ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ

ದಾವಣಗೆರೆ : ಚುನಾವಣೆಗಳ ನೀತಿ ಸಂಹಿತೆ ಹೆಸರಿನಲ್ಲಿ ಹಳ್ಳಿಯಿಂದ ದಿಲ್ಲಿವರೆಗೆ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗುವ ಹಿನ್ನೆಲೆಯಲ್ಲಿ ನೀತಿ ಸಂಹಿತೆ ವಿಚಾರದಲ್ಲಿ ಕೇಂದ್ರ ಚುನಾವಣಾ ಆಯೋಗ ಪರಾಮರ್ಶೆ ಮಾಡಿ, ನೀತಿ ಸಂಹಿತೆ ಮಾರ್ಪಾಡಿಗೆ ಮುಂದಾಗುವುದು ಸೂಕ್ತ ಎಂದು ಸಿರಿಗೆರೆಯ ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಲಹೆ ನೀಡಿದರು. ತಾಲೂಕಿನ ಅಣಬೇರು ಗ್ರಾಮದಲ್ಲಿ ಭಾನುವಾರ ಶ್ರೀ ಈಶ್ವರ, ಶ್ರೀ ಆಂಜನೇಯ ಸ್ವಾಮಿ, ಶ್ರೀ ಕುಕ್ವಾಡೇಶ್ವರಿ ದೇವಿ ದೇವಸ್ಥಾನಗಳ ಉದ್ಘಾಟನೆ, ಮೂರ್ತಿ ಪ್ರತಿಷ್ಟಾಪನೆ ಮತ್ತು ಕಳಸಾರೋಹಣ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಅವರು,
ಗ್ರಾಪಂನಿ0ದ ಲೋಕಸಭೆ ಚುನಾವಣೆ ಬಂದವೆ0ದರೆ ನೀತಿ ಸಂಹಿತೆ ಜಾರಿಗೊಂಡು, ಅಭಿವೃದ್ಧಿ ಕಾರ್ಯಗಳು ತಿಂಗಳುಗಟ್ಟಲೇ ಕುಂಠಿತವಾಗುತ್ತಿರುವುದನ್ನೂ ಆಯೋಗ ಗಮನಿಸಲಿ ಎಂದರು. ದೇಶದಲ್ಲಿ ೧೮ ವರ್ಷ ಮೇಲ್ಪಟ್ಟವರಿಗೆ ಮತದಾನದ ಹಕ್ಕು ಇದ್ದು, ಪ್ರತಿಯೊಬ್ಬರಿಗೂ ತಮ್ಮ ಅಮೂಲ್ಯ ಮತದ ಬಗ್ಗೆ ಅರಿವಿದೆ. ಯಾರೋ ಆಶ್ವಾಸನೆ ಕೊಟ್ಟಾಕ್ಷಣ ಬದಲಾಗುವಷ್ಟು ಮತದಾರರೇನೂ ಅಪ್ರಬುದ್ಧರಲ್ಲ. ಮತದಾರರೂ ಪ್ರಬುದ್ಧರಿದ್ದು, ಯಾರನ್ನು ಆಯ್ಕೆ ಮಾಡಬೇಕೆಂಬುದನ್ನು ತೀರ್ಮಾನಿಸುವಷ್ಟು ಸಶಕ್ತರಾಗಿದ್ದಾರೆ. ಈ ಹಿನ್ನೆಲೆಯಲ್ಲಿನೀತಿ ಸಂಹಿತೆ ಹೆಸರಿನಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗುವುದು ತರವಲ್ಲ. ಸಂಸದ ಜಿ.ಎಂ.ಸಿದ್ದೇಶ್ವರ ಲೋಕಸಭೆಯಲ್ಲಿ ನೀತಿ ಸಂಹಿತೆ ವಿಚಾರವನ್ನು ಪ್ರಸ್ತಾಪಿಸಿ, ಅಭಿವೃದ್ಧಿ ಕಾರ್ಯಗಳು ಕುಂಠಿತವಾಗದ0ತೆ ನೀತಿ ಸಂಹಿತೆ ಸಡಿಲಿಕೆಗೆ ಕೇಂದ್ರದ ಮೇಲೆ ಒತ್ತಡ ಹೇರಬೇಕು ಎಂದು ಅವರು ಸೂಚಿಸಿದರು. ಭರಮಸಾಗರ ಭಾಗದ ಕೆರೆಗಳನ್ನು ತುಂಬಿಸುವ ನೂರಾರು ಕೋಟಿ ರು.ಗಳ ಯೋಜನೆಗೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷದ ಸರ್ಕಾರಗಳು, ಜನ ಪ್ರತಿನಿಽಗಳು ಪಕ್ಷಾತೀತವಾಗಿ ಸ್ಪಂದಿಸಿದ್ದಾರೆ. ಪರಿಣಾಮ ಇಂದು ಭರಮಸಾಗರ ತಾಲೂಕಿನ ಕೆರೆಗಳು ನೀರನ್ನು ಕಾಣುವಂತಹ ಸಂದರ್ಭ ಬಂದಿದೆ. ಕೇವಲ ೬ ತಿಂಗಳಲ್ಲಿ ಕಾಮಗಾರಿ ಕೈಗೊಂಡಿದ್ದು, ಇಂತಹ ಕೆಲಸ ನಾಡಿನಾದ್ಯಂತ ಆಗಬೇಕು. ಆಳುವ ಸರ್ಕಾರಗಳಿಗೆ, ಜನ ಪ್ರತಿನಿಽಗಳಿಗೆ ಇಚ್ಛಾಶಕ್ತಿ, ಬದ್ಧತೆ ಇದ್ದರೆ ಯಾವುದೂ ಅಸಾಧ್ಯವಲ್ಲ. ಭರಮಸಾಗರ ಸೇರಿದಂ ತೆ ಅನೇಕ ಕೆರೆಗಳು ತುಂಬಿ, ರೈತರ ಬದುಕು ಹಸನಾಗಲಿ ಎಂದು ಅವರು ಹಾರೈಸಿದರು. ದೇವಸ್ಥಾನಗಳ ನಿರ್ಮಾಣಕ್ಕೆ ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಂಸದರು, ಸಚಿವರು ಹೀಗೆ ಜನ ಪ್ರತಿನಿಽಗಳು, ಸರ್ಕಾರದ ಅನುದಾನವನ್ನು ನೆಚ್ಚಿಕೊಂಡು ಕೂಡದೇ, ಆಯಾ ಗ್ರಾಮಸ್ಥರು, ಮುಖಂಡರು, ಭಕ್ತರೇ ದೇಣಿಗೆ ಸಂಗ್ರಹಿಸಿಕೊ0ಡು ದೇವ ಸ್ಥಾನ ನಿರ್ಮಿಸಬೇಕು. ಅಣಬೇರು ಗ್ರಾಮಸ್ಥರು ಎಲ್ಲರೂ ಕೂಡಿ, ಮೂರು ದೇವಸ್ಥಾನಗಳನ್ನು ನಿರ್ಮಿಸುವ ಮೂಲಕ ಸಾಮರಸ್ಯದ ಸಂದೇಶ ಸಾರಿದ್ದಾರೆ. ಎಲ್ಲರೂ ಸೇರಿ ಮಾಡಿರುವ ಈ ಕಾರ್ಯದಿಂದ ಇತರರಿಗೂ ಮಾದರಿಯಾಗಿದ್ದಾರೆ. ಇದೇ ರೀತಿ ಅಣ ಬೇರು ಗ್ರಾಮದಲ್ಲಿ ಸಹಬಾಳ್ವೆ ಮುಂದುವರಿಯಲಿ ಎಂದು ಸಿರಿಗೆರೆ ಶ್ರೀಗಳು ಹಾರೈಸಿದರು. ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನ0ದ ಪುರಿ ಸ್ವಾಮೀಜಿ ಮಾತನಾಡಿ, ಸಾಮಾಜಿಕ ಸಾಮರಸ್ಯದಿಂದ ಇರಬೇಕು, ಎಲ್ಲರೂ ಕೈಜೋಡಿಸಿ, ಕೆಲಸ ಮಾಡಿದರೆ ಯಾವುದೂ ಅಸಾಧ್ಯವಲ್ಲವೆಂಬುದನ್ನು ಅಣಬೇರು ಗ್ರಾಮಸ್ಥರು ಸಾಽಸಿ ತೋರಿಸಿದ್ದೀರಿ.


