ಕಾರಟಗಿ : ತಾಲೂಕಿನ ಸಿದ್ದಾಪುರ ಗ್ರಾಪಂ ವ್ಯಾಪ್ತಿಯಲ್ಲಿ ಗುರುವಾರ ರಾತ್ರಿ ವೇಳೆ ಗಾಳಿ ಸಹಿತ ಆಲಿಕಲ್ಲು ಮಳೆಗೆ ಹಾನಿಯುಂಟಾದ ಮನೆಗಳಿಗೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಮಾನ್ಯ ಡಾ.ಡಿ.ಮೋಹನ್ ಅವರು ಶುಕ್ರವಾರ ಬೆಳಂಬೆಳಗ್ಗೆ 6.30ಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಿದರು. ಗಾಳಿ, ಮಳೆಗೆ ಗ್ರಾಮದ ಕೆಲವೆಡೆ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಜೊತೆಗೆ ಕೆಲ ಮನೆಗಳ ಟೀನ್ ಶೆಡ್ ಹಾರಿ ಹೋಗಿವೆ. ಇನ್ನೂ ಹಲವಾರು ಮನೆಗಳು ಹಾನಿಗಿಡಾಗಿದ್ದವು. ಬೆಳಂಬೆಳಗ್ಗೆ ಗ್ರಾಮಕ್ಕೆ ಡಾ.ಡಿ.ಮೋಹನ್ ಅವರು ಭೇಟಿ ನೀಡಿ ಹಾನಿಗೀಡಾದ ಎಲ್ಲ ಮನೆಗಳನ್ನು ವೀಕ್ಷಣೆ ಮಾಡಿದರು. ಜೊತೆಗೆ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದರು.

ಈ ವೇಳೆ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ಸಾಯಿನಾಥ, ಗ್ರಾಪಂ ಅಧ್ಯಕ್ಷರಾದ ಶ್ವೇತಾ ದೇವರಾಜ, ಸದಸ್ಯರಾದ ಚನ್ನಬಸನಗೌಡ ಮಾಲಿಪಾಟೀಲ್, ಶರಣಪ್ಪ ವದಿಗೇರಿ, ಬಿ.ಚಂದ್ರಶೇಖರ, ಲಕ್ಷ್ಮೀದೇವಿ, ಹೊನ್ನುರಪ್ಪ, ಪ್ರಮುಖರಾದ ಸೂರ್ಯಕಾಂತ, ಮಾರೆಪ್ಪ ಮೋತಿ, ಮಾರೆಪ್ಪ ಸೇರಿ ಇತರರು ಇದ್ದರು.
