ಪವರ್ ಸ್ಟಾರ್ ಅಗಲಿಕೆಗೆ ಕಣ್ಣೀರಿಟ್ಟ ಹೃದಯವಂತ ಮಾಜಿ ಶಾಸಕ

ಕುಷ್ಟಗಿ:  ಡಾ.ರಾಜಕುಮಾರ ಕುಟುಂಬದ ಕಿರಿಯ ಮಗ ಪವರ್ ಸ್ಟಾರ್ ಪುನೀತ್ ರಾಜಕುಮಾರ ಹೃದಯಘಾತವಾಗಿ ಏಕಾಏಕಿಯಾಗಿ  ಮೃತಪಟ್ಟಿದನ್ನು ಕಂಡು ಕೊಪ್ಪಳ ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ಹಾಗೂ ಹೃದಯವಂತ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಕಂಬನಿ ಮಿಡಿದು ಕಣ್ಣಲ್ಲಿ ನೀರನ್ನು ತಂದು ದುಃಖವನ್ನು ಪಟ್ಟರು.

ಇಲ್ಲಿನ ಸರ್ಕಿಟ್ ಹೌಸ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಡಾ.ಪುನೀತ್ ರಾಜಕುಮಾರ ನನಗೆ ಬಹಳ ಚಿರಪರಿಚಿತರು ಏಕಾಏಕಿಯಾಗಿ ಅವರು ಹೃದಯಾಘಾತದಿಂದ ಮರಣ ಹೊಂದಿದನ್ನು ಕಂಡು  ನನಗೆ ಬಹಳ ದುಃಖವಾಗುತ್ತಿದೆ ಎಂದರು.

ಪುನೀತ್ ರಾಜಕುಮಾರ ಅತ್ಯಂತ ಅದ್ಬುತ ಕಲಾವಿದ ತನ್ನ ಕಲಾ ಸೇವೆಯನ್ನು ಮಾಡುತ್ತಾ ಉತ್ತಮವಾದ ಸಂದೇಶವನ್ನು ಕೊಟ್ಟು ಸಮಾಜದ ಸೇವೆಯನ್ನು ಮಾಡುತ್ತಾ ಬಡವರ ಆಶಾಕಿರಣವಾಗಿದ್ದರು. ಅಂತಹ ಸುಪುತ್ರನನ್ನು ಕಳೆದುಕೊಂಡ ಪುನೀತ್ ರಾಜಕುಮಾರ ಅವರ ಅಪಾರವಾದ ಅಭಿಮಾನಿ ಬಳಗ ಹಾಗೂ ಸಿನಿಮಾ ಇಂಡಸ್ಟ್ರಿಯಲ್, ಡಾ.ರಾಜಕುಮಾರ ಕುಟುಂಬಸ್ಥರು ಬಹಳ ನೋವನ್ನು ಪಡುತ್ತಿದ್ದಾರೆ.

 ಆದ್ದರಿಂದ ಪರಮಾತ್ಮನ ಪಾದಕ್ಕೆ ಸೇರಿರುವ ಪುನೀತ್ ರಾಜ್‍ಕುಮಾರನ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಅವರ ಕುಟುಂಬಕ್ಕೆ ಆ ದೇವರು ಶಾಂತಿ ನೀಡಲಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಚಂದ್ರಕಾಂತ ವಡಗೇರಿ, ಪ್ರಭು ಶಂಕರಗೌಡ ಪಾಟೀಲ, ಮುತ್ತಣ್ಣ ಸೇರಿದಂತೆ ಹಲವಾರರು ಉಪಸ್ಥಿತರಿದ್ದರು

.

Leave a Comment

Your email address will not be published. Required fields are marked *

Translate »
Scroll to Top