10, 12  ನೇ ತರಗತಿ ಫಲಿತಾಂಶದಲ್ಲಿ ಬೆಂಗಳೂರಿಗೆ ನಾಲ್ಕನೇ ಸ್ಥಾನ

ಬೆಂಗಳೂರು: ಸೆಂಟ್ರಲ್ ಬರ‍್ಡ್ ಆಫ್ ಸೆಕೆಂಡರಿ ಎಜುಕೇಶನ್ 12  ಮತ್ತು 10ನೇ ತರಗತಿಯ ಪರೀಕ್ಷಾ ಫಲಿತಾಂಶಗಳನ್ನು ಪ್ರಕಟಿಸಿದ್ದು, ಬೆಂಗಳೂರು ನಾಲ್ಕನೇ ಸ್ಥಾನ ಪಡೆದುಕೊಂಡಿದೆ.

ರಾಜಧಾನಿ ಬೆಂಗಳೂರಿನಲ್ಲಿ 12ನೇ ತರಗತಿಯ ವಿದ್ಯರ‍್ಥಿಗಳ ಉತ್ತರ‍್ಣ ಪ್ರಮಾಣವು ಶೇಕಡಾ 87.98 ಮತ್ತು 10 ನೇ ತರಗತಿಯ ಉತ್ತರ‍್ಣ ಶೇಕಡಾ 93.60 ಆಗಿದೆ. ದೇಶದ 17 ಪ್ರಾಂತ್ಯಗಳಲ್ಲಿ ಬೆಂಗಳೂರು 12 ನೇ ತರಗತಿ ಪರೀಕ್ಷೆಯಲ್ಲಿ ಶೇಕಡಾ 96.95 ರಷ್ಟು ಉತ್ತರ‍್ಣರಾಗುವುದರೊಂದಿಗೆ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದ್ದರೆ, ತಿರುವನಂತಪುರವು ಅತ್ಯಧಿಕ ಶೇಕಡಾ 99.91 ನ್ನು ದಾಖಲಿಸಿದೆ.

12ನೇ ತರಗತಿ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ 16.33 ಲಕ್ಷ ವಿದ್ಯರ‍್ಥಿಗಳ ಪೈಕಿ 16.21 ಲಕ್ಷ ವಿದ್ಯರ‍್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 14.26 ಲಕ್ಷ ವಿದ್ಯರ‍್ಥಿಗಳು ಉತ್ತರ‍್ಣರಾಗಿದ್ದಾರೆ. ಮತ್ತೆ, ಬಾಲಕರಿಗಿಂತ ಬಾಲಕಿಯರೇ ಪರೀಕ್ಷೆಯಲ್ಲಿ ಉತ್ತಮ ಪ್ರರ‍್ಶನ ನೀಡಿದ್ದಾರೆ. ಪರೀಕ್ಷೆಯಲ್ಲಿ ಉತ್ತರ‍್ಣದಲ್ಲಿ ಬಾಲಕರು ಶೇಕಡಾ 85.12 ಕ್ಕೆ ಹೋಲಿಸಿದರೆ ಬಾಲಕಿಯರು ಶೇಕಡಾ 91.52 ಶೇಕಡಾವನ್ನು ದಾಖಲಿಸಿದ್ದಾರೆ. ಒಟ್ಟಾರೆಯಾಗಿ, 1.16 ಲಕ್ಷ ವಿದ್ಯರ‍್ಥಿಗಳು ಶೇಕಡಾ ೯೦ರಷ್ಟು ಮತ್ತು ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸಿದರೆ, 24,068 ರಷ್ಟು ವಿದ್ಯರ‍್ಥಿಗಳು ಶೇಕಡಾ ೯೫ ಮತ್ತು ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸಿದ್ದಾರೆ.

10ನೇ ತರಗತಿ ಪರೀಕ್ಷೆಯಲ್ಲಿ ಬೆಂಗಳೂರಿನ ವಿದ್ಯರ‍್ಥಿಗಳು ಶೇ 99.26 ರಷ್ಟು ಉತ್ತರ‍್ಣರಾಗುವ ಮೂಲಕ ನಾಲ್ಕನೇ ಸ್ಥಾನ ಗಳಿಸಿದೆ. ಇಲ್ಲಿಯೂ ಬಾಲಕರಿಗಿಂತ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಬಾಲಕಿಯರ 92.71 ಕ್ಕೆ ಹೋಲಿಸಿದರೆ ಹುಡುಗಿಯರು 94.75 ಶೇಕಡಾವನ್ನು ದಾಖಲಿಸಿದ್ದಾರೆ.

ವಿದ್ಯರ‍್ಥಿಗಳಲ್ಲಿ ಕೀಳರಿಮೆ ಅಥವಾ ಹೋಲಿಕೆ ಬರಬಾರದು ಎಂದು CBSE ಯಾವುದೇ ಮೆರಿಟ್ ಪಟ್ಟಿಯನ್ನು ಬಿಡುಗಡೆ ಮಾಡುವುದನ್ನು ಅಥವಾ ವಿದ್ಯರ‍್ಥಿಗಳಿಗೆ ಪ್ರಥಮ, ದ್ವಿತೀಯ, ಅಥವಾ ಮೂರನೇ ಸ್ಥಾನ ನೀಡುವುದನ್ನು ತಡೆಯುತ್ತದೆ. ಆದಾಗ್ಯೂ, ಮಂಡಳಿಯು ಅತ್ಯಧಿಕ ಅಂಕಗಳನ್ನು ಗಳಿಸಿದ್ದಕ್ಕಾಗಿ ಮೆರಿಟ್ ಪ್ರಮಾಣಪತ್ರಗಳನ್ನು ನೀಡುವ ಮೂಲಕ ಉನ್ನತ ಶೇಕಡಾ 0.1 ವಿದ್ಯರ‍್ಥಿಗಳನ್ನು ಗುರುತಿಸಿದೆ. ಈ ಪ್ರಮಾಣಪತ್ರಗಳನ್ನು ವಿದ್ಯರ‍್ಥಿಗಳ ಡಿಜಿ-ಲಾಕರ್ ಖಾತೆಗಳಿಂದ ತೆಗೆದುಕೊಳ್ಳಬಹುದು.

ಅಂಕಗಳನ್ನು ಪರಿಶೀಲಿಸಲು, ವಿದ್ಯರ‍್ಥಿಗಳು ತಮ್ಮ ಉತ್ತರ ಪುಸ್ತಕಗಳ ಪ್ರತಿಗಾಗಿ (ಸ್ಕ್ಯಾನ್ ಮಾಡಿದ ಪ್ರತಿಗಳು) ರ‍್ಜಿ ಸಲ್ಲಿಸಬಹುದು. ಫಲಿತಾಂಶಗಳಿಂದ ಅತೃಪ್ತರಾಗಿದ್ದರೆ, ಮರು-ಮೌಲ್ಯಮಾಪನಕ್ಕೆ ರ‍್ಜಿ ಸಲ್ಲಿಸಬಹುದು.

 

ಈ ಆಯ್ಕೆಗಳು ಆನ್‌ಲೈನ್‌ನಲ್ಲಿ ಮಾತ್ರ ಲಭ್ಯವಿದೆ. ಈ ಕುರಿತು ಮಂಡಳಿಯು ಶೀಘ್ರದಲ್ಲೇ ಸುತ್ತೋಲೆ ಹೊರಡಿಸಲಿದೆ.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top