ಮೂರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ

ದೇವನಹಳ್ಳಿ, ಡಿ,28 : ಇಂದಿನ ಒತ್ತಡದ ಬದುಕಿನಲ್ಲಿ ಜನ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸದೇ ಕೆಲಸ ಹಾಗೂ ಹಣ ಸಂಪಾದನೆ ಮಾಡುವ ನಿಟ್ಟಿನಲ್ಲಿ ಆರೋಗ್ಯವನ್ನು ನಿರ್ಲಕ್ಷಿಸುತ್ತಿದ್ದಾರೆ. ಆರೋಗ್ಯಕ್ಕೆ ಮೊದಲ ಪ್ರಧಾನ್ಯತೆ ನೀಡಿ ಪ್ರತಿಯೊಬ್ಬರು ಮೂರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿದರೆ ಸ್ವಾಸ್ಥ್ಯ ಜೀವನ ನಡೆಸಬಹುದು ಎಂದು ವಿಜಯಪುರ ಪುರಸಭಾ ಅಧ್ಯಕ್ಷೆ ರಾಜೇಶ್ವರಿ ಭಾಸ್ಕರ್ ತಿಳಿಸಿದರು. ದೇವನಹಳ್ಳಿ ತಾಲ್ಲೂಕು ವಿಜಯಪುರ ಪಟ್ಟಣದ 15 ನೇ ವಾರ್ಡ್ ನ ಟಿಪ್ಪು ನಗರದ ಗುಲ್ಷನ್-ಇ-ಫಾತಿಮಾ ಮದರಸ ಶಾಲಾ ಆವರಣದಲ್ಲಿ ಪರಸಭಾ ಸದಸ್ಯೆ ತಾಜ್ ಉನ್ನೀಸಾ ಮಹಬೂಬ್ ಪಾಷಾರವರ ನೇತೃತ್ವದಲ್ಲಿ ದೇವನಹಳ್ಳಿಯ ನಕ್ಷತ್ರ ಆಸ್ಪತ್ರೆ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಭಾಗದ ಜನರು ದೂರದ ಆಸ್ಪತ್ರೆಗೆ ಹೋಗಿ ಆರೋಗ್ಯ ತಪಾಸಣೆ ಮಾಡಿಸಲು ನಿರ್ಲಕ್ಷ್ಯ ಮಾಡುತ್ತಾರೆ ಆದರೆ ತಮ್ಮ ವಾರ್ಡ್ ಗಳಲ್ಲಿ ಉಚಿತವಾಗಿ ಮಾಡುವಂತಹ ಆರೋಗ್ಯ ತಪಾಸಣೆಗಳ ಉಪಯೋಗ ಪಡೆದುಕೊಂಡು ಆರೋಗ್ಯವಂತರಾಗಿರಿ ಎಂದು ಸಲಹೆ ನೀಡಿದರು.

ವಿಜಯಪುರ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ನಾರಾಯಣಸ್ವಾಮಿ ಮಾತನಾಡಿ, ನಾವು ಸದಾ ಆರೋಗ್ಯವಂತರಾಗಿರಲು ದೈನಂದಿನ ಚಟುವಟಿಕೆಗಳಲ್ಲಿ ಸ್ವಲ್ಪ ಮಟ್ಟಿಗೆ ಬದಲಾವಣೆ ಮಾಡಿಕೊಂಡು ದಿನದಲ್ಲಿ ಒಂದು ತಾಸಾದರೂ ವ್ಯಾಯಾಮ, ವಾಕಿಂಗ್ ಮಾಡಿ ತಿನ್ನುವ ಆಹಾರ ಮಿತವಾಗಿದ್ದರೆ ಆರೋಗ್ಯ ಸುಧಾರಿಸಬಹುದು. ಇಲ್ಲಿ ಉಚಿತವಾಗಿ ಆರೋಗ್ಯ ತಪಾಸಣೆ ಮತ್ತು ಔಷಧಿಗಳನ್ನು ನೀಡುತ್ತಿದ್ದು ವಾರ್ಡ್ ಜನತೆ ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ವಿಜಯಪುರ ಪುರಸಭಾ ಉಪಾಧ್ಯಕ್ಷ ಕೇಶವಪ್ಪ, ಸದಸ್ಯರಾದ ನಂದಕುಮಾರ್, ಭೈರೇಗೌಡ, ಇಕ್ಬಾಲ್, ರಾಧಮ್ಮ ಪ್ರಕಾಶ್,ರವಿ,ರಾಮು,ವಿಮಲ ಬಸವರಾಜ್, ಜೆಡಿಎಸ್ ಟೌನ್ ಅಧ್ಯಕ್ಷ ಭಾಸ್ಕರ್, ವಿಜಯಪುರ ಎಂ.ಪಿ.ಸಿ.ಎಸ್ ಉಪಾಧ್ಯಕ್ಷ ಮನೋಹರ್, ಕೇಶವಪ್ಪ, ಮುಖಂಡರಾದ ಮುನಿವೀರಣ್ಣ, ಮುನಿರಾಜು, ಮದರಸಾ ಶಾಲೆಯ ಅಧ್ಯಕ್ಷ ಮೊಹಮದ್ ರಬ್, ಹಾಗೂ ನಕ್ಷತ್ರ ಆಸ್ಪತ್ರೆಯ ಡಾ.ಲಕ್ಷ್ಮಿ ಹಾಗೂ ವೈದ್ಯಕೀಯ ಸಿಬ್ಬಂದಿ ಇದ್ದರು.

Leave a Comment

Your email address will not be published. Required fields are marked *

Translate »
Scroll to Top