ತರ ಹಿತ ಕಾಯುವಲ್ಲಿ ಸದಾ ಮುಂಚೂಣಿಯಲ್ಲಿರುತ್ತೇನೆ

ದೇವನಹಳ್ಳಿ: ಯಾವುದೇ ಚುನಾವಣೆ ನಡೆಯಬೇಕಾದರೆ ಚುನಾವಣಾಧಿಕಾರಿಗಳು ಒಬ್ಬರಿಂದ ಯಶಸ್ವಿಯಾಗಲು ಸಾಧ್ಯವಿಲ್ಲಾ ಅಭ್ಯರ್ಥಿಗಳ ಮತ್ತು ಮತದಾರರ ಸಹಕಾರವೂ ಅಗತ್ಯ ಇತ್ತೀಚೆಗೆ ನಡೆದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯಕಾರಿ ಸಮಿತಿಗೆ ನಡೆದ ಚುನಾವಣೆಯು ಸುಸೂತ್ರವಾಗಿ ನಡೆದು ಇಂದು ವಿಜೇತ ಪಟ್ಟಿಯನ್ನು ಅಧಿಕೃತವಾಗಿ ಘೋಷಿಸಲಾಗುತ್ತಿದೆ ಎಂದು ಚುನಾವಣಾಧಿಕಾರಿ ಮುನಿಯಪ್ಪ ತಿಳಿಸಿದರು. ಅವರು ದೇವನಹಳ್ಳಿ ಪಟ್ಟಣದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಕಳೆದ ಫೆಬ್ರವರಿ 27 ರಂದು ನಡೆದ ಜಿಲ್ಲಾ ಪತ್ರಕರ್ತರ ಸಂಘಕ್ಕೆ ಚುನಾವಣೆಯ ಫಲಿತಾಂಶ ಕಾರಣಾಂತರಗಳಿಂದ ಅಧಿಕೃತ ಘೋಷಣೆ ಮಾಡಲು ಮುಂದೂಡಿದ್ದರಿಂದ ಇಂದು ಅಧಿಕೃತವಾಗಿ ಘೋಷಿಸಿ ಮಾತನಾಡಿ, ನೂತನ ಕಾರ್ಯಕಾರಿ ಮಂಡಳಿ ಎಲ್ಲಾ ಹಿರಿಯ ಪತ್ರಕರ್ತರಿದ್ದು ಸಂಘದ ಅಭಿವೃದ್ಧಿಗೆ ಕೈಜೋಡಿಸಿ ರಾಜಕಾರಣಿಗಳಿಗೂ ಹಾಗೂ ಸಮಾಜಕ್ಕೂ ಮಾದರಿಯಾದ ಕೆಲಸ ಮಾಡಬೇಕೆಂದು ಸಲಹೆ ನೀಡಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೂತನ ಜಿಲ್ಲಾಧ್ಯಕ್ಷ ಶ್ರೀನಿವಾಸ್ ಮಾತನಾಡಿ,ಪತ್ರಕರ್ತರ ಹಿತ ಕಾಯುವಲ್ಲಿ ಸದಾ ಮುಂಚೂಣಿಯಲ್ಲಿರುತ್ತೇನೆ ಪ್ರಸಕ್ತ ಸಾಲಿನ ಸದಸ್ಯತ್ವ ನವೀಕರಣಕ್ಕೆ ನಾಲ್ಕು ತಾಲ್ಲೂಕಿನಿಂದ ಗೆದ್ದಂತಹ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳು ಜವಾಬ್ದಾರಿ ತೆಗೆದುಕೊಂಡು ನೈಜ ಪತ್ರಕರ್ತರನ್ನು ಗುರುತು ಮಾಡಿ ಅಂತಹವರಿಗೆ ಮಾತ್ರ ಗುರುತಿನ ಚೀಟಿ ನೀಡುವಂತಾಗಬೇಕು ನಮ್ಮ ಪ್ರಣಾಳಿಕೆಯಂತೆ ನವೀಕರಣಕ್ಕೆ ಸದಸ್ಯರಿಂದ ಹಣ ಪಡೆಯದೇ ದಾನಿಗಳ ಸಹಕಾರದಿಂದ ಹಣ ಭರಿಸುತ್ತಿದ್ದು ಮುಂದಿನ ದಿನಗಳಲ್ಲಿ ನಾಲ್ಕು ತಾಲ್ಲೂಕಿನ ಪುರಸಭೆ ಹಾಗೂ ನಗರಸಭೆಗಳಲ್ಲಿ ಪತ್ರಕರ್ತರಿಗಾಗಿ ಕ್ಷೇಮ ನಿಧಿ ಹಾಗೂ ಜಾಹಿರಾತು ನಿಧಿಯನ್ನು ನೀಡುವಂತೆ ಬಜೆಟ್ ಮಂಡನೆ ಮುಂಚಿತವಾಗಿ ಅಹವಾಲಿನ ಪತ್ರವನ್ನು ಜಿಲ್ಲಾ ಸಂಘ ತಾಲ್ಲೂಕು ಸಂಘವನ್ನು ಜೊತೆಗೂಡಿಸಿ ನೀಡಲಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಚುನಾವಣಾಧಿಕಾರಿಗಳು ವಿಜೇತರ ಹೆಸರನ್ನು ಪಡೆದ ಮತಗಳ ಸಮೇತ ಜೊತೆಯಲ್ಲಿ ಅಧಿಕೃತವಾಗಿ ಘೋಷಿಸಲಾಯಿತು. ನಂತರ ಹಿರಿಯ ಪತ್ರಕರ್ತರು ಹಲವು ಅನಿಸಿಕೆಗಳನ್ನು ಹಂಚಿಕೊಂಡರು. ಚುನಾವಣಾಧಿಕಾರಿಗಳನ್ನು ಆತ್ಮೀಯವಾಗಿ ಅಭಿನಂದಿಸಿ ಸಿಹಿಹಂಚಲಾಯಿತು. ಬೆಂಗಳೂರು ಗ್ರಾಮಾಂತರ ಜಿಲ್ಲಾ ನೂತನ ಅಧ್ಯಕ್ಷರಾಗಿ ಶ್ರೀನಿವಾಸ್, ಉಪಾಧ್ಯಕ್ಷರಾಗಿ ಜಿ.ಎಸ್.ಮಂಜುನಾಥ್, ಮುರಳಿ ಮೋಹನ್, ಜ್ಯೋತೀಶ್ವರಪ್ಪ, ಪ್ರಧಾನ ಕಾರ್ಯದರ್ಶಿ ಆರ್.ರಮೇಶ್, ಕಾರ್ಯದರ್ಶಿ ಸೀತಾರಾಮಯ್ಯ, ಎಂ.ಆರ್.ನಾಗರಾಜ್, ಬಿ.ಸಿ.ಪರಮಶಿವಯ್ಯ, ಖಜಾಂಚಿ ಶಾಂತಮೂರ್ತಿ, ರಾಜ್ಯ ಸಮಿತಿ ಸದಸ್ಯರಾಗಿ ಕುಸುಮ ಪರ್ವತರಾಜು, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸುಗ್ಗರಾಜು, ಎಂ.ವಿನಯ್, ಕೆ.ಎಂ.ದೇವರಾಜ್, ಡಿ.ಎನ್.ಸುರೇಶ್, ಗೋಪಾಲಕೃಷ್ಣ, ಟಿ.ಎಂ.ನಾಗರಾಜ್, ಕೆ.ರಾಮಾಂಜಿನಪ್, ಎಸ್.ಸಿ.ಮಂಜುನಾಥ್, ಆರ್.ಸತೀಶ್, ಬಿ.ಎಸ್.ರಾಘವೇಂದ್ರಾಚಾರ್, ವೈ.ಆನಂದ್, ಮಂಜುನಾಥ್, ಶ್ರೀಧರ್, ಎ.ಮಧು, ಮಹೇಶ್ ರವರುಗಳು ಆಯ್ಕೆಯಾಗಿದ್ದಾರೆ.

Leave a Comment

Your email address will not be published. Required fields are marked *

Translate »
Scroll to Top