ಕುಷ್ಟಗಿ,ಜ,2 :- ಕುಷ್ಟಗಿ ತಾಲೂಕಿನಲ್ಲಿ ರೈತರು ತಮ್ಮ ಹೊಲಗಳಿಗೆ ತೆರಳಿ ಅತ್ಯಂತ ಸಡಗರ ಸಂಭ್ರಮದಿಂದ ಎಳ್ಳ ಅಮವಾಸೆ ಆಚರಣೆ ಮಾಡಿದರು. ಬಗೆ ಬಗೆಯ ಸಿಹಿ ತಿನಿಸುಗಳನ್ನು ಮಾಡಿಕೊಂಡು ಹೊಲಕ್ಕೆ ಚರಗ ಚೆಲ್ಲಿದರು.

ಹೊಲದಲ್ಲಿನ ಬನ್ನಿಮರಕ್ಕೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಎಳ್ಳು ಹೊಳಿಗೆ, ಸಜ್ಜಿ ರೊಟ್ಟಿ, ಹೊಳೆಗೆ, ಹೆಸರು ಕಾಳು, ಮಡಿಕೆ ಕಾಳು, ಕಡಲೆ ಕಾಳು ಪಲ್ಯವನ್ನು ಬನ್ನಿ ಗಿಡಕ್ಕೆ ನೈವೇದ್ಯ ಮಾಡಿ ಕಾಯಿ ಕರ್ಪೂರದಿಂದ ಪೂಜೆಸಿ ಭೂಮಿತಾಯಿಗೆ ಪುನಿತರಾದರು. ನಂತರ ಹುಲಿಗೋ ಚಳಬ್ರೀಗೋ ಎಂಬ ನಾಮದಿಂದ ಭೂಮಿತಾಯಿಗೆ ಚರಗ ಚೆಲ್ಲಿದರು. ತದನಂತರ ರೈತ ಕುಟುಂಬ ವರ್ಗದವರು ಸೇರಿದಂತೆ ಬಗೆ ಬಗೆಯ ಸಿಹಿ ತಿನಿಸುಗಳ ಊಟವನ್ನು ಸವಿದರು.
