ನರೇಂದ್ರ ಮೋದಿ ಗೆಲುವನ್ನು ಸಂಭ್ರಮಿಸಲು ಪಟಾಕಿ, ೧೦ ಸಾವಿರ ಲಡ್ಡು ಸಿದ್ಧ: ಸಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಅಂತ್ಯವಾಗಿದ್ದು, ಇದೀಗ ಇಡೀ ದೇಶದ ಚಿತ್ತ ನಾಳಿನ ಚುನಾವಣಾ ಫಲಿತಾಂಶದ ಮೇಲಿದ್ದು, ದೇಶದ ಅಧಿಕಾರದ ಚುಕ್ಕಾಣಿ ಹಿಡಿಯುವವರು ಯಾರು ಎನ್ನುವ ಕುತೂಹಲ ಹೆಚ್ಚಾಗಿದೆ. 

ಈ ನಡುವೆ ಮೋದಿ ಸರ್ಕಾರ‍  ಮತ್ತೊಮ್ಮೆ  ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಸಮೀಕ್ಷಾ ವದರಿಗಳು ಹೇಳುತ್ತಿವೆ. ಈ ಖುಷಿಯನ್ನು ಸಂಭ್ರಮಿಸಲು ಅಭಿಮಾನಿಗಳು ಹಾಗೂ ಕಾರ್ಯಕರ್ತರು ಇದಾಗಲೇ ಭರ್ಜರಿ ತಯಾರಿ ನಡೆಸಿದ್ದು, ಈ ಕುರಿತ ಪೋಸ್ಟ್‌ ಒಂದು ವೈರಲ್‌ ಆಗಿದೆ.

2024 ರ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬೀಳಲು ಕ್ಷಣಗಣನೆ ಶುರುವಾಗಿದ್ದು, ಇದೀಗ ಇಡೀ ದೇಶದ ಚಿತ್ತ ನಡೆಯಲಿರುವ ಚುನಾವಣಾ ಫಲಿತಾಂಶದ ಮೇಲಿದೆ. ಜೊತೆಜೊತೆಗೆ ದೇಶದ ಅಧಿಕಾರದ ಚುಕ್ಕಾಣಿ ಹಿಡಿಯುವವರು ಯಾರು ಎನ್ನುವ ಕುತೂಹಲ ಕೂಡಾ ಹೆಚ್ಚಾಗಿದೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್.ಡಿ.ಎ ಮೈತ್ರಿಕೂಟ ಭಾರೀ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷಾ ವರದಿಗಳು ತಿಳಿಸಿವೆ. ಇದೇ ಖುಷಿಯಲ್ಲಿ ಮೋದಿ ಗೆಲುವನ್ನು ಸಂಭ್ರಮಿಸಲು ಅಭಿಮಾನಿಗಳು ಮತ್ತು ಬಿಜೆಪಿ ಕಾರ್ಯಕರ್ತರು ಭರ್ಜರಿ ತಯಾರಿಯನ್ನು ನಡೆಸಿದ್ದಾರೆ. ಈ ಕುರಿತ ಪೋಸ್ಟ್‌ ಒಂದು ಇದೀಗ ಸಖತ್‌ ವೈರಲ್‌ ಆಗಿದೆ.

 

ಪ್ರಧಾನಿ ಮೋದಿಯವರ ಗೆಲುವನ್ನು ಸಂಭ್ರಮಿಸಲು ಇದಾಗಲೇ ತಯಾರಿ ಆರಂಭವಾಗಿದ್ದು, ಗುಜರಾತ್‌ನಲ್ಲಿ ಸಾರ್ವಜನಿಕರ ಬೇಡಿಕೆಯ ಮೇರೆಗೆ  ಹಲವಾರು ಚಿತ್ರಮಂದಿರಗಳಲ್ಲಿ  ಚುನಾವಣಾ ಫಲಿತಾಂಶಗಳನ್ನು ಪ್ರಸಾರ ಮಾಡಲು ಸಿದ್ಧತೆ ನಡೆಯುತ್ತಿದೆ. ಇನ್ನೊಂದೆಡೆ ಪಟಾಕಿಗಳನ್ನು ಸಿಡಿಸಿ ಹಬ್ಬವನ್ನು ಸಂಭ್ರಮಿಸಲು ಕಾರ್ಯಕರ್ತರು ತಯಾರಿ ನಡೆಸಿದ್ದಾರೆ. ಮತ್ತೊಂದೆಡೆ ನಾಳೆಯ ಸಂಭ್ರಮಾಚರಣೆಗೆ ಮುಂಬೈನ ಶ್ರೀ ಗಣೇಶ್‌ ಭಂಡಾರ್‌ ಸ್ವೀಟ್‌ ಅಂಗಡಿಯಲ್ಲಿ 10 ಸಾವಿರ ಲಡ್ಡುಗಳನ್ನು ಸಿದ್ಧಪಡಿಸಲಾಗುತ್ತಿದೆ.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top