ನಾವು ಕನಕ ಗುರುಪೀಠಕ್ಕೆ ಗುರುಗಳಾದ ಸಿರಿಗೆರೆ ಶ್ರೀಗಳ ಮಾರ್ಗದರ್ಶನ ನಮಗೆ ಪ್ರೇರಣೆಯಾಯಿತು. ಪ್ರತಿ ವರ್ಷ ಶಿಸ್ತುಬದ್ಧವಾಗಿ ತರಳಬಾಳು ಹುಣ್ಣಿಮೆ ಮಹೋತ್ಸವ ಸಂಘಟಿಸಿ, ಲಕ್ಷಾಂತರ ಭಕ್ತರನ್ನು ಕೂಡಿಸಿ, ರೈತ ಪರ, ಜನ ಪರ ಕಾರ್ಯಗಳಿಗೆ ಮುನ್ನುಡಿ ಬರೆದು, ಅದು ಕಾರ್ಯ ರೂಪಕ್ಕೆ ಬರುವಂತೆ ಮಾಡುವ ಶ್ರೀಗಳು ನಮಗೆ ಪ್ರೇರಣೆ. ಹುಣ್ಣಿಮೆ ಮಹೋತ್ಸವ ಆಗಿ ೧೫ ದಿನಕ್ಕೆ ಲೆಕ್ಕ ನೀಡುವುದೂ ಸೇರಿದಂತೆ ಸಮಾಜ ಸಂಘಟನೆ, ಮಾನವೀಯ, ರೈತ, ಗ್ರಾಮೀಣ ಪರ, ಶಿಕ್ಷಣ ಕಾರ್ಯ ಹೀಗೆ ಎಲ್ಲಾ ವಿಚಾರದಲ್ಲೂ ಗುರುಗಳು ನಮಗೆ ಪ್ರೇರಣೆಯಾಗಿದ್ದಾರೆ ಎಂದು ಹೇಳಿದರು ಸಂಸದ, ಕೇಂದ್ರದ ಮಾಜಿ ಸಚಿವ ಡಾ.ಜಿ.ಎಂ.ಸಿದ್ದೇಶ್ವರ ಮಾತನಾಡಿ, ಅಣಬೇರು ಹಾಗೂ ಸುತ್ತಮುತ್ತಲಿನ ೩-೪ ಸಾವಿರ ಜನ ಇಲ್ಲಿ ಸೇರಿರುವುದು ಗ್ರಾಮಸ್ಥರ ಒಗ್ಗಟ್ಟು, ಸಹಬಾಳ್ವೆಯನ್ನು ತೋರಿಸುತ್ತದೆ. ಸದ್ಯಕ್ಕೆ ಚುನಾವಣೆ ನೀತಿ ಸಂಹಿತೆ ಇದ್ದು, ಈ ಭಾಗದ ಜನರ ಬೇಡಿಕೆ ಬಗ್ಗೆ ನಮಗೆ ಅರಿವಿದೆ. ಮುಂದಿನ ದಿನಗಳಲ್ಲಿ ನಿಮ್ಮ ಊರಿಗೆ ಏನಾದರೂ ಅನುಕೂಲ ಮಾಡಿಕೊಡುವುದಾಗಿ ಭರವಸೆ ನೀಡಿದರು. ಲಿಡ್ಕರ್ ಅಧ್ಯಕ್ಷ, ಮಾಯಕೊಂಡ ಶಾಸಕ ಪ್ರೊ.ಎನ್.ಲಿಂಗಣ್ಣ ಸಹ ಗ್ರಾಮಸ್ಥರನ್ನುದ್ದೇಶಿಸಿ ಮಾತನಾಡಿದರು. ಹೆಬ್ಬಾಳ್ ವಿರಕ್ತ ಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಬಯಲು ಸೀಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಣಬೇರು ಜೀವನಮೂರ್ತಿ, ಜಿಪಂ ಮಾಜಿ ಅಧ್ಯಕ್ಷರಾದ ಅಣಬೇರು ಪಾರ್ವತಮ್ಮ, ಶೈಲಜಾ ಬಸವರಾಜ, ತಾಪಂ ಸದಸ್ಯೆ ಮಂಜುಳಾ ಶಿವಮೂರ್ತಿ, ಗ್ರಾಪಂ ಅಧ್ಯಕ್ಷೆ ಆಶಾ ಸೇರಿದಂತೆ ಗ್ರಾಮದ ಮುಖಂಡರು, ಗ್ರಾಮಸ್ಥರು ಪಾಲ್ಗೊಂಡಿದ್ದರು.

Leave a Comment

Your email address will not be published. Required fields are marked *

Translate »
Scroll to Top