ವಿಕಸಿತ ಭಾರತದ ಗುರಿಗೆ ದೈವ ಪ್ರೇರಣೆ; ಆ ದೈವವೇ ನನಗೆ ಶಕ್ತಿ ತುಂಬುತ್ತಿದೆ: ಪ್ರಧಾನಿ ಮೋದಿ

ನವದೆಹಲಿ: ಯಾವುದೋ ಮಹತ್ತರ ಕಾರ್ಯಕ್ಕಾಗಿ ಆ ದೇವರೇ ನನ್ನನ್ನು ಕಳುಹಿಸಿದ್ದಾನೆ. ದೇವರು ನನ್ನ ಕೈಹಿಡಿದು ನಡೆಸುತ್ತಿದ್ದಾನೆ ಎನಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಭಾರತವು ಮುಂದುವರಿದ ದೇಶವನ್ನಾಗಿ ಮಾಡಲು ೨೦೪೭ರವರೆಗೂ ತಾನು 24 ಗಂಟೆ ಕೆಲಸ ಮಾಡಬೇಕು. ಅದಕ್ಕಾಗಿ ಆ ದೇವರೇ ತನಗೆ ಚೈತನ್ಯ ನೀಡುತ್ತಿದ್ದಾನೆ. ೨೦೪೭ರೊಳಗೆ ವಿಕಸಿತ ದೇಶವನ್ನಾಗಿಸುವ ಗುರಿ ಈಡೇರುತ್ತದೆ ಎನ್ನುವ ವಿಶ್ವಾಸ ತನಗಿದೆ. ಈ ಗುರಿ ಸಾಧನೆಯಾಗುವವರೆಗೂ ಆ ದೇವರು ವಾಪಸ್ ಕರೆಸಿಕೊಳ್ಳುವುದಿಲ್ಲ ಎಂದು ಅವರು ಹೇಳಿದ್ದಾರೆ. ಇಂಡಿಯಾ ಟಿವಿ ವಾಹಿನಿ ಆಯೋಜಿಸಿದ ಕರ‍್ಯಕ್ರಮವೊಂದರಲ್ಲಿ ಅವರು ಮಾತನಾಡುತ್ತಿದ್ದರು.

ಭಾರತದ ಜಿಡಿಪಿ 2047ರೊಳಗೆ ೩೫ ಟ್ರಿಲಿಯನ್ ಡಾಲರ್ ಮಟ್ಟ ಮುಟ್ಟಬೇಕೆಂದೂ ಗುರಿ ಇಟ್ಟಿದೆ. ಭಾರತ ವಿಕಸಿತ ಅಥವಾ ಮುಂದುವರಿದ ದೇಶವಾಗಬೇಕಾದರೆ ಅಷ್ಟು ಜಿಡಿಪಿ ಸಾಧನೆ ಅವಶ್ಯ. ಹಾಗೂ ತಲಾದಾಯ ಹೆಚ್ಚಳವೂ ಬಹಳ ಮುಖ್ಯ. ಭಾರತ ಈ ಗುರಿ ಸಾಧಿಸಬೇಕಾದರೆ ರ‍್ಷಕ್ಕೆ ಶೇ. ೯ರ ದರದಲ್ಲಿ ಬೆಳವಣಿಗೆ ಹೊಂದಬೇಕೆಂದು ಹಲವು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಪಾಕಿಸ್ತಾನದ ತಾಕತ್ತು ಏನೆಂದು ಲಾಹೋರ್ಗೆ ಹೋಗಿ ತಿಳಿದುಕೊಂಡೆ: ಮೋದಿ

ಪಾಕಿಸ್ತಾನದ ಬಳಿ ಅಣು ಬಾಂಬ್ ಇರುವುದರಿಂದ ಅದಕ್ಕೆ ಗೌರವ ಕೊಡಬೇಕು ಎಂದು ಕಾಂಗ್ರೆಸ್ನ ಹಿರಿಯ ಮುಖಂಡ ಮಣಿಶಂಕರ್ ಅಯ್ಯರ್ ನೀಡಿದ ಹೇಳಿಕೆಗೆ ಪ್ರಧಾನಿಗಳು ವ್ಯಂಗ್ಯವಾಗಿ ತಿರುಗೇಟು ಕೊಟ್ಟಿದ್ದಾರೆ. ತಾನು ಖುದ್ದಾಗಿ ಲಾಹೋರ್ಗೆ ಹೋಗಿ ಅದರ ತಾಕತ್ತು ಏನೆಂದು ತಿಳಿದುಕೊಂಡು ಬಂದಿದ್ದೇನೆ ಎಂದು ನರೇಂದ್ರ ಮೋದಿ ಲೇವಡಿ ಮಾಡಿದ್ದಾರೆ. ನರೇಂದ್ರ ಮೋದಿ ಪ್ರಧಾನಿಯಾಗಿ ಒಂದು ರ‍್ಷದಲ್ಲಿ, ಅಂದರೆ ೨೦೧೫ರಲ್ಲಿ ದಿಢೀರನೇ ಲಾಹೋರ್ಗೆ ಹೋಗಿ ಅಂದಿನ ಪಾಕ್ ಪ್ರಧಾನಿ ನವಾಜ್ ಷರೀಫ್ ಅವರನ್ನು ಭೇಟಿ ಮಾಡಿ ಬಂದಿದ್ದರು.

 

ಪಾಕಿಸ್ತಾನದಲ್ಲಿ ಅಜ್ಞಾತ ವ್ಯಕ್ತಿಗಳು ಹತ್ಯೆಗಳನ್ನು ಮಾಡುತ್ತಿರುವುದರ ಹಿಂದೆ ಭಾರತದ ಕೈವಾಡ ಇದೆ ಎನ್ನುವ ಆರೋಪದ ಬಗ್ಗೆ ಮಾತನಾಡಿದ ಮೋದಿ, ಪಾಕಿಸ್ತಾನದಲ್ಲಿ ಯಾರಾದರು ಸತ್ತರೆ ಭಾರತದಲ್ಲಿ ಕೆಲವರು ಯಾಕೆ ಕಣ್ಣೀರು ಸುರಿಸಬೇಕು ಎಂದು ಕೇಳಿದ್ದಾರೆ.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top