ಆಧುನಿಕ ಯುಗದ ಸಂಸಾರ ಸಾಗರದಲ್ಲಿ ಮಕ್ಕಳನ್ನು ಮಾಡಿಕೊಳ್ಳುವುದು ತ್ರಾಸದಾಯಕ ಕೆಲಸ

ಬೆಂಗಳೂರು : ಆಧುನಿಕ ತಂತ್ರಜ್ಞಾನ ಯುಗ, ಒತ್ತಡದ ಬದುಕು, ಸಂಸಾರ ಸಾಗರದಲ್ಲಿ ಮಕ್ಕಳನ್ನು ಮಾಡಿಕೊಳ್ಳುವುದು ಅತ್ಯಂತ ತ್ರಾಸದಾಯಕ ಕೆಲಸ ಎಂದು ಚಿತ್ರನಟಿ ಶ್ವೇತಾ ಶ್ರೀವಾತ್ಸವ್ ಹೇಳಿದ್ದಾರೆ. ಸ್ಥೂಲಕಾಯ ಮತ್ತಿತರರೆ ಸಮಸ್ಯೆಗಳಿರುವವರಿಗೆ ಸಂತಾನ ಭಾಗ್ಯ ಕರುಣಿಸಲು ಓವಮ್ ಆಸ್ಪತ್ರೆಯಿಂದ ಕೆ.ಆರ್. ಪುರಂನ ಭಟ್ಟರಹಳ್ಳಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ, ಪರಿಣಿತ ವೈದ್ಯರನ್ನೊಳಗೊಂಡ ಫಲವತ್ತತೆ [ಫರ್ಟಿಲಿಟಿ ಸೆಂಟರ್] ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಕ್ಕಳನ್ನು ಹಡೆಯುವುದು ಇಂದಿನ ಯುಗದಲ್ಲಿ ಅಷ್ಟೊಂದು ಸುಲಭವಲ್ಲ. ಮಹಿಳೆಯರು, ಐಟಿ – ಬಿಟಿಯಲ್ಲಿ ಕೆಲಸ ಮಾಡುವವರು, ಗೃಹಿಣಿಯರು  ಒತ್ತಡ ಸೇರಿದಂತೆ ಸಾಕಷ್ಟು ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ಹೀಗಾಗಿ ಮಕ್ಕಳನ್ನು ಪಡೆಯಲು ಫಲವತ್ತತೆ ಕೇಂದ್ರಗಳು ಅತ್ಯಂತ  ಅಗತ್ಯವಾಗಿದೆ ಎಂದರು.

ಚಿಕಿತ್ಸೆಗೆ ನಂಬಿಕೆ ಅತ್ಯಂತ ಮುಖ್ಯವಾಗುತ್ತದೆ. ಮದುವೆಯಾದ ನಂತರ ಎಲ್ಲವೂ ಮುಗಿಯಿತು ಎನ್ನುವ ಮನಸ್ಥಿತಿಯಿಂದ ಗೃಹಿಣಿಯರು ಹೊರ ಬಂದು ಮಕ್ಕಳು, ಸಂಸಾರ, ಸಾಮಾಜಿಕ ಬದುಕಿನಲ್ಲಿ ಆತ್ಮವಿಶ್ವಾಸ ರೂಢಿಸಿಕೊಳ್ಳಬೇಕು. ಮದುವೆಯಾದ ನಂತರವೇ ಚಿತ್ರರಂಗಕ್ಕೆ ಬಂದು ನಟಿಯಾಗಿ ನಟನೆಯನ್ನು ಮುಂದುವರೆಸಿದ್ದೇನೆ. ತಮ್ಮ ಜೀವನ, ಎದುರಿಸಿದ ಸವಾಲುಗಳ ಕುರಿತಂತೆ ಪುಸ್ತಕವನ್ನು ಸಹ ಬರೆಯುತ್ತಿದ್ದೇನೆ ಎಂದು ಶ್ವೇತಾ ಶ್ರೀ ವಾಸ್ತವ್ ಹೇಳಿದರು.

ಓವಮ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಆದರ್ಶ್ ಸೋಮಶೇಖರ್ ಮಾತನಾಡಿ, ಶಿಶುವೈದ್ಯಕೀಯ ಮತ್ತು ಸ್ತ್ರೀರೋಗ ಶಾಸ್ತ್ರದ ಕ್ಷೇತ್ರದಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಅನುಭವ ಹೊಂದಿರುವ ನುರಿತ ವೈದ್ಯರನ್ನು ಆಸ್ಪತ್ರೆ ಹೊಂದಿದೆ. ರೋಗಿಗಳಿಗೆ ಕ್ಲಿನಿಕಲ್ ಶಿಷ್ಟಾಚಾರ, ಎಫ್‌ಡಿಎ ಮತ್ತು ಸಿಇ ಪ್ರಮಾಣೀಕೃತ ವೈದ್ಯಕೀಯ ಉಪಕರಣಗಳೊಂದಿಗೆ ಚಿಕಿತ್ಸೆಗೆ ಆಸ್ಪತ್ರೆ ಸನ್ನದ್ಧವಾಗಿದೆ ಎಂದು ಹೇಳಿದರು.

