ವಿದ್ಯಾರ್ಥಿಗಳ ಕಲಾ – ವಿಜ್ಞಾನ ಮಾದರಿ ವಸ್ತು ಪ್ರದರ್ಶನ

ಬೆಂಗಳೂರು,ಮಾ,3 : ಬಾನಂಗಳದ ಸೂರ್ಯನಿಂದ ಖರ್ಚಿಲ್ಲದೆ ವಿದ್ಯುತ್ ಪಡೆಯುವುದು, ಚಂದ್ರನಲ್ಲಿರುವ ನಾನಾ ವಿಸ್ಮಯಗಳು, ಮಳೆ ನೀರು ಕೊಯ್ಲು, ನಾನಾ ಕೃಷಿ ಮಾದರಿ ಇದು ನಗರದ ಹೆಸರಘಟ್ಟ ರಸ್ತೆಯ ನಿಸರ್ಗ ವಿದ್ಯಾನಿಕೇತನ ಶಾಲೆಯಲ್ಲಿ ಕಂಡು ಬಂದ ದೃಶ್ಯ. ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ‘ನಿಸರ್ಗ ಆವರಣ’ ದಲ್ಲಿ ಜ್ಞಾನ- ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಮಕ್ಕಳು ತಯಾರಿಸಿಕೊಂಡು ಬಂದಿದ್ದ ನಾನಾ ತರದ ಮಾದರಿಗಳು, ಅವುಗಳ ಕುರಿತು ಮಕ್ಕಳು ನೀಡುತ್ತಿದ್ದ ತೊದಲು ನುಡಿಯ ವಿವರಣೆ, ಪ್ರದರ್ಶನ ವೀಕ್ಷಿಸಲು ಆಗಮಿಸಿದ್ದ ಅತಿಥಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರ ಮೆಚ್ಚುಗೆಗೆ ಪಾತ್ರವಾಯಿತು.

ಎಲ್ಲರಿಂದಲೂ ಭೇಷ್ ಎನಿಸಿಕೊಂಡ ವಿದ್ಯಾರ್ಥಿಗಳು ಕಣ್ಣೇದುರೆ ಸೌರಮಂಡಲ, ಚಪ್ಪಾಳೆ ತಟ್ಟಿದರೆ ಆನ್ಆಗುವ, ಪುನಃ ತಟ್ಟಿದರೆ ಆಫ್ಆಗುವ ವಿದ್ಯುತ್ಬಲ್ಬ್ ಎಲ್ಲರ ಆಕರ್ಷಣೆಯ ಕೇಂದ್ರವಾಗಿತ್ತು. ಮೆಟ್ರೋ, ಪ್ರಾಣಿ ಸಂಗ್ರಹಾಲಯ, ಸಾರ್ವಜನಿಕ ಉದ್ಯಾನವನ, ಕಾಡು ಪ್ರಾಣಿಗಳು, ಹಣ್ಣಿನ ಮಾದರಿಗಳು, ತರಕಾರಿಗಳು, ಹೂವುಗಳ ಪ್ರಕಾರಗಳು ಸೇರಿದಂತೆ ನಾನಾ ತರದ ಮಾದರಿಗಳು ಎಲ್ಲರ ಮನ ಸೆಳೆದವು. ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಸುತ್ತಲಿನ ಶಾಲಾ- ಕಾಲೇಜುಗಳ ಶಿಕ್ಷ ಕರು, ವಿದ್ಯಾರ್ಥಿಗಳು ಪ್ರದರ್ಶನ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಕನ್ನಡ ಕವಿ, ವಿದ್ವಾಂಸರ ಪರಿಚಯ ಮನೋಜ್ಞ ರಂಗೋಲಿಯಲ್ಲಿ ನಾನಾ ಆಕರ್ಷಿಣೀಯ ಚಿತ್ರಗಳು ನೋಡುಗರನ್ನು ಆಕರ್ಷಿಸಿದರೆ. ಇನ್ನೂ ಕನ್ನಡ ಭಾಷೆ ಬಳಕೆ ಕವಿಗಳು, ವಿದ್ವಾಂಸರ ಪರಿಚಯ ಕನ್ನಡ ವ್ಯಾಕರಣದ ಪದಗಳ ಬಳಕೆ ಕುರಿತು ಮಕ್ಕಳು ಅಚ್ಚುಕಟ್ಟಾಗಿ ಬರೆದಿದ್ದರು. ಸಾಧನೆ ಮಾಡಿದ ಸಾಧಕರ ಪೋಟೋ ಮತ್ತು ಅವರ ಪರಿಚಯ ಪ್ರದರ್ಶನದಲ್ಲಿ ಮಾಡಿಕೊಂಡಿದ್ದಾರೆ. ಕೋವಿಡ್ ಮುನ್ನಚ್ಚರಿಕೆ ಪಾಲನೆಯ ಜೊತೆಗೆ ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೆ ನೂರಾರು ನಾಗರಿಕರು, ಪಾಲಕರು, ವಿದ್ಯಾರ್ಥಿಗಳು ವಸ್ತು ಪ್ರದರ್ಶನವನ್ನು ಆಸಕ್ತಿಯಿಂದ ಉತ್ತಮ ಮಾಹಿತಿ ಪಡೆದುಕೊಂಡರು. ವಿದ್ಯಾರ್ಥಿಗಳಿಗೆ ಭೇಷ್

