ಕೊಪ್ಪಳ : ಇಂದು ನನ್ನ ಧರ್ಮ ಇದು ನಿನ್ನ ಧರ್ಮ ನಾನು ಒಬ್ಬನೇ ನನ್ನ ಬಿಟ್ಟು ಯಾರು ಇಲ್ಲ ಎನ್ನುವದನ್ನ ಬಿಟ್ಟು ಧರ್ಮಿಯರ ಜೊತೆಗೆ ಕೈ ಜೋಡಿಸಿ ಸಹ ಬಾಳ್ವೆ ಮಾಡಿ ಮಾನವ ಧರ್ಮ ಒಂದೇ ಯಾಗಿದೆ ಎಂದು ಜಮಾತೆ ಇಸ್ಲಾಮಿ ಹಿಂದ್ ಚಿಂತಕ ಲಾಲ್ ಹುಸೇನ್ ಕಂದಗಲ್ ಸರ್ವ ಸಮಾಜದ ಧರ್ಮಿಯರಿಗು ಕರೆ ಕೊಟ್ಟರು. ಕೊಪ್ಪಳ ಜಿಲ್ಲೆ ಕುಷ್ಟಗಿ ಪಟ್ಟಣದ ಶ್ರೀ ಬಸವ ಭವನದಲ್ಲಿ ಏರ್ಪಡಿಸಲಾಗಿದ್ದ ಜಮಾಅತೆ ಇಸ್ಲಾಮೀ ಹಿಂದ್ ಕುಷ್ಟಗಿ ಸೌಹಾರ್ದ- ಇಪ್ತಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಈ ಜಗತ್ತಿಗೆ ಬುದ್ಧ ಬಸವಣ್ಣ ಮತ್ತು ಮಹಮ್ಮದ್ ಫೈಗಬರ್ ಹೇಳಿದ್ದು ಒಂದೇ ಈ ಮಾನವನ ಕುಲ ಒಂದೇ ದೇವರು ಒಬ್ಬರ ಇಲ್ಲ ಬೇದ ಭಾವ ಇಲ್ಲ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಅಂತ ಈ ವಾಖ್ಯೆಗಳಲ್ಲಿ ಪ್ರತಿಯೊಬ್ಬರು ನೆಡೆದುಕೊಳ್ಳುವಂತ ಕಾರ್ಯದಲ್ಲಿ ನಾವುಗಳು ತೊಡಗಿಸಿ ಕೊಳ್ಳಬೇಕು ಎಂದರು.

ಆದರೆ ಇಲ್ಲಿ ಈ ಕಾರ್ಯಕ್ರಮಕ್ಕೆ ಜನ ಸೇರುತ್ತಾರೋ ಇಲ್ಲ ಅಂದುಕೊಂಡಿದ್ದೇವು ನಾವುಗಳು ಅಂದು ಕೊಂಡ ಗಿಂತಲು ಜಾಸ್ತಿ ಜನ ಸೇರಿದ್ದಾರೆ ಈ ಒಂದು ಜನತೆಯನ್ನು ನೋಡಿ ನಮಗೆ ಬಹಳ ಸಂತೋಷವಾಗಿದೆ. ಮನುಷ್ಯ ಜೀವನ ಹುಟ್ಟು ಕಚಿತವಾದ ಮೇಲೆ ಸಾವು ಕಚಿತವಾಗಲೇಬೇಕು ಮನುಷ್ಯ ಆರೋಗ್ಯದಿಂದ ನೆಮ್ಮದಿಯಿಂದ ನಿದ್ರೆ ಮಾಡಬೇಕಾದರೆ ಹಸಿವಿನಿಂದ ಇರುವ ಜೀವಕ್ಕೆ ಊಟ ಮಾಡಲೇ ಬೇಕು ಎನಿಸುತ್ತದೆ. ಹಸಿವಿನ ಬೆಲೆ ತಿಳಿದುಕೊಳ್ಳಬೇಕು ಆಗ ಯಾವ ಜಾತಿ ಅಂಡ ಬರುವದಿಲ್ಲ ಎಂದು ಹೇಳಿದರು.ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಜಿ.ಕೆ ಹಿರೇಮಠ, ತಾಲೂಕು ಕಸಾಪ ಅಧ್ಯಕ್ಷ ವೀರೇಶ ಬಂಗಾರ ಶೆಟ್ಟರ್, ಆರ್.ಕೆ ದೇಸಾಯಿ, ಹಸ್ಮುದ್ದೀನ್, ಬಿಇಓ ಸುರೇಂದ್ರ ಕಾಂಬಳೆ, ಬಸವ ಸಮಿತಿ ಅಧ್ಯಕ್ಷ ಶಂಕರಗೌಡ ಪಾಟೀಲ, ಲಕ್ಷ್ಮಣ ಪೂಜಾರ, ರಾಜೇಂದ್ರ ಬೆಳ್ಳಿ, ಮಹಮ್ಮದ್ ಇರ್ಫಾನ್ ಅನಾಸುರ್, ಅಲ್ತಾಫ್ ಸೇರಿದಂತೆ ಹಲವಾರರು ಉಪಸ್ಥಿತರಿದ್ದರು.