ಕೆಐಎಡಿಬಿ ಫೇಸ್-೧ರಲ್ಲಿ, ರೈತರಿಂದ ಸ್ವಾಧೀನಪಡಿಸಿಕೊಂಡಿರುವ ಜಮೀನಿಗೆ ಪರಿಹಾರ ನೀಡುವಂತೆ ಆಗ್ರಹ

ದೇವನಹಳ್ಳಿ,ಜನವರಿ,20 : ತಾಲೂಕಿನಲ್ಲಿ ಕೆಐಎಡಿಬಿ ಹಣವುಳ್ಳವರ ಕಾರ್ಖಾನೆ ಸ್ಥಾಪಿಸುವ ಸಲುವಾಗಿ ಫೇಸ್-೧ ನಲ್ಲಿ ಸುಮಾರು ೩ ಸಾವಿರ ಎಕರೆ ರೈತರಿಂದ ಭೂಮಿಯನ್ನು ಸ್ವ್ವಾದೀನಪಡಿಸಿಕೊಂಡು ಹಲವು ವರ್ಷಗಳು ಕಳೆದರೂ ಇನ್ನು ಕೆಲ ರೈತರಿಗೆ ಇದುವರೆಗೂ ಪರಿಹಾರ ದೊರೆಯದೇ ಇದ್ದರೂ ಮತ್ತೆ ಕೆಐಎಡಿಬಿ ಫೇಸ್-೨ ನಲ್ಲಿ ತಾಲೂಕಿನ ಮತ್ತಷ್ಟು ಗ್ರಾಮಗಳಲ್ಲಿ ರೈತರ ಜಮೀನುಗಳ ಸ್ವಾಧೀನಕ್ಕೆ ಮುಂದಾಗಿದ್ದಾರೆ ಫೇಸ್-೧ ರಲ್ಲಿ ವಶಪಡಿಸಿಕೊಂಡ ರೈತರಿಗೆ ಪರಿಹಾರ ನೀಡಿ ನಂತರ ಫೇಸ್-೨ ಭೂಮಿ ಸ್ವಾಧೀನಕ್ಕೆ ಮುಂದಾಗಬೇಕೆಂದು ವಕೀಲ ಪುನೀತ್‌ರಾಮಕೃಷ್ಣ ಆಗ್ರಹಿಸಿದ್ದಾರೆ. ಪಟ್ಟಣದ ಪತ್ರಕರ್ತರ ಭವನದಲ್ಲಿ ಪ್ರೊ. ನಂಜುಂಡ ಸ್ವಾಮಿ ಸ್ಥಾಪಿತ ಕರ್ನಾಟಕ ರೈತ ಸಂಘ ಹಾಗು ಹಸಿರು ಸೇನೆ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು. ಚನ್ನರಾಯಪಟ್ಟಣ, ಯಾಡಾಳ, ಗೋಕರೆ, ಬಚ್ಚೇನಹಳ್ಳಿ, ಬಾಲೇಪುರ, ಮುದ್ದೇನಹಳ್ಳಿ, ನಲ್ಲಪನಹಳ್ಳಿ, ಹರಳೂರು, ಪೋಲನಹಳ್ಳಿ, ಎಸ್.ತೆಲ್ಲೋಹಳ್ಳಿ, ಮಟ್ಟಬಾರ್ಲು ಇನ್ನು ಹಲವು ಗ್ರಾಮಗಳ ರೈತರ ಜಮೀನುಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.

