ಬಜೆಟ್ ನಲ್ಲಿ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್: ಕೆ ವಿ ಪ್ರಭಾಕರ್ ಅವರಿಗೆ ವಿಪ್ರ ಪತ್ರಕರ್ತರಿಂದ ಸನ್ಮಾನ

ಪತ್ರಕರ್ತರ ಸಮಸ್ಯೆಗಳಿಗೆ  ಸ್ಪಂದಿಸಲು ಸದಾ ಸಿದ್ದ : ಕೆ ವಿ ಪ್ರಭಾಕರ್

ಬೆಂಗಳೂರು : ಪತ್ರಕರ್ತರು ಮತ್ತು ಪತ್ರಿಕೆಗೆ ಸಂಬಂಧಿಸಿದ ಯಾವುದೇ ವೃತ್ತಿಯ ಸಮಸ್ಯೆಗಳಿದ್ದರೂ ಕೂಡ ನಾನು ಸ್ಪಂದಿಸಲು ಸದಾ ಸಿದ್ದ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ ವಿ ಪ್ರಭಾಕರ್  ಪುನರುಚ್ಚರಿಸಿದರು.

 

ಬೆಂಗಳೂರಿನ ಗಾಂಧಿಭವನದಲ್ಲಿ ನಡೆದ  ವಿಪ್ರ ಪತ್ರಕರ್ತರ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಸಣ್ಣ ಪತ್ರಿಕೆಗಳ ಸಮಸ್ಯೆ ಕುರಿತು ನನಗೆ ಅರಿವಿದೆ. ನಾನೂ ಕೂಡ  ಪೇಪರ್ ಹಾಕುವ ಕೆಲಸ ಮಾಡಿಕೊಂಡು ತಳಮಟ್ಟದಿಂದ ಈ ಸ್ಥಾನದವರೆಗೂ ಬಂದಿದ್ದೇನೆ.  ಸ್ಥಳೀಯ ಪತ್ರಿಕೆಗಳಲ್ಲಿ ಕೆಲಸ ಮಾಡಿದ ಅನುಭವವೂ ನನಗಿದೆ. ಹೀಗಾಗಿ ಪತ್ರಿಕೆಗಳ ಮತ್ತು ಪತ್ರಕರ್ತರ ವೃತ್ತಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ನ್ಯಾಯವಾಗಿ  ಸ್ಪಂದಿಸಲು ಪ್ರಯತ್ನಿಸುತ್ತಿದ್ದೇವೆ ಎಂದರು.

ಪತ್ರಿಕೆಗಳ ಜಾಹೀರಾತು ದರ ಪರಿಸ್ಕರಣೆ ಕುರಿತು ಈಗಾಗಲೇ ಇಲಾಖೆಯ ಕಾರ್ಯದರ್ಶಿ ಹಾಗೂ ಆಯುಕ್ತರೊಂದಿಗೆ ಚರ್ಚಿಸಲಾಗಿದೆ.   ಸಕಾರತ್ಮಕವಾಗಿ ಸ್ಪಂದನೆ ಸಿಕ್ಕಿದೆ ಎಂದರು.

 

ಡಿಜಿಟಲ್ ಮಾಧ್ಯಮಗಳಿಗೂ ಜಾಹಿರಾತು ನೀತಿಯ ಕರಡು ಸಿದ್ದಗೊಳ್ಳುತ್ತಿದೆ.  ಶೀಘ್ರದಲ್ಲಿ ಅದು ಕೂಡ ಜಾರಿಗೆ ಬರುವ ವಿಶ್ವಾಸ ವ್ಯಕ್ತಪಡಿಸಿದರು. 

ಬ್ರಾಹ್ಮಣ ಸಮಾಜದ ಪತ್ರಿಕೆಗಳಿಗೆ  ಜಾಹೀರಾತು ಕೊಡುವಲ್ಲಿ ಉಂಟಾಗಿದ್ದ ತಾಂತ್ರಿಕ ಸಮಸ್ಯೆಗಳನ್ನು ನೀಗಿಸಿದ್ದಕ್ಕಾಗಿ ಇದೇ ಸಂದರ್ಭದಲ್ಲಿ ಸಮುದಾಯದ ಪತ್ರಕರ್ತರು ಕೆ.ವಿ.ಪ್ರಭಾಕರ್ ಅವರನ್ನು ಸನ್ಮಾನಿಸಿದರು.

 ಇದೇ ಸಂದರ್ಭದಲ್ಲಿ  ಮಾಧ್ಯಮ ಸಲಹೆಗಾರರ ವಿಶೇಷಾಧಿಕಾರಿ ಕೆ ಪಿ ಪುಟ್ಟಸ್ವಾಮಯ್ಯ ಅವರನ್ನೂ ವಿಪ್ರ ಸಂಘದಿಂದ ಅಭಿನಂದಿಸಲಾಯಿತು.

 

ಈ ಸಂದರ್ಭದಲ್ಲಿ  ಕೋಲಾರವಾಣಿಯ ಮುರಳಿಪ್ರಸಾದ್, ಕರಾವಳಿ ಅಲೆ ರೋಹಿಣಿ ಸೀತಾರಾಮ್ ಕೋಲಾರವಾಣಿಯ ಅನುಸೂಯ ಎನ್ ಮೂರ್ತಿಸಂಜೆ ಸಮಯ ಅನಿಲ್ ಕುಮಾರ್ಹನುಮೇಶ್ ಯಾವಗಲ್. ಮುಂತಾದವರು ಭಾಗವಹಿಸಿದ್ದರು.

Facebook
Twitter
LinkedIn
Telegram
Email
Print
WhatsApp

Leave a Comment

Your email address will not be published. Required fields are marked *

Translate »
Scroll to Top