ರಾಯಚೂರು, ಮಾ,18 : ಹೋಳಿ ಹುಣ್ಣಿಮೆಯ ಅಂಗವಾಗಿ ನಗರದಲ್ಲಿ ಸಡಗರ ಸಂಭ್ರಮದಿಂದ ಬಣ್ಣ ಹಾಡುವ ಮೂಲಕ ಹೋಳಿ ಹಬ್ಬ ಆಚರಣೆ ಮಾಡಿದರು. ನಿನ್ನೆ ಸಂಜೆ ನಗರದ ಉಪ್ಪರವಾಡಿ ಬಡಾವಣೆಯಲ್ಲಿ ಭಜನೆ ಮಾಡುವ ಮೂಲಕ ಕಾಮದಹನ ಮಾಡಿದರು. ನಂತರ ಬೆಳಿಗ್ಗೆ ಯುವಕರು ಸಡಗರ ಸಂಭ್ರಮದಿಂದ ಒಬ್ಬರಿಗೊಬ್ಬರು ಮುಖಕ್ಕೆ ಬಣ್ಣ ಹಚ್ಚುವ ಮೂಲಕ ಹೋಳಿ ಆಚರಣೆ ಮಾಡಿದರು. ನಂತರ ಉಪ್ಪರವಾಡಿ ಬಡಾವಣೆಯಲ್ಲಿ ಒಬ್ಬರಮೇಲೊಬ್ಬರು ನಿಂತುಕೊಂಡು ಗಡಿಗೆ ಹೊಡೆದು ಸಂಭ್ರಮಿಸಿದರು.