ಗಾಂಜಾ ಸಾಗಾಣಿಕೆ : ಮೂವರು ಆರೋಪಿಗಳ ಬಂಧನ

ಎಲ್.ಎನ್.ಮೋಹನ್ ಕುಮಾರ್ ಅಪರ ಅಬಕಾರಿ ಆಯುಕ್ತರು (ಮಾದಕ ವಸ್ತು), ಬೆಂಗಳೂರು ಅಬಕಾರಿ ಜಂಟಿ ಆಯುಕ್ತರು ಹೊಸಪೇಟೆ ವಿಭಾಗ, ನಾಗಶಯನ ಆರ್. ಅಬಕಾರಿ ಉಪ ಆಯುಕ್ತರು ಇವರ ಮಾರ್ಗದರ್ಶನದಲ್ಲಿ ಕೆ.ಟಿ ಧರ್ಮಪ್ಪ ಅಬಕಾರಿ ಉಪ ಅಧೀಕ್ಷಕರು ಹಿರಿಯೂರು ಇವರ ನೇತೃತ್ವದಲ್ಲಿ ಹಿರಿಯೂರು ಉಪ ವಿಭಾಗದ ಅಬಕಾರಿ ನಿರೀಕ್ಷರಾದ ಎ.ವನಿತಾ ಹಾಗೂ ಸಿಬ್ಬಂದಿ ವರ್ಗದವರು ಹಿರಿಯೂರು ನಗರದಲ್ಲಿ ಗಸ್ತು ನಿರ್ವಹಿಸುತ್ತಿದ್ದಾಗ ಖಚಿತ ಮಾಹಿತಿ ಆಧಾರದ ಮೇಲೆ ಹಿರಿಯೂರು ತಾಲ್ಲೂಕಿನ ಆನೆಸಿದ್ರಿ ಗ್ರಾಮಕ್ಕೆ ಟಾಟಾ ಇಂಡಿಗೋ ವಾಹನದಲ್ಲಿ ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ ಒಟ್ಟು ೪ಕೆ.ಜಿ ೮೦೦ ಗ್ರಾಂ ಒಣ ಗಾಂಜಾವನನ್ನು ಪತ್ತೆ ಹಚ್ಚಿ ವಾಹನ ಹಾಗೂ ಮುದ್ದೆಮಾಲನ್ನು ಜಪ್ತಿ ಪಡಿಸಿ ಎನ್.ಡಿ.ಪಿ.ಎಸ್. ಕಾಯ್ದೆಯಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.


ಆರೋಪಿಗಳಾದ ಆನಂದ್ ಕುಮಾರ್ (೪೨), ಶಾಂತನರಸಪ್ಪ (೩೬), ವಿಶ್ವನಾಥ ಆರ್ ಇವರನ್ನು ಸ್ಥಳದಲ್ಲಿ ದಸ್ತಗಿರಿಗೊಳಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ
ಚಿತ್ರದುರ್ಗ ಜಿಲ್ಲೆಯ ಅಬಕಾರಿ ಇಲಾಖೆಯಿಂದ ೨೦೨೧-೨೨ರ ಸಾಲಿನ ಜುಲೈ-೨೦೨೧ ರಿಂದ ಇದುವರೆಗೆ ಒಟ್ಟು ೧೩ ಪ್ರಕರಣಗಳನ್ನು ದಾಖಲಿಸಿ ೧೦ ಕೆಜಿ ೯೮೦ ಗ್ರಾಂ ಒಣಗಾಂಜಾ ಮತ್ತು ೩೯ ಕೆಜಿ ೮೦೦ ಗ್ರಾಂ ಹಸಿ ಗಾಂಜಾ ಜಪ್ತುಪಡಿಸಿ, ಒಂದು ದ್ವಿಚಕ್ರ ವಾಹನ, ಎರಡು ಕಾರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ೧೪ ಜನ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಚಿತ್ರದುರ್ಗ ಅಬಕಾರಿ ಉಪ ಆಯುಕ್ತರು ತಿಳಿಸಿದ್ದಾರೆ.ಗಾಂಜಾ ಸಾಗಾಣಿಕೆ : ಮೂವರು ಆರೋಪಿಗಳ ಬಂಧನ

Leave a Comment

Your email address will not be published. Required fields are marked *

Translate »
Scroll to Top