ವಸ್ತು ಪ್ರದರ್ಶನ ಉದ್ಘಾಟನೆ : ಬೆಂಗಳೂರಿನ ಶಾರದಾ ವಿದ್ಯಾಲಯದ ಸಂಸ್ಥಾಪಕ ಡಾ. ವೇಣುಗೋಪಾಲ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮಕ್ಕಳಲ್ಲಿ ಅಡಗಿದ್ದ ಸೂಕ್ತವಾದ ಪ್ರತಿಭೆಯನ್ನು ಹೊರ ಹಾಕಲು ವಸ್ತು ಪ್ರದರ್ಶನ ಅಗತ್ಯವಾಗಿದೆ ಎಂದು ಹೇಳಿದರು. ಶಿಕ್ಷಣ ತಜ್ಞ ಮತ್ತು ಪ್ರಾಂಶುಪಾಲ ಉದಯರತ್ನಕುಮಾರ್ ಮಾತನಾಡಿ, ಸಂಸ್ಥೆಯು ವಿದ್ಯಾರ್ಥಿಗಳ ಕ್ರಿಯಾಶೀಲತೆಯನ್ನು ಪ್ರದರ್ಶಿಸಲು ಪ್ರತಿ ವರ್ಷ ಏರ್ಪಡಿಸುತ್ತಾ ಬಂದಿರುವುದು ಸಂತಸವಾಗಿದೆ. ಇದು ನಿರಂತರವಾಗಿ ನಡೆಯಲಿದೆ. ಇಂತಹ ವಸ್ತು ಪ್ರದರ್ಶನಗಳು ಇಂದಿನ ಮಕ್ಕಳಿಗೆ ಅತ್ಯಂತ ಅವಶ್ಯಕ ಎಂದು ಹೇಳಿದರು. ನಿಸರ್ಗ ವಿದ್ಯಾನಿಕೇತನ ಶಾಲೆಯ ಆಡಳಿತಾಧಿಕಾರಿ ಯು. ಧನುಷ್ ಕುಮಾರ್ ವೇದಾಪುರಿ, ಮುಖ್ಯೋಪಾಧ್ಯಾಯರುಗಳಾದ ಜಯಮಾಲಾ ಶೆಟ್ಟಿ ಮತ್ತು ಎಸ್. ಕೆ. ಛಾಯಾ ಮತ್ತಿತರ ಗಣ್ಯರು ಭಾಗವಹಿಸಿದ್ದರು.


ಹಳ್ಳಿ ಸಂತೆ :
ರೈತ ಹಣ್ಣು- ತರಕಾರಿಗಳನ್ನು ಹೇಗೆಲ್ಲ ಬೆಳೆಯುತ್ತಾರೆ. ಅದು ರೈತನಿಂದ ವರ್ತಕನ ಮೂಲಕ ಗ್ರಾಹಕರಿಗೆ ಹೇಗೆ ಕೈ ತೋರುತ್ತದೆ. ವ್ಯಾಪಾರದಲ್ಲಿ ಆಗುವ ಲಾಭ ನಷ್ಟವೇನು? ಎನ್ನುವುದನ್ನು ಮಕ್ಕಳಿಗೆ ಪರಿಚಯಿಸಲು ‘ನಿಸರ್ಗ ಆವರಣ’ ದಲ್ಲಿ ನಡೆದ ‘ ಹಳ್ಳಿ ಸಂತೆ’ ಗೆ ಜನರು ಬಂದು ನಾನಾ ತರದ ತರಕಾರಿಗಳು, ಸೊಪ್ಪು, ಹಣ್ಣು ಹಂಪಲು ಕೊಂಡುಕೊಂಡರು. ಮಕ್ಕಳು ನೈಜ ವ್ಯಾಪಾರಿಗಳಂತೆ ತರಕಾರಿ ಬೆಲೆ ಕೂಗುತ್ತ, ಯಾವುದೇ ಚೌಕಾಸಿ ಆಸ್ಪದವಾಗದೆ ಮಾರಾಟ ಮಾಡುತ್ತಿದ್ದ ದೃಶ್ಯ ಎಲ್ಲರ ನಗುಮೊಗಕ್ಕೆ ಕಾರಣವಾಯಿತು.

Leave a Comment

Your email address will not be published. Required fields are marked *

Translate »
Scroll to Top