ಸಾಂಪ್ರದಾಯಿಕ ಕುಸ್ತಿ ಉತ್ತೇಜಿಸಲು ಭಾರತೀಯ ಶೈಲಿಯ ಕರ್ನಾಟಕ ಕುಸ್ತಿ ಸಂಘ ಅಸ್ತಿತ್ವಕ್ಕೆ

ಗೌರವ ಅಧ್ಯಕ್ಷರಾಗಿ ಎಂ. ರುದ್ರೇಶ್, ಅಧ್ಯಕ್ಷರಾಗಿ ದಾವಣಗೆರೆಯ ಬಿ. ವೀರಣ್ಣ ನೇಮಕ

ಬೆಂಗಳೂರು : ರಾಜ್ಯದಲ್ಲಿ ಸಾಂಪ್ರದಾಯಿಕ ಕುಸ್ತಿಯನ್ನು ಉತ್ತೇಜಿಸಿ ಪ್ರೋತ್ಸಾಹಿಸಲು ಭಾರತೀಯ ಶೈಲಿಯ ಕರ್ನಾಟಕ ಕುಸ್ತಿ ಸಂಘ ಅಸ್ತಿತ್ವಕ್ಕೆ ಬಂದಿದೆ.

ಕುಸ್ತಿಗೆ ಮತ್ತೊಂದು ಹೆಸರಾದ ಕರ್ನಾಟಕದಲ್ಲಿ ಮಣ್ಣಿನ ಕುಸ್ತಿಗೆ ಒತ್ತು ನೀಡುವ ಉದ್ದೇಶದಿಂದ ಭಾರತೀಯ ಶೈಲಿ ಕುಸ್ತಿ ಮಹಾ ಸಂಘದ ಸರ್ವ ಸದಸ್ಯರ ಸಭೆಯಲ್ಲಿ  ರಾಜ್ಯದ ಕುಸ್ತಿ ಸಂಘಕ್ಕೆ ಮಾನ್ಯತೆ ನೀಡಿದೆ.

ಸುದ್ದಿಗೋಷ್ಠಿಯಲ್ಲಿ ರಾಷ್ಟ್ರೀಯ ಸಂಘದ ಸಂಚಾಲಕರು ಮತ್ತು ಪ್ರಧಾನ ಕಾರ್ಯ ಗೌರವ್‌ ರೋಷನ್ ಲಾಲ್ ಅವರು ರಾಜ್ಯ ಸಂಘಕ್ಕೆ ಮಾನ್ಯತೆ ನೀಡಿದರು.

 

ನೂತನ ಗೌರವಾಧ್ಯಕ್ಷ ಎಂ. ರುದ್ರೇಶ್‌ ಮಾತನಾಡಿ, ಈ ಹಿಂದೆ ರಾಜ್ಯದ ಕುಸ್ತಿ ಸಂಘಕ್ಕೆ ನೀಡಿದ್ದ ಮಾನ್ಯತೆಯನ್ನು ಭಾರತೀಯ ಶೈಲಿಯ ಸಂಘ ಅನರ್ಹತೆಗೊಳಿಸಿತ್ತು. ಈಗ ಹೊಸ ಸಂಘಕ್ಕೆ ಅವಕಾಶ ಕಲ್ಪಿಸಿದ್ದು, ಕರ್ನಾಟಕದ ಎಲ್ಲಾ ಜಿಲ್ಲೆಗಳನ್ನು ಒಗ್ಗೂಡಿಸಿ ಸಂಘ ಸ್ಥಾಪನೆ ಮಾಡಿರುವುದು ಉತ್ತಮ ಬೆಳವಣಿಗೆ ಎಂದರು.

ನೂತನ ಪದಾಧಿಕಾರಿಗಳು :

ಬೆಂಗಳೂರಿನ ಎಂ. ರುದ್ರೇಶ್‌ ಗೌರವ ಅಧ್ಯಕ್ಷರಾಗಿದ್ದು, ಮಂಗಳೂರಿನ ಸುರೇಶ್‌ ಚಂದ್ರ ಶೆಟ್ಟಿ ಹಿರಿಯ ಉಪಾಧ್ಯಕ್ಷ, ದಾವಣಗೆರೆಯ ಬಿ. ವೀರಣ್ಣ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ರಾಮನಗರದ ಕೆ.ಎನ್.‌ ವಿಜಯ ಕುಮಾರ್‌ ಪ್ರಧಾನ ಕಾರ್ಯದರ್ಶಿ, ಕಾರ್ಯಾಧ್ಯಕ್ಷರಾಗಿ ಮೈಸೂರಿನ ಅಮೃತ್‌ ಪುರೋಹಿತ್‌, ಬೆಳಗಾವಿಯ ಹನುಮಂತಪ್ಪ ಮಲಹರಿ ಗುರವ್‌, ಧಾರವಾಡದ ಅಶೋಕ್‌ ಏಣಗಿ, ಬಾಗಲಕೋಟೆಯ ಮಂಜು ಮಾನೆ ಅವರನ್ನು ಉಪಾಧ್ಯಕ್ಷರಾಗಿ, ಬೆಂಗಳೂರಿನ ಎಸ್. ನಾಗರಾಜ್‌, ಬೆಳಗಾವಿಯ ಪ್ರದೀಪ್‌ ದೇಸಾಯಿ, ಮೈಸೂರಿನ ವಿಜಯೇಂದ್ರ ಅವರನ್ನು ಜಂಟಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲಿದ್ದಾರೆ

 

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮೈಸೂರಿನ ಮೊಹಮದ್‌ ಖಾಸೀಂ, ತುಮಕೂರಿನ ಸೋಲಮನ್‌ ವಿಕ್ಟರ್‌, ಚಿತ್ರದುರ್ಗದ ಭರತ್‌ ಕೆ, ಕೋಲಾರದ ವಿ. ಪ್ರಕಾಶ್‌, ಚಾಮರಾಜನಗರದ ದಿಲೀಪ ಎಸ್‌, ಧಾರವಾಡದ ವಿರೂಪಾಕ್ಷಿ ಉಳುವಪ್ಪ ಹುರಕಡ್ಲಿ, ಬೆಳಗಾವಿಯ ಮೋನಪ್ಪ ಭಾಸ್ಕಲ್‌, ತುಮಕೂರಿನ ಎಚ್.ಎನ್.‌ ದೀಪಕ್‌ ಹಾಗೂ ಸಲಹೆಗಾರರನ್ನಾಗಿ ಮೈಸೂರಿನ ಡಿ.ವಿ. ಪ್ರಹ್ಲಾದ್‌ ರಾವ್‌ ಅವರನ್ನು ನೇಮಿಸಲಾಗಿದೆ.

Facebook
Twitter
LinkedIn
WhatsApp
Telegram
Email
Tumblr

Leave a Comment

Your email address will not be published. Required fields are marked *

Translate »
Scroll to Top