ಭೂಮಿ ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ನೀಡದೆ ಅನ್ಯಾಯ ಮಾಡುತ್ತಿದ್ದಾರೆ. ಸ್ವಾಧೀನವಾಗಿರುವ ಹಾಗು ಸ್ವಾಧೀನಪಡಿಸಿಕೊಳ್ಳಲು ಮುಂದಾಗಿರುವ ಜಮೀನುಗಳು ಫಲವತ್ತಾದ ವ್ಯವಸಾಯಕ್ಕೆ ಯೋಗ್ಯವಾದ ಜಮೀನುಗಳಾಗಿದ್ದು, ರೈತರು ಹೂವು,ಮಾವು,ತರಕಾರಿ ಇತ್ಯಾದಿಗಳನ್ನು ಬೆಳೆಯುತ್ತಿದ್ದ ಪ್ರದೇಶಗಳಾಗಿವೆ. ಕೆಐಎಡಿಬಿ ಅಮಾಯಕ ರೈತರಿಗೆ ಸರಿಯಾದ ಮಾಹಿತಿ ನೀಡದೆ ಅವರ ಜಮೀನನ್ನು ಅನ್ಯಾಯವಾಗಿ ವಶಪಡಿಸಿಕೊಂಡು ರೈತರನ್ನು ನಿರುದ್ಯೋಗಿಗಳನ್ನಾಗಿ ಮಾಡಿ ಅವರ ಬದುಕನ್ನೇ ಕಿತ್ತುಕೊಂಡಿದ್ದಾರೆ. ಫೇಸ್-೧ರಲ್ಲಿ ವಶಪಡಿಸಿಕೊಂಡಿರುವ ಕೆಲ ರೈತರಿಗೆ ಇದುವರೆಗೂ ಪರಿಹಾರ ಬಿಡುಗಡೆಯಾಗಿಲ್ಲ, ರೈತರು ಪ್ರಶ್ನಿಸಿದರೆ ನಿಮ್ಮ ದಾಖಲೆ ಸರಿಯಾಗಿಲ್ಲ, ಅಧಿಕಾರಿಗಳು ವರ್ಗವಾಗಿದ್ದಾರೆ. ರಜೆಯಲ್ಲಿದ್ದಾರೆ ಎಂಬ ಸಬೂಬು ಹೇಳುತ್ತಾರೆ.ರೈತರನ್ನು ಕಚೇರಿಯಿಂದ ಕಚೇರಿಗೆ ಅಲೆಸುತ್ತಾ ವೃತಾ ಕಾಲಹರಣ ಮಾಡುತ್ತಿದ್ದಾರೆ. ಫೇಸ್-೧ರಲ್ಲಿ ರೈತರಿಂದ ವಶಪಡಿಸಿಕೊಂಡಿರುವ ಜಮೀನಿನ ಪರಿಹಾರವನ್ನು ನೇರವಾಗಿ ಅವರ ವಾಸ ಸ್ಥಳಕ್ಕೆ ಭೇಟಿ ನೀಡಿ ಬಡ್ಡಿಸಮೇತ ಅವರ ಖಾತೆಗೆ ಜಮಾ ಮಾಡಬೇಕು, ವ್ಯಾಜ್ಯ ತಕರಾರು ಇರುವ ಜಮೀನುಗಳಿಗೆ ನೀಡಬೇಕಾಗಿರುವ ಪರಿಹಾರವನ್ನು ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಠೇವಣೆ ಮಾಡಿ ಬಡ್ಡಿ ಸಂದಾಯವಾಗುವoತೆ ಮಾಡಬೇಕು, ವ್ಯಾಜ್ಯ ಇತ್ಯರ್ಥವಾದ ಮೇಲೆ ಪರಿಹಾರ ಧನವನ್ನು ಬಡ್ಡಿಸಮೇತ ಬಿಡುಗಡೆ ಮಾಡಿಕೊಡಬೇಕು.

