ನಾಡು, ನುಡಿಗೆ ಡಾ.ರಾಜ್ ಕುಮಾರ್ ಕೊಡುಗೆ ಅನನ್ಯ

ಬೆಂಗಳೂರು; ಕನ್ನಡ ನಾಡು, ನುಡಿಗೆ ವರನಟ ಡಾ.ರಾಜ್ ಕುಮಾರ್ ನೀಡಿರುವ ಕೊಡುಗೆ ಅನನ್ಯವಾದುದು ಎಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ಬಣ್ಣಿಸಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿಂದು ಡಾ.ರಾಜ್ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ರಾಜ್ ಸಮಾದಿಗೆ ಪುಷ್ಪನಮನ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಡಾ.ರಾಜ್ ಕುಮಾರ್ ಅವರ ಹುಟ್ಟು ಹಬ್ಬವನ್ನು ರಾಜ್ಯಾದ್ಯಂತ ಅವರ ಅಭಿಮಾನಿಗಳು ರಕ್ತದಾನ, ಅನ್ನದಾನ ಮೊದಲಾದ‌ ಸಾಮಾಜಿಕ ಸೇವಾ ಕಾರ್ಯದ ಮೂಲಕ ಆಚರಿಸುತ್ತಿರುವುದನ್ನು ನೋಡಿದರೆ ಅವರ ಸರಳ ವ್ಯಕ್ತಿತ್ವ ಎಲ್ಲರಿಗೂ ತಿಳಿಯುತ್ತದೆ ಎಂದರು. ಡಾ.ರಾಜ್ ಕುಮಾರ್, ಪಾರ್ವತಮ್ಮ ರಾಜ್ ಕುಮಾರ್! ಪುನೀತ್ ರಾಜ್ ಕುಮಾರ್ ಅವರ ಆತ್ಮ ಕಂಠೀರವ ಸ್ಟುಡಿಯೋದಲ್ಲಿವೆ. ಅವರ ಸಮಾದಿಗಳ‌ ದರ್ಶನಕ್ಕೆ ನಿನ್ನೆಯಿಂದ ಸಾವಿರಾರು ಜನರು ಆಗಮಿಸುತ್ತಿದ್ದಾರೆ. ಅವರ ಜನಪ್ರಿಯತೆಗೆ ಇದು ಸಾಕ್ಷಿಯಾಗಿದೆ ಎಂದು ಹೇಳಿದರು.

ಮಹಾಲಕ್ಷ್ಮಿ ಲೇ ಔಟ್ ನಲ್ಲಿ 25 ಕಡೆಗಳಲ್ಲಿ ಡಾ.ರಾಜ್ ಕುಮಾರ್ ಜಯಂತಿಯನ್ನು ಇಂದು ಆಚರಿಸಲಾಗುತ್ತಿದೆ.‌ ಅವರನ್ನು ನಾವು ಕಳೆದು ಕೊಂಡಿದ್ದರೂ ಅವರು ಇನ್ನೂ ನಮ್ಮ ನಡುವೆ ಇದ್ದಾರೆ ಎಂದೇ ನಾವೆಲ್ಲ ಭಾವಿಸಿದ್ದೇವೆ.ಅವರ ಅಮೋಘ ಅಭಿನಯದ ಸತ್ಯ ಹರಿಶ್ಚಂದ್ರ ಸಿನಿಮಾ ನನ್ನ ಅಚ್ಚು ಮೆಚ್ಚಿನ ಸಿನಿಮಾ. ಅವರು ಅಭಿನಯಿಸಿರುವ ಎಲ್ಲ ಸಿನಿಮಾಗಳು ಉತ್ತಮ‌ ಸಾಮಾಜಿಕ‌ ಸಂದೇಶ ಹೊಂದಿದ್ದವು ಎನ್ಜುವುದನ್ನು ಬೇರೆ ಹೇಳಬೇಕಾಗಿಲ್ಲ ಎಂದರು. ಈ ಸಂದರ್ಭದಲ್ಲಿ ನೆ.ಲ.ನರೇಂದ್ರ ಬಾಬು, ಮಂಡಲದ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ಬಿಬಿಎಂಪಿ ಮಾಜಿ ಸದಸ್ಯ ರಾಜೇಂದ್ರಕುಮಾರ್ ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

Translate »
Scroll to Top