ರಾಜ್ಯದ ಬಹುತೇಕ ಭಾಗಗಳಲ್ಲಿ ಇಂದಿನಿಂದ ಐದು ದಿನ ಹೀಟ್ ವೇವ್‍ ಅಲರ್ಟ್

ಬೆಂಗಳೂರು: ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಗುರುವಾರದಿಂದ ಐದು ದಿನಗಳ ಕಾಲ ರಾಜ್ಯದ ಬಹುತೇಕ ಭಾಗಗಳಲ್ಲಿ ಹೀಟ್ ವೇವ್ ಅಥವಾ ಬಿಸಿಗಾಳಿ ಎಚ್ಚರಿಕೆ ನೀಡಿದ್ದು, ಜನರು ಬೆಳಗ್ಗೆ ೧೧ ರಿಂದ ಸಂಜೆ ೪ ರವರೆಗೆ ಹೊರಗೆ ಹೋಗುವುದನ್ನು ತಪ್ಪಿಸುವಂತೆ ಸೂಚಿಸಿದೆ.

ಕೊಂಕಣ ಮತ್ತು ಗೋವಾ, ಆಂಧ್ರಪ್ರದೇಶ, ರ‍್ನಾಟಕ, ತೆಲಂಗಾಣ, ಪುದುಚೇರಿ, ತಮಿಳುನಾಡು ಮತ್ತು ಕೇರಳ ಸೇರಿದಂತೆ ಭಾರತದ ಹೆಚ್ಚಿನ ಭಾಗಗಳಲ್ಲಿ ಉಷ್ಣ ಅಲೆಯ ಪರಿಸ್ಥಿತಿಗಳೊಂದಿಗೆ ಬಿಸಿ ಮತ್ತು ರ‍್ದ್ರ ವಾತಾವರಣದ ಮುನ್ಸೂಚನೆ ನೀಡಿದೆ.

ಹವಾಮಾನ ಇಲಾಖೆಯು ರ‍್ನಾಟಕಕ್ಕೆ ಆರೆಂಜ್ ಅರ‍್ಟ್ ಅನ್ನು ಘೋಷಿಸಿದೆ. ಸುಡುವ ಸರ‍್ಯನಿಗೆ ದರ‍್ಘಕಾಲ ತೆರೆದುಕೊಳ್ಳುವವರಲ್ಲಿ ಶಾಖ-ಸಂಬಂಧಿತ ಅನಾರೋಗ್ಯದ ಸಾಧ್ಯತೆ ಹೆಚ್ಚಾಗುತ್ತದೆ ಎಂದು ಆರೋಗ್ಯ ಕಾಳಜಿ ಎಚ್ಚರಿಕೆಗಳನ್ನು ಸಹ ನೀಡಲಾಗಿದೆ.

ಗರಿಷ್ಠ ತಾಪಮಾನವು ೪೦ ಡಿಗ್ರಿ ಸೆಲ್ಸಿಯಸ್ ದಾಟಿದಾಗ ಅಥವಾ ನರ‍್ದಿಷ್ಟ ಜಿಲ್ಲೆಯ ತಾಪಮಾನವು ಸಾಮಾನ್ಯಕ್ಕಿಂತ ೪.೫ ಡಿಗ್ರಿ ಸೆಲ್ಸಿಯಸ್ ಹೆಚ್ಚಾದಾಗ ಹೀಟ್ ವೇವ್ ಅರ‍್ಟ್ ನೀಡಲಾಗುವುದು ಎಂದು ಐಎಂಡಿ ಬೆಂಗಳೂರು ಪ್ರಭಾರಿ ನರ‍್ದೇಶಕ ಎನ್ ಪುವಿಯರಸನ್ ಅವರು ತಿಳಿಸಿದ್ದಾರೆ.

ವಿಜಯಪುರ, ಯಾದಗಿರಿ, ಕೊಪ್ಪಳ, ರಾಯಚೂರು, ಬಾಗಲಕೋಟೆ, ಕಲಬುರಗಿ, ಬಳ್ಳಾರಿ, ಚಿತ್ರದರ‍್ಗ, ಕೋಲಾರ, ಮೈಸೂರು, ಮಂಡ್ಯ, ತುಮಕೂರು, ಬೆಳಗಾವಿ, ಗದಗ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಬಿಸಿಗಾಳಿ ಎಚ್ಚರಿಕೆ ನೀಡಲಾಗಿದೆ ಎಂದು ಅವರು ಹೇಳಿದರು.

 

ಏಪ್ರಿಲ್ ೨೪ ರಿಂದ ೨೮ ರವರೆಗೆ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಿಸಿ ಗಾಳಿ ಮತ್ತು ರ‍್ದ್ರ ವಾತಾವರಣ ಇರುತ್ತದೆ ಎಂದು ಪುವಿಯರಸನ್ ಹೇಳಿದ್ದು, ಒಟ್ಟಾರೆಯಾಗಿ, ಮುಂದಿನ ಐದು ದಿನಗಳಲ್ಲಿ ರಾಜ್ಯಾದ್ಯಂತ ಗರಿಷ್ಠ ತಾಪಮಾನ ೨-೩ ಡಿಗ್ರಿ ಸೆಲ್ಸಿಯಸ್ ಏರಿಕೆಯಾಗಲಿದೆ.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top