ಜಮೀನು ಸ್ವಾಧೀನಪಡಿಸಿಕೊಂಡ ಪ್ರತಿ ಹಳ್ಳಿಯಲ್ಲೂ ಕಾನೂನು ಅದಾಲತ್‌ಗಳನ್ನು ನಡೆಸಿ ಸಮಸ್ಯೆಯನ್ನು ಪರಿಹರಿಸಬೇಕು. ವ್ಯಾಜ್ಯ ತಕರಾರು ಇಲ್ಲದ ಜಮೀನುಗಳ ಪರಿಹಾರವನ್ನು ಒಂದು ತಿಂಗಳಲ್ಲಿ ರೈತರ ಖಾತೆಗೆ ವರ್ಗಾವಣೆ ಮಾಡುವುದು ಇಲ್ಲವಾದರೆ ರೈತರ ಜಮೀನನ್ನು ಹಿಂದಿರುಗಿಸಬೇಕು. ದಾಖಲೆಗಳ ಹೊಣೆಯನ್ನು ರೈತರಮೇಲೆ ಹೊರಿಸದೆ ಕೆಐಎಡಿಬಿ ಅಧಿಕಾರಿಗಳು ಸಂಬoಧಪಟ್ಟ ಇಲಾಖೆಯಿಂದ ಅವರೆ ಪಡೆದುಕೊಳ್ಳಬೇಕು ಎಂದರು. ಪ್ರೋ.ನಂಜುoಡಸ್ವಾಮಿ ಸ್ಥಾಪಿತ ಕರ್ನಾಟಕ ರೈತ ಸಂಘ ಹಾಗು ಹಸಿರು ಸೇನೆ ಜಿಲ್ಲಾಧ್ಯಕ್ಷ ಎಂ.ವೆAಕಟೇಶ್ ಮಾತನಾಡಿ ಕೆಐಎಡಿಬಿ ಅಧಿಕಾರಿಗಳು ತಾಲೂಕಿನಲ್ಲಿ ಫೇಸ್-೧ ರಲ್ಲಿ ಸ್ವಾಧೀನಪಡಿಸಿಕೊಂಡಿರುವ ರೈತರಿಗೆ ಪರಿಹಾರ ನೀಡದೆ ಮತ್ತೆ ಪೇಸ್-೨ರಲ್ಲಿ ಸುಮಾರು ೨ ಸಾವಿರ ಎಕರೆ ರೈತರ ಜಮೀನು ಸ್ವಾಧೀನಪಡಿಸಿಕೊಳ್ಳಲು ಮುಂದಾಗಿರುವುದು ಎಷ್ಟರಮಟ್ಟಿಗೆ ಸರಿ? ಫೇಸ್-೨ರಲ್ಲಿ ವಶಪಡಿಸಿಕೊಳ್ಳಲು ಮುಂದಾಗಿರುವ ರೈತರ ಜಮೀನುಗಳಿಗೆ ೬ ತಿಂಗಳ ಒಳಗಾಗಿ ರೈತರ ಖಾತೆಗೆ ಜಮೆ ಮಾಡುವುದು, ತಮ್ಮ ಜಮೀನಿಗೆ ರೈತರೆ ನಿರ್ಧರಿಸಿದಂತೆ ಪರಿಹಾರ ಧನವನ್ನು ನೀಡುವುದು ಅಥವ ಪರ್ಯಾಯವಾಗಿ ಅಭಿವೃದ್ಧಿಗೊಂಡ ಜಮೀನನ್ನು ನೀಡುವುದು, ಹಾಗು ಸ್ಥಾಪನೆಯಾಗುವ ಕಾರ್ಖಾನೆಯಲ್ಲಿ ರೈತರ ಕುಟುಂಬದವರಿಗೆ ಉದ್ಯೋಗ ನೀಡಬೇಕು, ಪ್ರತಿಗ್ರಾಮಗಳಲ್ಲಿ ಕಾನೂನು ಅದಾಲತ್ ನಡೆಸಿ ರೈತರ ತಕರಾರುಗಳನ್ನು ಇತ್ಯರ್ಥಪಡಿಸಬೇಕು. ರೈತರು ಯಾವುದೇ ಕಚೇರಿಗೆ ಅಲೆಯುವುದಿಲ್ಲ ಭೂಸ್ವಾಧೀನ ಪಡಿಸಿಕೊಂಡಿರುವ ರೈತರ ಮನೆಗೆ ಬಂದು ಪರಿಹಾರವನ್ನು ನೀಡಬೇಕು ಈ ಸಂಬಂಧ ನಾವು ಜ.೨೪ರಂದು ಜಿಲ್ಲಾಧಿಕಾರಿಗಳಿಗೆ ಮನವಿಪತ್ರ ಸಲ್ಲಿಸಲಿದ್ದೇವೆ ಎಂದರು.


ಇದೆ ವೇಳೆ ಪ್ರೋ.ನಂಜುAಡಸ್ವಾಮಿ ಸ್ಥಾಪಿತ ಕರ್ನಾಟಕ ರೈತ ಸಂಘ ಹಾಗು ಹಸಿರು ಸೇನೆ ಜಿಲ್ಲಾ ಉಪಾಧ್ಯಕ್ಷ ನಾರಾಯಣಸ್ವಾಮಿ (ನಾಣಿ) ಜಿಲ್ಲಾ ಮಹಿಳಾ ಅಧ್ಯಕ್ಷೆ ರೇಣುಕಮ್ಮ, ಪ್ರಧಾನ ಕಾರ್ಯದರ್ಶಿ ಕೃಷ್ಣಪ್ಪ, ತಾಲೂಕು ಅಧ್ಯಕ್ಷ ಜಯಶಂಕರ್ ಸೇರಿದಂತೆ ಅನೇಕರು ಇದ್ದರು.

Leave a Comment

Your email address will not be published. Required fields are marked *

Translate »
Scroll to Top