ಗುಜರಾತ್​ ಗೇಮ್ ಝೋನ್​ ಅಗ್ನಿ ದುರಂತ ಬೆನ್ನಲ್ಲೇ ಎಚ್ಚೆತ್ತ ‍ಸರ್ಕಾರ: ಕಟ್ಟೆಚ್ಚರ ವಹಿಸುವಂತೆ BBMPಗೆ ಸೂಚನೆ

ಬೆಂಗಳೂರು: ಗುಜರಾತ್ನಲ್ಲಿ ಶನಿವಾರಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಸಾವಿನ ಸಂಖ್ಯೆ ೩೫ಕ್ಕೆ ಆಗಿದ್ದು, ಘಟನೆ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಬೆಂಗಳೂರಿನ ಮಾಲ್ ಮತ್ತು ಗೇಮಿಂಗ್ ಝೋನ್ಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಬಿಬಿಎಂಪಿ ‌ಸೂಚನೆ ನೀಡಿದೆ.

ಈ ಕುರಿತಾಗಿ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಪತ್ರ ಬರೆದಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು, ಬೆಂಗಳೂರಿನಾದ್ಯಂತ ಶಾಪಿಂಗ್ ಮಾಲ್‌ಗಳು, ಗೇಮಿಂಗ್ ಮತ್ತು ಸಾಹಸ ವಲಯಗಳಂತಹ ಹೆಚ್ಚಾಗಿ ಜನದಟ್ಟಣೆ ಇರುವ ಮನರಂಜನಾ ಸ್ಥಳಗಳಲ್ಲಿ ಅಹಿತಕರ ಬೆಂಕಿ ಅನಾಹುತಗಳನ್ನು ತಡೆಗಟ್ಟಲು ಸೂಕ್ತವಾದ ಸುರಕ್ಷತಾ ಕ್ರಮಗಳು ಮತ್ತು ಮುನ್ನೆಚ್ಚರಿಕೆಗಳ ಅನುಸರಣೆ ಅತ್ಯಂತ ಮಹತ್ವದ್ದಾಗಿದೆ. ಅಗ್ನಿ ಅವಘಡಗಳನ್ನು ತಪ್ಪಿಸುವುದಕ್ಕಾಗಿ ನಿಯಮಿತ ತಪಾಸಣೆಗಳನ್ನು ಕಡ್ಡಾಯವಾಗಿ ಮಾಡುವುದರೊಂದಿಗೆ, ನಗರದಾದ್ಯಂತ ಮನರಂಜನಾ ಸ್ಥಳಗಳಲ್ಲಿ ಸುರಕ್ಷಿತ ಕ್ರಮಗಳನ್ನು ತ್ವರಿತವಾಗಿ ಅಳವಡಿಸುವಂತೆ ಸೂಚನೆ ನೀಡಿದ್ದಾರೆ.

ಗುಜರಾತ್‌ನ ರಾಜ್ ಕೋಟ್‌ನ ಮನರಂಜನಾ ಕೇಂದ್ರದಲ್ಲಿ (ಗೇಮ್ ರೋಝನ್) ಶನಿವಾರ ಸಂಜೆ ಸಂಭವಿಸಿದ ಅಗ್ನಿ ಅವಘಡ ಸಂಭವಿಸಿರುವುದು ವರದಿಯಾಗಿದ್ದು, ಇದು ಅತ್ಯಂತ ಕಳವಳಿಕಾರಿ ದರ‍್ಘಟನೆಯಾಗಿರುತ್ತದೆ. ಈ ದುರಂತವು ಎಲ್ಲರಿಗೂ ಎಚ್ಚರಿಕೆಯ ಗಂಟೆಯಾಗಿದ್ದು, ಬೆಂಗಳೂರಿನ ಹಲವು ಪ್ರತಿಷ್ಠಿತ ಮಾಲ್‌ಗಳಲ್ಲಿ ಮತ್ತು ಇತರೆ ಸ್ಥಳಗಳಲ್ಲಿ ಗೇಮ್ ಝನ್ ಹಾಗೂ ಸಾಹಸ ಕ್ರೀಡೆಗಳನ್ನು ನಡೆಸಲು ಅನುಮತಿ ನೀಡಲಾಗಿದ್ದು, ಇಂತಹ ಮನರಂಜನಾ ಕೇಂದ್ರಗಳು / ಗೇಮ್ ಜೋನ್‌ಗಳಲ್ಲಿ ಅಗತ್ಯ ಮುಂಜಾಗ್ರತಾ ಕ್ರಮವಹಿಸಬೇಕಿದೆ.

 

ಮಜನರಂಜನಾ ಕೇಂದ್ರ, ಗೇಮಿಂಗ್ ರೋಝನ್ಗಳಿರುವ ಪ್ರದೇಶದಲ್ಲಿ ಅಗ್ನಿದುರಂತ ಸೇರಿದಂತೆ ಯಾವುದೇ ಅನಾಹುತ ಸಂಭವಿಸದ ರೀತಿಯಲ್ಲಿ ಸೂಕ್ತ ಕ್ರಮ ಕೈಗೊಂಡು, ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆಯೇ ಎಂದು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಲು ಮತ್ತು ಈಗಾಗಲೇ ವಿಧಿಸಲಾಗಿರುವ ರಕ್ಷಣಾ ನಿಯಮ ಮತ್ತು ನಿಬರ್ಂಧಗಳನ್ನು ಪಾಲನೆ ಮಾಡಲಾಗುತ್ತಿದೆಯೇ ಎಂದು ಪರಿಶೀಲಿಸಲು ತಿಳಿಸುತ್ತಾ, ಯಾವುದೇ ದರ‍್ಘಟನೆಗಳು ಸಂಭವಿಸದಂತೆ ಕ್ರಮವಹಿಸಲು ಸೂಚಿಸಿದ್ದಾರೆ.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top