ಬೆಂಗಳೂರು: ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಇನ್ನು ಮುಂದೆ ಕುಮಾರಪರ್ಕ್ ಪರ್ವದಲ್ಲಿರುವ ಸರಕಾರಿ ನಿವಾಸದಲ್ಲಿ ಸರ್ವಜನಿಕರಿಗೆ ಲಭ್ಯವಾಗಲಿದ್ದಾರೆ.
ಸರಕಾರಿ ನಿವಾಸದ ವಿಳಾಸ ನಂಬರ್ ೧, ಕುಮಾರ ಪಾರ್ಕ್ ಪರ್ವ, ಗಾಂಧಿಭವನ ರಸ್ತೆ, ಶಿವಾನಂದ ಸರ್ಕಲ್ ಬಳಿ, ಬೆಂಗಳೂರು ಆಗಿದ್ದು, ಇನ್ನು ಮುಂದೆ ಅವರು ಇಲ್ಲಿಯೇ ಎಲ್ಲರಿಗೂ ಲಭ್ಯರಾಗಲಿದ್ದಾರೆ.
ಸದಾಶಿವನಗರದಲ್ಲಿರುವ ಖಾಸಗಿ ನಿವಾಸದಲ್ಲಿ ಇನ್ನು ಮುಂದೆ ಯಾರನ್ನೂ ಭೇಟಿ ಮಾಡುವುದಿಲ್ಲ. ಯಾರೂ ಇದನ್ನು ತಪ್ಪಾಗಿ ಭಾವಿಸಬಾರದು ಎಂದು ಡಿ ಕೆ ಶಿವಕುಮಾರ್ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
Facebook
Twitter
LinkedIn
Telegram
WhatsApp
Email
Print