ದುಡಿಯುವ ಕೈಗಳಿಗೆ ಉದ್ಯೋಗ’ : ಬೃಹತ್ ಉದ್ಯೋಗ ಮೇಳ

ತುಮಕೂರು :  ಒಕ್ಕಲಿಗ ಯುವ ಬ್ರಿಗೇಡ್‌ ಮತ್ತು ಎನ್‌ಆರ್‌ಐ ಒಕ್ಕಲಿಗರ ಬ್ರಿಗೇಡ್‌ ವತಿಯಿಂದ ಅವರ ವತಿಯಿಂದ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ.

ʼದುಡಿಯುವ ಕೈಗಳಿಗೆ ಉದ್ಯೋಗ ಮೇಳʼ ಜನವರಿ 28ರಂದು ತುಮಕೂರಿನ ಶ್ರೀ ಸಿದ್ಧಗಂಗಾ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ. ಎಸ್ಸೆಸ್ಸೆಲ್ಸಿ ಪಾಸ್‌ / ಫೇಲ್‌ ಆದವರಿಂದ ಹಿಡಿದು ಸ್ನಾತಕೋತ್ತರ ಪದವಿಯ ವಿದ್ಯಾರ್ಹತೆ ಹೊಂದಿದವರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದು ಎಂದು ಒಕ್ಕಲಿಗ ಯುವ ಬ್ರಿಗೇಡ್‌ ಮತ್ತು ಎನ್‌ಆರ್‌ಐ ಒಕ್ಕಲಿಗರ ಬ್ರಿಗೇಡ್‌ನ ಸ್ಥಾಪಕ ಅಧ್ಯಕ್ಷ ನಂಜೇಗೌಡ ನಂಜುಂಡ ತಿಳಿಸಿದ್ದಾರೆ.

 

ಈಗಾಗಲೆ ಬೆಂಗಳೂರು ಮತ್ತು ಮೈಸೂರಿನಲ್ಲಿ ಆಯೋಜನೆಗೊಂಡಿರುವ ಉದ್ಯೋಗ ಮೇಳಗಳು ಅಭೂತಪೂರ್ವ ಯಶಸ್ಸನ್ನು ಗಳಿಸಿದ್ದು ಕನಿಷ್ಠ 1000 ಕ್ಕೂ ಅಧಿಕ ಮಂದಿಗೆ ಉದ್ಯೋಗ ದೊರೆತಿರುವುದು ಸಂಸ್ಥೆಯ ಹಿರಿಮೆ.

ಎಸ್ಸೆಸ್ಸೆಲಿ, ಪಿಯುಸಿ ಅಥವಾ ಯಾವುದೇ ಪದವಿಯಲ್ಲಿ ಪಾಸ್‌ ಅಥವಾ ಫೇಲ್‌ ಆದವರು, ಐಟಿಐ, ಡಿಪ್ಲೋಮಾ, ಎಂಜಿನಿಯರಿಂಗ್‌, ಸ್ನಾತಕೋತ್ತರ ಪದವಿ, ಎನ್‌ಟಿಟಿ / ಟಿಸಿಎಚ್‌ / ಬಿ.ಎಡ್‌. / ಎಂ.ಎಡಿ ವಿದ್ಯಾರ್ಹತೆ ಹೊಂದಿದರವರು ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದು. ಭಾಗವಹಿಸಲು ಇಚ್ಛಿಸುವವರು ಮೊದಲೇ ಹೆಸರು ನೋಂದಾಯಿಸುವುದು ಕಡ್ಡಾಯ.

ನಿರ್ಮಲಾನಂದನಾಥ ಮಹಾ ಸ್ವಾಮೀಜಿ ಹಾಗೂ ಶ್ರೀ ಸಿದ್ದಲಿಂಗ ಮಾಹಾ ಸ್ವಾಮೀಜಿ ಅವರ ಆಶೀರ್ವಾದಗಳೊಂದಿಗೆ ಉದ್ಯೋಗ ಮೇಳ ಆಯೋಜನೆಗೊಳ್ಳಲಿದೆ.

