ಬ್ರ್ಯಾಂಡ್ ಲ್ಯಾಂಡ್ ಪ್ರಾಪರ್ಟಿ ಎಕ್ಸ್ ಪೋದಲ್ಲಿ ಮಿತಿಯಿಲ್ಲದ ಅವಕಾಶಗಳ ಪರಿಶೋಧನೆ

ಫೆ. 24 ಹಾಗೂ 25 ರಂದು ಬೆಂಗಳೂರು ಬ್ರ್ಯಾಂಡ್ ಲ್ಯಾಂಡ್ ಪ್ರಾಪರ್ಟಿ ಎಕ್ಸ್ ಪೋ

ಬೆಂಗಳೂರು:  ನಗರದ ಚೆಲ್ಲಘಟ್ಟ ಮೆಟ್ರೋ ಸ್ಟೇಷನ್ ಸಮೀಪದ ಜಿ.ಕೆ. ಗ್ರ್ಯಾಂಡ್ ಅರೇನಾದಲ್ಲಿ ಬೆಂಗಳೂರು ಬ್ರ್ಯಾಂಡ್ ಲ್ಯಾಂಡ್ ಪ್ರಾಪರ್ಟಿ ಎಕ್ಸ್ ಪೋ ಫೆ. 24 ಮತ್ತು 25 ರಂದು ನಡೆಯಲಿದೆ.  

 

ಕೈಗಾರಿಕಾ ವಲಯ, ವೃತ್ತಿಪರರು ಮತ್ತು ಉತ್ಸಾಹಭರಿತ ಆಸ್ತಿ ಖರೀದಿದಾರರನ್ನು ಒಂದೆಡೆ ಸೇರಿಸುವ ಮಹತ್ವದ ಮತ್ತು ಭರವಸೆಯ ಮೇಳ ಇದಾಗಿದೆ. 

ಮನೆಗಳಿಂದ ಹಿಡಿದು ಬಡಾವಣೆ, ಕೃಷಿ ಭೂಮಿ ಮೇಲೆ ಹೂಡಿಕೆಗೆ ಅವಕಾಶಗಳನ್ನು ಹೊಂದಿರುವ ವಿಸ್ತಾರವಾದ ಅವಕಾಶಗಳನ್ನು ಇದು ಒಳಗೊಂಡಿದೆ. ಪ್ರಮುಖ ಡವಲಪರ್ ಗಳು, ರಿಯಲ್ ಎಸ್ಟೇಟ್ ಏಜೆಂಟ್ ಗಳು, ಹಣಕಾಸು ಸಂಸ್ಥೆಗಳು ಮತ್ತು ಆಸ್ತಿ ಸೇವಾ ಪೂರೈಕೆದಾರರು ಭಾಗಿಯಾಗಲಿರುವ ಮೇಳದಲ್ಲಿ ಇತ್ತೀಚಿನ ಟ್ರೆಂಡ್ ಗಳು, ನಾವೀನ್ಯತೆ ಮತ್ತು ರಿಯಲ್ ಎಸ್ಟೇಟ್ ವಲಯಕ್ಕೆ ಸಂಬಂಧಿಸಿದಂತೆ ಪ್ರಮುಖ ವ್ಯಾಪಾರ ವಹಿವಾಟು ನಡೆಯುವ ನಿರೀಕ್ಷೆಯಿದೆ. 

ಮೊದಲ ಬಾರಿಗೆ ಮನೆ ಖರೀದಿಸುವವರು, ನಿಪುಣ ಹೂಡಿಕೆದಾರರು, ಮಾರುಕಟ್ಟೆ ಬಗ್ಗೆ ಆಸಕ್ತಿ ಇರುವವರು ಒಳಗೊಂಡಂತೆ ಪ್ರತಿಯೊಬ್ಬರಿಗೂ ಬ್ರ್ಯಾಂಡ್ ಪ್ರಾಪರ್ಟಿ ಎಕ್ಸ್ ಪೋ ದಲ್ಲಿ ಸೂಕ್ತ ಮಾಹಿತಿ ದೊರೆಯಲಿದೆ. ಪ್ರವೇಶ ಉಚಿತವಾಗಿದ್ದು, ಆಸ್ತಿಯನ್ನು ಮುಂಗಡ ಕಾಯ್ದರಿಸಲು ಅವಕಾಶವಿದೆ. 25 ಕ್ಕೂ ಅಧಿಕ ಬಿಲ್ಡರ್ ಗಳು ಒಂದೇ ವೇದಿಕೆಯಡಿ ಬರುತ್ತಿದ್ದಾರೆ. ಡಿ.ಎಕ್ಸ್ ಮ್ಯಾಕ್ಸ್, ಗೋಪಾಲನ್ ಪ್ರಾಪರ್ಟೀಸ್, ಕೇಸ್ ಗ್ರ್ಯಾಂಡ್, ಸೀಒನ್, ವಾತಾವರಣ್, ಪ್ರಾವಿಡೆಂಟ್, ಕೆ.ಎನ್.ಎಸ್ ಇನ್ಪ್ರಾ, ದಿ ಅಕ್ಷರ ವ್ಯಾಲಿ, ಅಡ್ರೇಸ್ ಮೇಕೆರ್, ತಿರುಮಲ ಪ್ರಾಪರ್ಟೀಸ್, ಭೀಮಾ ಪ್ರಾಪರ್ಟೀಸ್, ಆದಿತ್ಯಾ ಆರ್ಕೇಡ್, ಅನುಶಿ ಡವಲಪರ್, ಉಪ್ಕಾರ್ ಡವಲಪರ್ ಸಂಸ್ಥೆಗಳು ಭಾಗವಹಿಸುತ್ತಿವೆ.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top