ಸರಕಾರಿ ಜಮೀನಿನಲ್ಲಿ ಕೃಷಿ ಹೊಂಡಗಳ ನಿರ್ಮಾಣ ಬಾರಿ ಪ್ರಮಾಣದಲ್ಲಿ ಭ್ರಷ್ಟಾಚಾರ ತನಿಕೆ ಮಾಡುವಂತೆ ಕರವೆ ಕಾರ್ಯಕರ್ತರಿಂದ ಆಗ್ರಹ

ಕುಷ್ಟಗಿ:- ಕೊಪ್ಪಳ ಜಿಲ್ಲೆ ಕುಷ್ಟಗಿ ಕೃಷಿ ಇಲಾಖೆಯಲ್ಲಿ ಮಾಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೃಷಿ ಹೊಂಡಗಳನ್ನು ನಿರ್ಮಾಣ ಮಾಡಲಾಗಿದೆ ಆದರೆ ಅಪೂರ್ತಿ ಮಾಡಿದ್ದಾರೆ ಹಾಗೂ ಹೆಚ್ಚಾನು ಹೆಚ್ಚು ಸರಕಾರಿ ಜಮೀನುಗಳಲ್ಲಿ ಕೃಷಿ ಹೊಂಡಗಳನ್ನು ನಿರ್ಮಾಣ ಮಾಡಲಾಗಿದೆ ಆದರೆ ಬಾರಿ ಭ್ರಷ್ಟಾಚಾರ ನೆಡೆದಿದ್ದು ಮೇಲಾಧಿಕಾರಿಗಳು ತನಿಕೆ ನೆಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕ‌ರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ತಾಲೂಕು ಪಂಚಾಯತಿ ಇಒ ಜಯರಾಂ ಚವ್ಹಾಣ ಇವರಿಗೆ ಮನವಿ ಪತ್ರ ಸಲ್ಲಿಸಿದರು.

ಕೃಷಿ ಇಲಾಖೆಯಲ್ಲಿ 2021-22 ನೇ ಸಾಲಿನಲ್ಲಿ ಕೃಷಿ ಹೊಂಡ ಕಾಮಗಾರಿಗಳು ನಡೆದಿದ್ದು, ಸುಮಾರು 800ಕ್ಕೂ ಅಧಿಕ ಕೃಷಿ ಹೊಂಡ ಕಾಮಗಾರಿಗಳು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ನಡೆದಿದ್ದು ಸದರಿ ಕಾಮಗಾರಿಗಳು ಕೇವಲ 180 ದಿನಗಳಲ್ಲಿ 800ಕ್ಕೂ ಹೆಚ್ಚು ಕೃಷಿ ಹೊಂಡಗಳನ್ನು ಕೂಲಿ ಕಾರ್ಮಿಕರಿಂದ ತೆಗೆಸದೆ ಯಂತ್ರೋಪಕರಣದಿಂದ ತೆಗೆಸಲಾಗಿದೆ ಈ ಕಾಮಗಾರಿಗಳನ್ನು GPS ಮಾಡಿದ ಸ್ಥಳದಲ್ಲಿ ಮಾಡಿರುವುದಿಲ್ಲ. ಅನಧಿಕೃತ ಜಮೀನಿನಲ್ಲಿ ಮತ್ತು ಸರಕಾರಿ ಜಮೀನು ಹಳ್ಳದ ಬದಿಯಲ್ಲಿ ಕಾಮಗಾರಿ ಮಾಡಿದ್ದು, ಶೇಕಡ 50% ರಷ್ಟು ಕಾಮಗಾರಿಗಳನ್ನು ಯಾವುದೇ ರೀತಿಯ ದಾಖಲಾತಿಯಿಲ್ಲದೆ ವರ್ಕಕೋಡ್ ಹಾಕಿ ಬೋಗಸ್, ಕಾಮಗಾರಿ ಮಾಡಿರಬಹುದು ಎನ್ನುವ ನಿರೀಕ್ಷೆ ಇರುವ ಕಾರಣ ಯಂತ್ರೋಪಕರಣಗಳನ್ನು ಬಳಸಿರುವುದರ ಬಗ್ಗೆ ಮತ್ತು GPS ಆದ ದಾಖಲೆಗಳನ್ನು ಪರಿಶೀಲಿಸಿದ ನಂತರ ಕೂಲಿ ಕಾರ್ಮಿಕರ ಹಣ ಸಂದಾಯ ಮಾಡಬೇಕು. ಈ ವ್ಯವಹಾರದಲ್ಲಿ ಭಾಗಿಯಾದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಂಡು ಅವರನ್ನು ಕೆಲಸದಿಂದ ವಜಾಗೊಳಿಸಬೇಕೆಂದು ಮೇಲಾಧಿಕಾರಿಗಳಿಗೆ ಶಿಫಾರಸ್ಸು ಮಾಡಬೇಕು. ಇಲ್ಲವಾದಲ್ಲಿ ಸಂಘಟನೆಯ ಮುಖಾಂತರ ಕೃಷಿ ಇಲಾಖೆಗೆ ಮುತ್ತಿಗೆ ಹಾಕಿ ಉಗ್ರವಾದ ಹೋರಾಟವನ್ನು ಮಾಡಲಾಗುತ್ತದೆ ಎಂದು ಹೇಳಿದರು. ಮನವಿ ಪತ್ರವನ್ನು ಸ್ವೀಕರಿಸಿ ಮಾತನಾಡಿದ ತಾಲೂಕು ಪಂಚಾಯತ ಅಧಿಕಾರಿ ಜಯರಾಂ ಚವ್ಹಾಣ ತಕ್ಷಣ ಮೇಲಾಧಿಕಾರಿಗಳ ಗಮನಕ್ಕೆ ತಂದು ಸೂಕ್ತ ತನಿಕೆ ನೆಡೆಸಿ ತಪ್ಪು ಮಾಡಿದವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಉತ್ತರ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಶಿವಕುಮಾರ ಕಟ್ಟಿಮನಿ, ತಾಲೂಕು ಅಧ್ಯಕ್ಷ ಮಂಜುನಾಥ ಪರಕಿ, ಜಿಲ್ಲಾ ಸಂಚಾಲಕ ಅಂಜಿದುರ್ಗಾ, ಜಿಲ್ಲಾ ಅಧ್ಯಕ್ಷ ಬಸವರಾಜ ಹಳ್ಳಿ ಸೇರಿದಂತೆ ಹಲವಾರರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

Translate »
Scroll to Top