ಉದ್ಯೋಗ ಮೇಳದಲ್ಲಿ ಭಾಗವಹಿಸುವ ಕಂಪೆನಿಗಳ

ಡೊಮಿನೋಸ್, ರಾಣೆ ಇಂಜಿನ್ ಪ್ರೈವೆಟ್‌ ಲಿಮಿಟೆಡ್, 24X7 ಕಾರ್ಸ್ ಪ್ರೈವೆಟ್‌ ಲಿಮಿಟೆಡ್, ರುಚಾ ಎಂಜಿನಿಯರಿಂಗ್ ಪ್ರೈವೆಟ್‌ ಲಿಮಿಟೆಡ್, ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಪ್ರೈವೆಟ್‌ ಲಿಮಿಟೆಡ್, ಟಿಎಂಐ ಗ್ರೂಪ್‌, ಮೆಡಿಪ್ಲಸ್, ಮೈನಿ ಉತ್ಪನ್ನಗಳು, ಅಪೋಲೋ ಫಾರ್ಮಸಿ, ಸೊಡೆಕ್ಸೊ ಇಂಡಿಯಾ ಲಿಮಿಟೆಡ್, ನವಭಾರತ್ ಫರ್ಟಿಲೈಸರ್ಸ್ ಪ್ರೈವೆಟ್‌ ಲಿಮಿಟೆಡ್, ಲೇಬರ್ನೆಟ್ ಸರ್ವೀಸಸ್ ಇಂಡಿಯಾ ಪ್ರೈವೆಟ್‌ ಲಿಮಿಟೆಡ್, ಸಬ್‌ವೇ ಹಾಸ್ಪಿಟಾಲಿಟಿ ಪ್ರೈವೆಟ್‌ ಲಿಮಿಟೆಡ್, ಸಹಾರಾ ಲೇಬಲ್ಸ್ ಪ್ರೈವೆಟ್‌ ಲಿಮಿಟೆಡ್, ಕ್ವೆಸ್ ಕಾರ್ಪ್‌ ಪ್ರೈವೆಟ್‌ ಲಿಮಿಟೆಡ್, ಮಹಾಲಕ್ಷ್ಮೀ ಸ್ವೀಟ್ಸ್ ಪ್ರೈವೆಟ್‌ ಲಿಮಿಟೆಡ್, ಟ್ರಾನ್ಸ್‌ವರ್ಲ್ಡ್ ಪ್ರೈವೆಟ್‌ ಲಿಮಿಟೆಡ್, ಜಿಆರ್‌ ಗ್ರೂಪ್‌, ಪ್ರಿಂಟ್ ಜೆಟ್ ಸೊಲ್ಯುಷನ್‌, ಮಹೀಂದ್ರಾ ದೂರ ಸಂಪರ್ಕ, ಜನ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್, ಜೆವಿಎಸ್‌ ಎಲೆಕ್ಟ್ರಾನಿಕ್ಸ್ ಪ್ರೈವೆಟ್‌ ಲಿಮಿಟೆಡ್, ವೀರಭದ್ರ ಎಂಟರ್‌ಪ್ರೈಸಸ್, ಮ್ಯಾನ್‌ಪವರ್ ಗ್ರೂಪ್ ಇಂಡಿಯಾ ಲಿಮಿಟೆಡ್, ತಪಸಿ ಮೋಟಾರ್ಸ್ ಪ್ರೈವೇಟ್ ಲಿಮಿಟೆಡ್, ಕೋರೆಸ್ ಎಂಜಿನಿಯರಿಂಗ್ ಪ್ರೈವೆಟ್‌ ಲಿಮಿಟೆಡ್, ಅಡೆಕೋ ಇಂಡಿಯಾ ಲಿಮಿಟೆಡ್, ಪ್ಯಾರಾಮೌಂಟ್ ಸೊಲ್ಯುಷನ್‌, ಸುರಕ್ಷಾ ಕಾರ್ ಕೇರ್, ಎಚ್‌ಡಿಎಫ್‌ಸಿ ಲೈಫ್ ಇನ್ಶುರೆನ್ಸ್ ಲಿಮಿಟೆಡ್, ಯುಕ್ತಿ ಡಾಟಾಸಾಫ್ಟ್ ಸೊಲ್ಯುಷನ್‌ ಪ್ರೈವೆಟ್‌ ಲಿಮಿಟೆಡ್, ಸಿಟಿಡಿಐ ಇಂಡಿಯಾ ಲಿಮಿಟೆಡ್, ಏರ್ ಇಂಡಿಯಾ ಸೇರಿ ಸುಮಾರು 50 ಕಂಪೆನಿಗಳು ಭಾಗವಹಿಸಲಿವೆ.

ಉದ್ಯೋಗಾವಕಾಶಗಳು

ಹೌಸ್‌ ಕೀಪಿಂಗ್‌ / ಸೇಲ್ಸ್‌ ಬಾಯ್‌ / ಆಫೀಸ್‌ ಅಸಿಸ್ಟೆಂಟ್‌, ಡ್ರೈವರ್‌ / ಡೆಲಿವರಿ ಬಾಯ್‌, ಸೆಕ್ಯುರಿಟಿ ಸರ್ವಿಸಸ್‌, ಡಿಟಿಪಿ, ಸಾಫ್ಟ್‌ವೇರ್‌ / ಹಾರ್ಡ್‌ವೇರ್‌, ಟೀಚಿಂಗ್‌ / ಟ್ರೈನಿಂಗ್‌, ಕೌಂಟರ್‌ ಸೇಲ್ಸ್‌ / ಮಾರ್ಕೆಟಿಂಗ್‌ / ಟೆಲಿ ಮಾರ್ಕೆಟಿಂಗ್‌ ಮುಂತಾದ ಉದ್ಯೋಗಾವಕಾಶಗಳಿವೆ.

ಹೆಚ್ಚಿನ ಮಾಹಿತಿಗೆ  ಸಂಪರ್ಕಿಸಿ :

 

ಮೋಹನ್- 9686564192 ಮತ್ತು ಚಿರಾಗ್-9632501500

Facebook
Twitter
LinkedIn
WhatsApp
Email
Print
Telegram

Leave a Comment

Your email address will not be published. Required fields are marked *

Translate »
Scroll to Top