ಲಂಚಕ್ಕಾಗಿ ಪೀಡಿಸಿ ಹಲ್ಲೆ ಮಾಡಿರುವ ಪಾನಮತ್ತ ಭೂ ವಿಜ್ಞಾನಿ ಮಧುಸೂಧನ್ ರನ್ನು ವಜಾಗೊಳಿಸದಿದ್ದರೆ ಉಗ್ರ ಹೋರಾಟ

ಪೆಡರೇಷನ್ ಆಫ್ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಓನರ್ಸ್ ಸಂಘಟನೆ ಎಚ್ಚರಿಕೆ

 

ಬೆಂಗಳೂರು : ಚಿತ್ರದುರ್ಗ ಜಿಲ್ಲೆಯ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್‌ ಜಿಲ್ಲಾಧ್ಯಕ್ಷರಿಗೆ ಲಂಚಕ್ಕಾಗಿ ಪೀಡಿಸಿ ಮಾರಾಣಾಂತಿಕ ಹಲ್ಲೆ ನಡೆಸಿ ಅಮಾನವೀಯವಾಗಿ ವರ್ತಿಸಿರುವ ಮತ್ತು ಪಾನಮತ್ತರಾಗಿ ಕರ್ತವ್ಯ ಲೋಪ ಎಸಗಿರುವ ಭೂ ವಿಜ್ಞಾನಿ ಮಧುಸೂಧನ್ ಅವರನ್ನು ಕೂಡಲೇ ಸೇವೆಯಿಂದ ವಜಾಗೊಳಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಪೆಡರೇಷನ್ ಆಫ್ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಓನರ್ಸ್ ಸಂಘಟನೆ ಎಚ್ಚರಿಕೆ ನೀಡಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ರವೀಂದ್ರ ಶೆಟ್ಟಿ, ಚಿತ್ರದುರ್ಗ ಜಿಲ್ಲಾಧ್ಯಕ್ಷ ಅಬ್ದುಲ್ ಮಜೀದ್‌ರ ಮೇಲೆ ಚಿತ್ರದುರ್ಗ ತಾಲ್ಲೂಕು ಭೂ ವಿಜ್ಞಾನಿ ಮಧುಸೂಧನ್‌ ಮಾರಣಾಂತಿಕ ಹಲ್ಲೆ ಮಾಡಿರುವುದು ಖಂಡನೀಯ. ಜಿಲ್ಲೆಯ ಪ್ರತೀ ಕ್ರಷರ್‌ಗಳಿಂದ 5 ಲಕ್ಷ ರೂಗಾಗಿ ಲಂಚಕ್ಕೆ ಬೇಡಿಕೆ ಇಟ್ಟು ನಿರಂತರ ಒತ್ತಡ ಹೇರುತ್ತಿದ್ದಾರೆ. ಫೆಬ್ರವರಿ 8 ರಂದು ಜಿಲ್ಲಾಧ್ಯಕ್ಷರನ್ನು ಕರೆಸಿಕೊಂಡು ಲಂಚಕ್ಕಾಗಿ ಪೀಡಿಸಿದರು. ಇಷ್ಟೆಲ್ಲ ಹಣ ಕೊಡಲು ಸಾಧ್ಯವಿಲ್ಲ. ಈಗಾಗಲೇ ಉದ್ಯಮ ಸಾಕಷ್ಟು ತೊಂದರೆಯಲ್ಲಿದ್ದುವ್ಯವಹಾರ ನಿಂತುಹೋಗಿವೆ. ಕೆಲಸಗಾರರಿಗೆ ಸಂಬಳ ಕೊಡಲು ಸಾಧ್ಯವಾಗುತ್ತಿಲ್ಲ ಎಂದಾಗ ಮಧುಸೂಧನ್‌ ಅವರು ಒತ್ತಾಯಪೂರ್ವಕವಾಗಿ ಲಂಚ ಕೊಡಲೇಬೇಕು ಎಂದು ಪಟ್ಟು ಹಿಡಿದರಲ್ಲದೇ ಅಬ್ದುಲ್ ಮಜೀದ್ ಅವರ ಮೇಲೆ ಏಕಾಏಕಿ ಹಲ್ಲೆ ನಡೆಸಿದರು. ಅವರ ಮೂಗು ಮತ್ತು ತುಟಿಗಳು ಜಜ್ಜಿ ಹೋಗಿದ್ದು, ಚಿತ್ರದುರ್ಗ ಆಸ್ಪತ್ರೆಯ ಐ.ಸಿ.ಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.

ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಯಾವ ರೀತಿ ದರ್ಪ- ದೌರ್ಜನ್ಯ ನಡೆಯುತ್ತಿದೆ ಎಂಬುದಕ್ಕೆ ಇದು ನಿದರ್ಶನವಾಗಿದೆ. ಸರ್ಕಾರಕ್ಕೆ ಆಗುವ ತೆರಿಗೆ ಸೋರಿಕೆ ತಡೆಗಟ್ಟಬೇಕು. ನಮ್ಮ ಮೇಲೆ ಅವೈಜ್ಞಾನಿಕವಾಗಿ ಡೋಣ್ ಸರ್ವೆ ನಡೆಸುತ್ತಿದ್ದುಲಾರಿಗಳಿಗೆ ನಿಯಮಬಾಹಿರವಾಗಿ ಜಿ.ಪಿ.ಎಸ್ ಅಳವಡಿಕೆ ಮಾಡಲಾಗಿದೆ. ವಿದ್ಯುತ್ ಬಿಲ್‌ನೊಂದಿಗೆ ಲೆಕ್ಕಪರಿಶೋಧನೆ ಮಾಡುವುದು ಅವೈಜ್ಞಾನಿಕ ಕ್ರಮವಾಗಿದೆ. ಇಂತಹ ಕ್ರಮಗಳನ್ನು ಬಂಡವಾಳವಾಗಿಸಿಕೊಂಡು ಗಣಿ ಮತ್ತು ಕ್ರಷರ್‌ಗಳಿಗೆ ಕೆಲ ಅಧಿಕಾರಿಗಳು ನಿರಂತರ ತೊಂದರೆ ನೀಡುತ್ತಿದ್ದಾರೆ. ರಾಜಧನ ಪಾವತಿ ಕುರಿತು ಸಚಿವರ ನಿರ್ದೇಶನದ ಮೇರೆಗೆ ಸ್ಪಷ್ಟ  ತೀರ್ಮಾನ ತೆಗೆದುಕೊಳ್ಳಲಾಗಿದೆ. ಇಲಾಖೆಯ ಕೆಲವು ಅಧಿಕಾರಿಗಳು ಇದನ್ನು ಸಮರ್ಪಕವಾಗಿ ಕಾರ್ಯಗತಗೊಳಿಸುತ್ತಿಲ್ಲ. ಲಂಚ ಕೊಡದಿದ್ದ ಪಕ್ಷದಲ್ಲಿ ಕೊಲೆ ಬೆದರಿಕೆ, ಹಲ್ಲೆ ನಡೆಸುವಂತಹ ಮಟ್ಟಕ್ಕೆ ಅಧಿಕಾರಿ ವರ್ಗ ತಲುಪಿರುವುದು ದುರಂತ. ಸರ್ಕಾರ ಕೂಡಲೇ ಭೂ ವಿಜ್ಞಾನಿ ಮಧುಸೂಧನ್‌ ಅವರನ್ನು ವಜಾಗೊಳಿಸಿ ಇಲಾಖೆಯ ಅವ್ಯವಸ್ಥೆಗಳನ್ನು ಸರಿಪಡಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದು ಅನಿವಾರ್ಯ ಎಂದರು.

 

ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಕಿರಣ್ ಜೈನ್, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ್ಕಾರ್ಯದರ್ಶಿ ಅರುಣ್ ಕುಮಾರ್ ವಿ ಹಾಗೂ  ಪದಾಧಿಕಾರಿಗಳು ಉಪಸ್ಥಿತರಿದ್ದರು. 

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top