ಕೊಪ್ಪಳ,: ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ಇನ್ನರ್ ವೀಲ್ ಕ್ಲಬ್ ಹಾಗೂ ಸರಕಾರಿ ಬಾಲಕಿಯರ ಪ್ರೌಢಶಾಲೆ ಇವರ ಸಹಯೋಗದಲ್ಲಿ ವಿದ್ಯಾರ್ಥಿನಿಯರಿಗೆ
ಋತುಚಕ್ರದ ಬಗ್ಗೆ ಮಾಹಿತಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಡಾ. ಪಿಎಂ ಪಾರ್ವತಿ ಅವರು ಇಲ್ಲಿನ ಪ್ರೌಡ ಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿಯರಿಗೆ
ಋತುಚಕ್ರದ ಬಗ್ಗೆ ಮಾಹಿತಿ ನೀಡಿ, ಇಂದಿನ ಮಕ್ಕಳು ಅನುಭವಿಸುತ್ತಿರುವ ಅಪೌಷ್ಟಿಕತೆ, ರಕ್ತಹೀನತೆ, ಮುಟ್ಟಿನ ಅಸ್ರಾವ, ಅತಿಸ್ರಾವ, ಮುಟ್ಟಿನ ಸಂದರ್ಭದಲ್ಲಿ ಬರುವ ಹೊಟ್ಟೆ ನೋವು, ಬಿಳಿ ಪದರ, ಋತುಸ್ರಾವದಲ್ಲಿ ಪಾಲಿಸಬೇಕಾದ ಸ್ವಚ್ಛತೆ, ಪ್ಯಾಡ್ ಬಳಕೆ, ಪ್ಯಾಡ್ ಉಪಯೋಗದ ನಂತರ ನಿರ್ವಹಣೆಯನ್ನು ಯಾವ ರೀತಿಯಲ್ಲಿ ಮಾಡಬೇಕು ಎಂಬ ಅಂಶಗಳ ಮೇಲೆ ಸವಿವರವಾಗಿ ವಿದ್ಯಾರ್ಥಿನಿಯರಿಗೆ ಮಾಹಿತಿ ನೀಡಿದರು.

ನಂತರ ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ಪ್ಯಾಡ್ ಗಳನ್ನು ಉಚಿತವಾಗಿ ವಿತರಿಸಲಾಯಿತು. ನಂತರ ಏಡ್ಸ್ ಜಾಗೃತಿ ದಿನಾಚರಣೆ ಪಯುಕ್ತ ಶಾಲಾ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಸಂಕ್ಷಿಪ್ತವಾಗಿ ಏಡ್ಸ್ ತಡೆ ಜಾಗೃತಿ ಕುರಿತು ವಿವರಣೆ ನೀಡಿದರು. ಕಾರ್ಯಕ್ರಮದ ಕೊನೆಯಲ್ಲಿ ಏಡ್ಸ್ ಲಾಂಛನವನ್ನು ಮಕ್ಕಳಿಂದ ಮಾಡಿಸಿ ಜಾಗೃತಿ ಮೂಡಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಸಿಬ್ಬಂದಿಗಳು, ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಶಾರದಾ ಶೆಟ್ಟರ್, ಕಾರ್ಯದರ್ಶಿ ಲತಾ ಕುರುಮಾಚಾರ್, ವಂದನಾ ಗೋಗಿ, ಸವಿತಾ ಮಾಳಗಿ, ಸುಕನ್ಯಾ ಶೆಟ್ಟರ್, ಡಾ. ಕುಮುದ, ಕಾವೇರಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ವರದಿ : ಶಿವಕುಮಾರ್ ಹಿರೇಮಠ ಕೊಪ್ಪಳ