ಅಡುಗೆ ಮನೆಯೆಂದ ಮೇಲೆ ಗೃಹಿಣಿಯರಿಗೆ ಎಲ್ಲಾ ವಸ್ತುಗಳು ಇರಲೇಬೇಕು. ಕೆಲ ಸಾಧನಗಳು ಮನೆಯ ಗೃಹಿಣಿಯ ಕೆಲಸವನ್ನು ಸುಲಭವಾಗಿಸಿದೆ. ಫ್ರಿಡ್ಜ್ ಎಲ್ಲರ ಮನೆಯಲ್ಲಿಯು ಇದೆ ಎಂದರೆ ತಪ್ಪಾಗಲ್ಲ, ಆಹಾರ ಉಳಿದ ತಕ್ಷಣವೇ ಅದನ್ನು ಫ್ರಿಡ್ಜ್ ನಲ್ಲಿ ಶೇಖರಿಸಿಟ್ಟು ಬಿಡುತ್ತಾರೆ. ಆದರೆ ಇದರ ನಿರ್ವಹಣೆಯ ಬಗ್ಗೆ ಹೆಚ್ಚು ಗಮನ ಕೊಡಬೇಕಾಗುತ್ತದೆ. ನಾವು ಮಾಡುವ ಈ ತಪ್ಪುಗಳಿಂದ ಫ್ರಿಡ್ಜ್ ಸ್ಫೋಟಗೊಳ್ಳುವ ಸಾಧ್ಯತೆಯೇ ಅಧಿಕವಾಗಿದೆ. ಹೀಗಾಗಿ ಮನೆಯಲ್ಲಿರುವ ಕೆಲವು ಉಪಕರಣಗಳ ವಿಚಾರದಲ್ಲಿ ಸ್ವಲ್ಪ ಜಾಗರೂಕರಾಗಿರುವುದು ತುಂಬಾನೇ ಒಳ್ಳೆಯದು.
ಇತ್ತೀಚೆಗಿನ ದಿನಗಳಲ್ಲಿ ಮನೆಯಲ್ಲಿ ಫ್ರಿಡ್ಜ್ ಬಳಸುವುದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಮನೆಯಲ್ಲಿ ಸದಸ್ಯರ ಸಂಖ್ಯೆ ಕಡಿಮೆಯಾಗುತ್ತ ಹೋದಂತೆ ಮಾಡಿದ ಆಹಾರವು ಹಾಳಾಗಬಾರದೆನ್ನುವ ಕಾರಣ ಫ್ರಿಡ್ಜನ್ನು ಅವಲಂಬಿಸುವವರ ಸಂಖ್ಯೆಯೇ ಹೆಚ್ಚು. ಮನೆಯಲ್ಲಿ ತಯಾರಿಸಿದ ಆಹಾರವು ಕೆಡದಂತೆ ಉಳಿಯಲು ಸಹಕಾರಿಯಾಗಿದೆಯೋ ನಿಜ. ಆದರೆ ಈ ಸಾಧನವನ್ನು ಅಷ್ಟೇ ಅಚ್ಚುಕಟ್ಟಾಗಿ ನಿರ್ವಹಿಸಿದರೆ ಮಾತ್ರ ಯಾವುದೇ ಸಮಸ್ಯೆಗಳು ಬರುವುದಿಲ್ಲ. ಆದರೆ ಈ ಕೆಲವು ತಪ್ಪುಗಳನ್ನು ಮಾಡಿದರೆ ಫ್ರಿಡ್ಜ್ ಸ್ಫೋಟಗೊಳ್ಳುವ ಸಂಭವವೇ ಹೆಚ್ಚು. ಹೀಗಾಗಿ ಎಷ್ಟು ಜಾಗರೂಕರಾಗಿ ಈ ಸಾಧನಗಳನ್ನು ಬಳಸುತ್ತಿರೋ ಅಷ್ಟು ಒಳ್ಳೆಯದು.
