ತೆರೆಗೆ ಸಿದ್ದ ಎಕ್ಸ್‌ಪೆಂಡಬೆಲ್ಸ್ 4

ಒಂದು ಚಿತ್ರವು ಯಶಸ್ವಿಯಾದರೆ ಅದರ ಸರಣಿಯಲ್ಲಿ ಸಿನಿಮಾಗಳು ಬರುವುದು ವಾಡಿಕೆಯಾಗಿದೆ. ಅದೇ ಸಾಲಿಗೆ ’ಎಕ್ಸ್‌ಪೆಂಡಬೆಲ್ಸ್’ ಚಿತ್ರದ ನಾಲ್ಕನೇ ಸರಣಿ ತೆರೆಗೆ ಬರಲು ತಯಾರಿಗೊಂಡಿದೆ.         ಆಕ್ಷನ್ ಸ್ಟಾರ್ ಸೈಲ್ವಿಸ್ಟೆರ್ ಸ್ಟೆಲ್ಲನ್ ನಾಯಕನಾಗಿ ನಟಿಸಿ ನಿರ್ದೇಶನ ಮಾಡಿರುವ ’ಎಕ್ಸ್‌ಪೆಂಡಬೆಲ್ಸ್’ ಚಿತ್ರವು 2010ರಲ್ಲಿ ಬಿಡುಗಡೆಗೊಂಡು ಹಿಟ್ ಆಗಿತ್ತು. ಇದರಲ್ಲಿ ಜೇಸನ್ ಸ್ಟಾಥಮ್, ಜೆಟ್‌ಲಿ, ಡಾಲ್ಪ್ ಲುಂಡ್‌ಗ್ರೆನ್ ನಟಿಸಿದ್ದರು. ಮುಂದುವರೆದ ಭಾಗ-2 ಸಿನಿಮಾವು 2012ರಲ್ಲಿ ತೆರೆಕಂಡಿತ್ತು. ಬ್ರೂಸ್‌ವಿಲ್ಲೀಸ್, ಲಿಯಾಮ್ ಹೆಮ್ಸ್‌ವರ್ತ್, ಜೀನ್‌ಕ್ಲೌಡ್, ವ್ಯಾನ್ ಡ್ಯಾಮ್, ಅರ್ನಾಲ್ಡ್ ಶ್ವಾರ್ಜಿನೆಗ್ಗರ್ ಅಭಿನಯಿಸಿದ್ದರು. ನಂತರ ಭಾಗ-3  2014ರಲ್ಲಿ ಬಿಡುಗಡೆಗೊಂಡಿತ್ತು. ಆಂಟೋನಿಯೋ ಬಂಡೆರಾಸ್, ಮೆಲ್‌ಗಿಬ್ಸನ್,ಹ್ಯಾರಿಸನ್ ಫೋರ್ಡ್, ವೆಸ್ಲಿ ಸ್ನೈಪ್ಸ್ ತಾರಾಗಣದಲ್ಲಿ ಇದ್ದರು.

      ಈಗ ’ಎಕ್ಸ್‌ಪೆಂಡಬೆಲ್-4’ ಸಿನಿಮಾದಲ್ಲಿ ಟೋನಿಜಾ, ಕರ್ಟಿಸ್ 50 ಸೆಂಟ್‌ಜಾಕ್ಸನ್, ಮೆಗಾನ್‌ಫಾಕ್ಸ್ ಮತ್ತು ಇಕೊ ಉವೈಸ್ ಇವರುಗಳ ಸಾಹಸಗಳು ಪರದೆಯ ಮೇಲೆ ನೋಡುಗರಿಗೆ ಖುಷಿ ಕೊಡುತ್ತದೆ. ಯುಎಸ್‌ಎ ಮತ್ತು ರಷ್ಯಾ ನಡುವಿನ ಯುದ್ದವನ್ನು ತಪ್ಪಿಸಲು, ಡೇರ್ ಡೆವಿಲ್ ದಿ ಎಕ್ಸ್‌ಪೆಂಡಬಲ್ಸ್ ತಂಡವು ರಾಸಾಯನಿಕ ಘಟಕದಿಂದ ಪರಮಾಣು ಕ್ಷಿಪಣಿ ಡಿಟೋನೇಟರ್‌ಗಳನ್ನು ಕದಿಯಲು ಬಯಸುವ ಸುರ್ಟೊ ರಹಮತ್ ನೇತೃತ್ವದ ಭಯೋತ್ಪಾದಕ ಸಂಘಟನೆಯನ್ನು ತಡೆಯಲು ಕಾರ್ಯಾಚರಣೆ ನಡೆಸುವ ಕಥೆಯನ್ನು ಹೊಂದಿದೆ. ಸಂಗೀತ ಗುಲ್ಲಮೆ ರಸೂಲ್, ಛಾಯಾಗ್ರಹಣ ಟಿಮ್‌ಮೌರೈಸ್-ಜಾನ್ಸ್ ಅವರದಾಗಿದೆ. ಭಾಗ-4 ಚಿತ್ರವು ಇದೇ ತಿಂಗಳು ವಿಶ್ವದಾದ್ಯಂತ ಎಲ್ಲಾ ಭಾಷೆಗಳಲ್ಲಿ ತೆರೆಕಾಣುತ್ತಿದೆ.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top