ಬಳ್ಳಾರಿ: ಮೂರು ಬೃಹತ್ ಉಕ್ಕು ಕಾರ್ಖಾನೆಗಳು ಸ್ಥಾಪನೆಯಾಗುತ್ತವೆ ಎಂದು ನಂಬಿ ಸಹಸ್ರಾರು ಎಕರೆ ಜಮೀನು ನೀಡಿ 16 ವರ್ಷಗಳಾಗಿದ್ದರೂ, ಯಾವೊಂದೂ ಕಾರ್ಖಾನೆ ಪ್ರಾರಂಭಿಸಲಿಲ್ಲವಾದ್ದರಿAದ, ರೈತರಿಗೆ ಭೂಮಿ ವಾಪಸ್ಸು ನೀಡಬೇಕು, ಮೋಸದ ಬೆಲೆ ರದ್ದುಪಡಿಸಿ, ಕೋರ್ಟ್ ಆ ದೇಶದಂತೆ ನ್ಯಾಯೋಚಿತ ಬೆಲೆ (ಪರಿಹಾರ) ಕೊಡಬೇಕು ಹಾಗೂ ಮುಖ್ಯವಾಗಿ ಮಿತ್ತಲ್ ಸಂಸ್ಥೆಗಾಗಿ ವಶಪಡಿಸಿಕೊಂಡಿರುವ ಜಮೀನನ್ನು, ಜಿಂದಾಲ್ ಸೇರಿದಂತೆ ಬೇರಾವುದೇ ಕಂಪನಿಗಳಿಗೂ ಪರಭಾರೆ ಮಾಡಬಾರದು ಎಂದು ಒತ್ತಾಯಿಸಿ ಭೂ ಸಂತ್ರಸ್ಥ ರೈತರ ಹೋರಾಟ ಸಮಿತಿಯು ನಡೆಸಿರುವ ಅನಿರ್ದಿಷ್ಟಾವಧಿ ಧರಣಿ-ಸತ್ಯಾಗ್ರಹವು ಇಂದು 1,241ನೇ ದಿನಕ್ಕೆ ಕಾಲಿಟ್ಟಿತು.
ಹೋರಾಟವನ್ನು ತೀವ್ರಗೊಳಿಸುವ ನಿಟ್ಟಿನಲ್ಲಿ ಇಂದು ಸಭೆ ಸೇರಿದ ಸಮಿತಿಯ ಮುಖಂಡರು ಮುಂದಿನ ಚಳುವಳಿ, ಹೋರಾಟದ ವಿಸ್ತಾರ, ಕಾನೂನು ಹೋರಾಟದ ಬಗ್ಗೆ ಚರ್ಚಿಸಿದರಲ್ಲದೇ, ಮೇ.12ರಿಂದ ಕುಡತಿನಿಯ ಹೋರಾಟದ ಸ್ಥಳದಲ್ಲಿಯೇ ಸರದಿ ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧಾರ ಕೈಗೊಂಡಿದ್ದಾರೆ.
ಮೇ.12ರಿAದ 20ರವರೆಗೆ ಪ್ರತಿನಿತ್ಯ ಸರದಿ ಉಪವಾಸ ಸತ್ಯಾಗ್ರಹ ನಡೆಸಲು, ಪ್ರತಿಯೊಂದು ದಿನ ಒಂದೊAದು ಸಂಘಟನೆಗಳ ಮುಖಂಡರು ಸತ್ಯಾಗ್ರಹದಲ್ಲಿ ಭಾಗವಹಿಸಲು ತೀರ್ಮಾನಿಸಲಾಗಿದೆ. ಮೇ.12 ರಂದು ಹೋರಾಟ ಸಮಿತಿ ಮುಖಂಡರು, 13ಕ್ಕೆ ಹರಗಿನಡೋಣಿ ರೈತರು, 14 ರಂದು ಜಾನೆಕುಂಟೆ ರೈತರು, ಮೇ.15ಕ್ಕೆ ವೇಣಿ ವೀರಾಪುರ ರೈತರು, 16ರಂದು ಸಿದ್ದಮ್ಮನಹಳ್ಳಿ, ರ‍್ರಂಗಳಿ, ಕೊಳಗಲ್ಲು ಗ್ರಾಮಗಳ ರೈತರು, 17ಕ್ಕೆ ಸಿಐಟಿಯು ಜಿಲ್ಲಾ ಪದಾಧಿಕಾರಿಗಳು, 18 ರಂದು ಕೆಪಿಆರ್‌ಎಸ್ ಪದಾಧಿಕಾರಿಗಳು, ಮೇ. 19ರಂದು ದೇವದಾಸಿ ವಿಮೋಚನಾ ಸಂಘದ ಪದಾಧಿಕಾರಿಗಳು, ಮೇ. 20ಕ್ಕೆ ಕುಡತಿನಿಯ ಪ್ರಗತಿ ಪರ ರಕ್ಷಣಾ ವೇದಿಕೆ ಮುಖಂಡರು ಸತ್ಯಾಗ್ರಹದಲ್ಲಿ ಭಾಗವಹಿಸಲಿದ್ದಾರೆ ಎಂದು ಹೋರಾಟ ಸಮಿತಿಯು ತಿಳಿಸಿದೆ.
ಅನಿರ್ದಿಷ್ಟ ಹೋರಾಟದ ಜೊತೆ-ಜೊತೆಯಲ್ಲಿಯೇ ಸರದಿ ಉಪಾವಾಸ ಸತ್ಯಾಗ್ರಹವೂ ನಡೆಯಲಿದೆ. ಉಪವಾಸ ಸತ್ಯಾಗ್ರಹವು ಬೆಳಿಗ್ಗೆ 10 ಗಂಟೆಯಿAದ ಮರುದಿನ ಬೆಳಿಗ್ಗೆ 10 ಗಂಟೆಯವರೆಗೆ ನಡೆಯಲಿದೆ. ಕೇಂದ್ರ ಸರ್ಕಾರಿ ಸ್ವಾಮ್ಯದ ಎನ್‌ಎಂಡಿಸಿ, ಖಾಸಗೀ ವಲಯದ ಮಿತ್ತಲ್, ಬ್ರಹ್ಮಿಣಿ (ಉತ್ತಮ್‌ಗಾಲ್ವಾ) ಕಂಪನಿಗಳ ಉಕ್ಕು ಕಾರ್ಖಾನೆಗಳ ಸ್ಥಾಪನೆಗಾಗಿ ಕರ್ನಾಟಕ ಸರ್ಕಾರವು ಬಳ್ಳಾರಿ ಜಿಲ್ಲಾ ರೈತರಿಂದ ಸಹಸ್ರಾರು ಎಕರೆ ಜಮೀನು ಸ್ವಾಧೀನಪಡಿಸಿಕೊಂಡಿದ್ದುದನ್ನು ಸ್ಮರಿಸಬಹುದು.
ಮೇ.12ರಿಂದ ಭೂ ಸಂತ್ರಸ್ಥ ರೈತರ ಸರದಿ ಉಪವಾಸ ಸತ್ಯಾಗ್ರಹ



