ಕುರುಗೋಡು : ಬಿತ್ತನೆ ಬೀಜ, ರಾಸಾಯನಿಕ ಗೊಬ್ಬರ, ಔಷದಿ, ಸರ್ಕಾದಿಂದ ದೊರೆಯುವ ಸಬ್ಸಿಡಿ ಸೌಲಭ್ಯಗಳು, ಸಮಯಕ್ಕೆ ಅನುಗುಣವಾಗಿ ಮಳೆ ಬಾರದಿರುವುದು, ಬೆಳೆ ಬಂದು ಮಾರಾಟದ ಸಮಯದಲ್ಲಿ ಸೂಕ್ತ ಧರ ದೊರೆಯದಿರುವುದು ಈ ಎಲ್ಲಾ ಸಮಸ್ಯಗಳನ್ನು ಎದುರಿಸುವಂತಹ ವಸ್ತುಸ್ಥಿತಿಯ ಕ್ರಾಂತಿಕಾರಿ ಸಾಮಾಜಿಕ ನಾಟಕ ಎಂದು ಮೋಹನ್ ರೆಡ್ಡಿ ಹೇಳಿದರು. ತಾಲೂಕು ಸಮೀದ ಬೈಲೂರು ಮತ್ತು ಸಿಧಿಗೇರಿ ಮಧ್ಯದಲ್ಲಿರುವ ಶ್ರೀ ಮಲ್ಲಪ್ಪತಾತ ದೇವಸ್ಥಾನದ ಪ್ರಾಂಗಣದಲ್ಲಿ ಮಾತೃ ಸೇವಾ ಟ್ರಸ್ಟ್ (ರಿ) ವತಿಯಿಂದ ಹಮ್ಮಿಕೊಂಡಿದ್ದ ರೈತ ನಿನಗೆ ಯಾರು ಹಿತ ಅರ್ಥಾತ್ ಭೂತಾಯಿ ಮಕ್ಕಳು ಎಂಬ ಕ್ರಾಂತಿಕಾರಿ ಸಾಮಾಜಿಕ ನಾಟಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕ್ರಮೇಣ ವಿದೇಶಿ ಸಂಸ್ಕೃತಿಯ ಅನುಕರಣೆ ಮತ್ತು ಸಿನಿಮಾ, ಟಿವಿಗಳಿಂದ ರಾಜ್ಯದಲ್ಲಿ ಕೇವಲ ಬೆರಳೆಣಿಕೆಯಷ್ಟು ವೃತ್ತಿ ರಂಗ ಸಂಸ್ಥೆಗಳು ಕಾರ್ಯ ನಿರ್ವಹಿಸುವಂತಾಗಿದೆ. ಅಲೆಮಾರಿ ಜೀವನ ನಡೆಸುವ ಕಲಾವಿದರು, ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಲಾಗುತ್ತಿಲ್ಲ. ಇದಕ್ಕೆಲ್ಲ ಕಾರಣ ಕಲಾವಿದರ ಆರ್ಥಿಕ ಮಟ್ಟ ಸುಧಾರಿಸದೇ ಇರುವುದು. ಇದರಿಂದ ಕಲಾವಿದರ ಕೊರತೆ ಹೆಚ್ಚಿದ್ದು, ವೃತ್ತಿ ರಂಗ ಕಂಪನಿಗಳು ಬಾಗಿಲನ್ನು ಮುಚ್ಚುವಂತಾಗ

ಕವಿಗಳು ಕೊಂಚಿಗೇರಿ ಡಿ. ಮಲ್ಲಕಾರ್ಜುನ ಮಾತನಾಡಿ ಉಪಜೀವನಕ್ಕೆ ವತ್ತಿಯಾಗಿಸಿಕೊಂಡ ಕಲಾವಿದರಿಗೆ ಅನ್ನ ನೀಡಿ ಸಲುಹಿದ ಕನ್ನಡ ಭೂಮಿಯಲ್ಲಿ ಇಂದು ನೆಲೆ ಇಲ್ಲದಂತಾಗುತ್ತಿರುವುದು ನಮ್ಮ ಸಂಸ್ಕೃತಿಗೆ ಬಂದಿರುವ ಕುತ್ತು. ಹೀಗಾಗಿ ನಾಡು, ನುಡಿ ಸಿರಿವಂತಿಕೆ,ಇತಿಹಾಸ ಸಾರುತ್ತ ಅನಕ್ಷರಸ್ಥರಿಗೂ ಇತಿಹಾಸದ ಅರಿವು ಮೂಡಿಸಿದ ಬೈಲಾಟ, ಸಾಮಾಜಿಕ ನಾಟಕ, ಪೌರಾಣಿಕ ನಾಟಕ ಸೇರಿದಂತೆ ಸಾಂಸ್ಕೃತಿಕ ಕಲಾವಿದರ ರಂಗ ಪರಂಪರೆ ಉಳಿಸಿ ಬೆಳೆಸಬೇಕಿದೆ ಎಂದು ಹೇಳಿದರು. ಹಿರಿಯ ಪತ್ರಕರ್ತರು ಕೆ.ಭೀಮಣ್ಣ ಮಾತನಾಡಿ ಕಲೆ ಮತ್ತು ಕಲಾವಿದರನ್ನು ಪೋಷಿಸುವ ಕೆಲಸವನ್ನು ಕಲಾ ಪೋಷಕರು ಮಾಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ನಂತರ ರಾಮನ ಗೌಡ ಮತ್ತು ಕರಣಂ ಬಸವರಾಜ ಮಾತನಾಡಿದರು. ರಾತ್ರಿ 9 ಗಂಟೆಗೆ ಪ್ರಾರಭವದ ನಾಟಕ ರೈತ ನಿನಗೆ ಯಾರು ಹಿತ ಅರ್ಥಾತ್ ಭೂತಾಯಿ ಮಕ್ಕಳು ಎಂಬ ಕ್ರಾಂತಿಕಾರಿ ಸಾಮಾಜಿಕ ನಾಟಕ ಪ್ರದರ್ಶನ ನೆರೆದ ಜನರಲ್ಲಿ ಮನಸೂರೆಗೊಳಿಸಿತ್ತು. ಈ ಸಂದರ್ಭದಲ್ಲಿ ಕೊಂಚಿಗೇರಿ ಶ್ರೀ ಕೆ.ಎಂ.ಶಿವಪ್ಪ ತಾತ, ಸಿಂದಿಗೇರಿ ಶ್ರೀ ಮಲ್ಲಪ್ಪ ತಾತ, ಎಸ್.ರಂಗನಗೌಡ್ರು, ಡಿ.ಗಂಗಣ್ಣ, ಕರಣಂ ಬಸವರಾಜಗೌಡ್ರು, ಕೆ ನಾಗರಾಜಗೌಡ್ರು, ಆರ್. ವೀರನಗೌಡ್ರು, ಶಶಿದರ ಗ್ರಾ.ಪಂ ಅಧ್ಯಕ್ಷರು, ಸದಸ್ಯರು ಗ್ರಾಮದ ಮುಖಂಡರು ಗ್ರಾಮಸ್ಥರು ಉಪಸ್ಥಿತರಿದ್ದರು.

