ದುಡ್ಡಿಗಾಗಿ ರೈತರು ಆತ್ಮಹತ್ಯೆ: ಶಿವಾನಂದ ಪಾಟೀಲ್ ಹೇಳಿಕೆಗೆ ಎಎಪಿ ತೀವ್ರ ಆಕ್ರೋಶ

5 ಲಕ್ಷ ಪರಿಹಾರ ಘೋಷಣೆ ಬಳಿಕ ರೈತರ ಆತ್ಮಹತ್ಯೆ ಹೆಚ್ಚಿದೆ ಎಂಬ ಜವಳಿ,ಕಬ್ಬು ಹಾಗೂ ಕೃಷಿ ಮಾರುಕಟ್ಟೆ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವಾನಂದ ಪಾಟೀಲ್‌ ಅವರ ಹೇಳಿಕೆಯನ್ನು ಆಮ್ ಆದ್ಮಿ ಪಕ್ಷ ತೀವ್ರವಾಗಿ ಖಂಡಿಸುತ್ತಿದೆ. ತಕ್ಷಣ ಸಚಿವ ಸ್ಥಾನಕ್ಕೆ ಶಿವಾನಂದ ಪಾಟೀಲರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದೆ. ನಿಜಕ್ಕೂ ಸಿದ್ದರಾಮಯ್ಯನವರ ಸರ್ಕಾರಕ್ಕೆ ರೈತರ ಪರ ಕಾಳಜಿ ಇದ್ದರೆ ತಕ್ಷಣ ಶಿವಾನಂದ ಪಾಟೀಲರ ಸಚಿನ ಸ್ಥಾನದಿಂದ ಕೆಳಗಿಳಿಸಬೇಕು ಎಂದು ಆಗ್ರಹಿಸಿದೆ. ಅನ್ನದಾತರದ ಬಗ್ಗೆ ಸಚಿವರು ಕೇವಲವಾಗಿ ಮಾತನಾಡಿದ್ದಾರೆ. ಕುಟುಂಬಕ್ಕೆ ಆಧಾರನಾದ ರೈತ ಸಾಲದ ಸುಳಿಗೆ ಸಿಲುಕಿ, ಬೆಳೆ ನಷ್ಟದಿಂದ, ಶ್ರಮಕ್ಕೆ ತಕ್ಕ ಬೆಲೆ ಸಿಗದೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಾಗ ಕುಟುಂಬ ಆರ್ಥಿಕವಾಗಿ ಕುಸಿಯದಿರಲಿ ಎಂಬ ಕಾರಣಕ್ಕೆ ಸರ್ಕಾರ ಪರಿಹಾರ ಘೋಷಣೆ ಮಾಡುತ್ತಿದೆ. ಆದರೆ ಪರಿಹಾರ ಸಿಕ್ಕುತ್ತದೆ ಎಂಬ ಕಾರಣಕ್ಕೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸಚಿವರು ಹೇಳಿಕೆ ನೀಡಿರುವುದು ರಾಜ್ಯ ಸರ್ಕಾರಕ್ಕೆ ಶೋಭೆಯಲ್ಲ.

“2020ರಲ್ಲಿ 500 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಆದರೆ 2022 ರಲ್ಲಿ 651 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪರಿಹಾರ ಸಿಕ್ಕುತ್ತೆ ಅನ್ನೋ ದುರಾಸೆ ಮನಸ್ಸಲ್ಲಿ ಬರುತ್ತೆ” ಎಂದು ಹೋಲಿಕೆ ಮಾಡಿ ಹೇಳಿದ್ದಾರೆ. ಇದೊಂದು ದುರಾದೃಷ್ಟಕರ ಹೇಳಿಕೆಯಾಗಿದೆ. ರೈತ ದೇಶದ ಬೆನ್ನೆಲುಬು ಎಂಬುದನ್ನು ಮರೆಯಬಾರದು. ಆತನ ಸಂಕಷ್ಟಗಳಲ್ಲಿ ಪಾಲುದಾರರಾಗಿ, ಹೆಗಲಾಗಿ ರಾಜ್ಯ ಸರ್ಕಾರ ಭಾಗಿದಾರನಾಗಬೇಕು. ಅದು ಬಿಟ್ಟು ರೈತರ ಬಗ್ಗೆ ಹಗುರವಾಗಿ ಮಾತನಾಡಕೂಡದು.

ಸರ್ಕಾರದ ಬಳಿ ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ ಪರಿಹಾರ ನೀಡಲು ದುಡ್ಡಿಲ್ಲದಿದ್ದರೆ ನೇರವಾಗಿ ಹೇಳಿಕೆ ಕೊಡಿ. ಅದು ಬಿಟ್ಟು ದುಡ್ಡಿಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಅಣಕಿಸಬೇಡಿ. ರೈತರು ಸ್ವಾಭಿಮಾನಿಗಳಾಗಿದ್ದಾರೆ ಎಂದು  ಆಕ್ರೋಶ ವ್ಯಕ್ತಪಡಿಸಿದರು. ಮುಖ್ಯಮಂತ್ರಿಗಳು ಶೀಘ್ರ ಕ್ರಮ ತೆಗೆದುಕೊಳ್ಳದಿದ್ದಲ್ಲಿ  ಆಮ್ ಆದ್ಮಿ ಪಕ್ಷವು  ರಾಜ್ಯಾದ್ಯಂತ ಪ್ರತಿನಿತ್ಯ ಪ್ರತಿಭಟನೆಯನ್ನು ದಾಖಲಿಸುತ್ತದೆ ಎಂದು ಆಮ್ ಆದ್ಮಿ ಪಕ್ಷದ ಬಳ್ಳಾರಿ ಜಿಲ್ಲಾ ಅಧ್ಯಕ್ಷರಾದ ಜೆ.ವಿ.ಮಂಜುನಾಥ್ ರವರು ಎಚ್ಚರಿಕೆಯನ್ನು ನೀಡಿದರು.

Facebook
Twitter
LinkedIn
WhatsApp
Telegram
Tumblr
Email

Leave a Comment

Your email address will not be published. Required fields are marked *

Translate »
Scroll to Top