ಮರುಫಲವತ್ತತೆಯ ಔಷಧ ವಿಭಾಗದ ನಿರ್ದೇಶಕಿ ಡಾ. ಎಸ್.ಕೆ. ಚೈತ್ರ ಮಾತನಾಡಿ, ಸ್ಥೂಲಕಾಯ ಸಮಸ್ಯೆಯಿರುವವರಿಗೆ ದೇಹ ತೂಕ ಕಡಿಮೆ ಮಾಡಿಕೊಳ್ಳುವ ಜೊತೆಗೆ ಚಿಕಿತ್ಸೆಯನ್ನು ಮುಂದುವರೆಸಲಾಗುವುದು. ನಗರ ಮತ್ತು ಗ್ರಾಮೀಣ ಮಹಿಳೆಯರಲ್ಲಿ ವಿಭಿನ್ನ ಸಮಸ್ಯೆಗಳಿವೆ. ಫಲವತ್ತತೆಗೆ ನಗರ ಪ್ರದೇಶದಲ್ಲಿ ಮಾಲೀನ್ಯ, ಧೂಮಪಾನ ಹಾಗೂ ಗ್ರಾಮೀಣ ಭಾಗದಲ್ಲಿ ಕೃಷಿಗೆ ಬಳಸುವ ಕೀಟನಾಶಕಗಳಿಂದಲೂ ಸಮಸ್ಯೆಗಳು ಕಂಡು ಬರುತ್ತಿವೆ. ಹೀಗಾಗಿ ಪ್ರತಿಯೊಂದು ಪ್ರಕರಣದಲ್ಲೂ ಪ್ರತ್ಯೇಕ ಚಿಕಿತ್ಸೆ ಅಗತ್ಯವಾಗಿದೆ ಎಂದು ಹೇಳಿದರು. ಮರುಫಲವತ್ತತೆ ಔಷಧ ವಿಭಾಗದ ಸಮಾಲೋಚಕರಾದ ಡಾ. ಅರ್ಚನಾ ಕಾರ್ತಿಕ್ ಮಾತನಾಡಿ, ಮಕ್ಕಳನ್ನು ಪಡೆಯಲು ಮಹಿಳೆಯರಿಗೆ ಗರಿಷ್ಠ 35 ರಿಂದ 40 ವರ್ಷ ವಯೋಮಿತಿ ಇತ್ತು. ಆದರೆ ಇದೀಗ ಆಧುನಿಕ ತಂತ್ರಜ್ಞಾನದಿಂದಾಗಿ ಮುಟ್ಟು ನಿಂತ ಹಾಗೂ ಗರಿಷ್ಠ 53 ವರ್ಷದ ವರೆಗೆ ಮಹಿಳೆಯರು ಮಕ್ಕಳನ್ನು ಮಾಡಿಕೊಳ್ಳಬಹುದಾಗಿದೆ. ಪುರುಷರಿಗೆ 55 ವರ್ಷಗಳ ವರೆಗೆ ಫಲವತ್ತತೆ ಚಿಕಿತ್ಸೆ ನೀಡಬಹುದು ಎಂದರು. ಆಸ್ಪತ್ರೆಯಲ್ಲಿ ಎಲ್ಲಾ ವಯಸ್ಸಿನ ಮಹಿಳೆಯರಿಗೆ ತಜ್ಞರ ಮಾರ್ಗದರ್ಶನ ನೀಡುತ್ತಿದ್ದು, ಮಧ್ಯವಯಸ್ಸಿನ ಮಹಿಳೆಯರಿಗೆ ಋತುಬಂಧ, ಇನ್ನಿತರ ಸಮಸ್ಯೆಗಳಿದ್ದಲ್ಲಿ ಚಿಕಿತ್ಸೆ ನೀಡಲಾಗುವುದು. ಔಷಧ ತಜ್ಞರು ಭ್ರೂಣದ ಆರೈಕೆಗೆ ಸಮಗ್ರ ವಿಧಾನವನ್ನು ಒದಗಿಸಲಿದ್ದು, ಸುರಕ್ಷಿತ ಮತ್ತು ಆರೋಗ್ಯಕರ ಹೆರಿಗೆಯನ್ನು ಖಚಿತಪಡಿಸಿಕೊಳ್ಳಲು ಭ್ರೂಣದ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗುತ್ತಿದೆ.

ಹೆಚ್ಚಿನ ಮಾಹಿತಿಗೆ : www.ovmfertility.in

 

ದೂರವಾಣಿ ; 6364462133

Facebook
Twitter
LinkedIn
WhatsApp
Tumblr
Telegram
Email

Leave a Comment

Your email address will not be published. Required fields are marked *

Translate »
Scroll to Top