ಹತ್ತು ವರ್ಷಕ್ಕಿಂತ ಹಳೆಯದಾದ ರೆಫ್ರಿಜರೇಟರ್ ಅನ್ನು ಮನೆಯಲ್ಲಿದ್ದರೆ ನೀವು ಎಚ್ಚರದಿಂದಿರಬೇಕು. ರೆಫ್ರಿಜರೇಟರ್ ಹಳೆಯದಾದರೆ, ಅದು ಸ್ಫೋಟಗೊಳ್ಳುವ ಅಪಾಯ ಹೆಚ್ಚು.
ಫ್ರಿಡ್ಜ್ ಅನ್ನು ಗೋಡೆಗೆ ತಾಗುವಂತೆ ಇರಿಸಿದರೆ ಫ್ರಿಡ್ಜ್ ಗ್ರಿಲ್ ಉತ್ಪಾದಿಸುವ ಗಾಳಿಗೆ ಸ್ಥಳವಕಾಶ ಕೊರತೆಯಿಂದ ಗ್ರಿಲ್ ಬಿಸಿಯಾಗಿ ಸ್ಫೋಟಗೊಳ್ಳುವ ಸಾಧ್ಯತೆಯೇ ಹೆಚ್ಚು.
ಅಸರ್ಮಪಕ ವೈರಿಂಗ್ ನಿಂದಾಗಿ ರೆಫ್ರಿಜರೇಟರ್ ಸ್ಫೋಟವಾಗಬಹುದು.
* ಫ್ರಿಡ್ಜ್‌ನ ಬಾಗಿಲು ಮುಚ್ಚುವಲ್ಲಿ ಏನಾದರೂ ಸಮಸ್ಯೆಯಿದ್ದರೆ, ತೇವಾಂಶ ಮತ್ತು ತಂಪಾದ ಗಾಳಿಯ ಸೋರಿಕೆಯಾಗಬಹುದು. ಈ ವೇಳೆಯಲ್ಲಿ ಫ್ರಿಡ್ಜ್ ಹೆಚ್ಚು ಬಿಸಿಯಾಗುವ ಸಾಧ್ಯತೆಯಿದ್ದು, ಇದು ಸ್ಫೋಟಕ್ಕೆ ಕಾರಣವಾಗುತ್ತದೆ.
ಹೆಚ್ಚಿನವರು ಫ್ರಿಡ್ಜ್ ನಲ್ಲಿ ಅಗತ್ಯಕ್ಕಿಂತ ಹೆಚ್ಚಿನ ವಸ್ತುಗಳನ್ನು ತುಂಬಿಸಿಡುತ್ತಾರೆ. ಇದರಿಂದಾಗಿ ಗಾಳಿಯ ಹರಿವು ನಿಂತು ಫ್ರಿಡ್ಜ್ ತುಂಬಾ ಬಿಸಿಯಾಗುತ್ತದೆ. ಈ ಬಗ್ಗೆ ಗಮನ ಕೊಡದಿದ್ದರೆ ಸ್ಫೋಟಕ್ಕೆ ಕಾರಣವಾಗಬಹುದು.
ವಿದ್ಯುತ್ ಸಮರ್ಪಕವಾಘಿ ಬಳಕೆಯಾಗದಿದ್ದರೂ ಸಹ ಫ್ರಿಡ್ಜ್ ಸ್ಪೋಟಗೊಳ್ಳುವ ಸಾಧ್ಯತೆ ಹೆಚ್ಚು.
ಹಾಗಾಗಿ ಈ ಎಲ್ಲ ಕಾರಣಗಳನ್ನ ತಿಳಿದುಕೊಂಡು ಫ್ರಿಡ್ಜ್ ಅನ್ನು ಸರಿಯಾಗಿ ನೋಡಿಕೊಳ್ಳಬೇಕಾಗಿದೆ.