ದೇವನಹಳ್ಳಿ:
ಇಂದಿನ ಯುವ ಪೀಳಿಗೆ ಹುಟ್ಟು ಹಬ್ಬವನ್ನು ಆಡಂಬರವಾಗಿ ಆಚರಿಸಿಕೊಳ್ಳದೇ ಸೇವಾ ಚಟುವಟಿಕೆ ಮೂಲಕ ಆಚರಿಸಿಕೊಂಡಾಗ ನಮ್ಮಿಂದ ಕೈಲಾದ ಸೇವೆ ಮಾಡಿದ ಆತ್ಮ ತೃಪ್ತಿ ಹೊಂದುತ್ತೇವೆ ಎಂದು ದೇವನಹಳ್ಳಿ ಪುರಸಭಾ ಸದಸ್ಯ ವೈ.ಆರ್.ರುದ್ರೇಶ್ ಅಭಿಪ್ರಾಯ ಪಟ್ಟರು.

ಅವರು ದೇವನಹಳ್ಳಿ ತಾಲ್ಲೂಕು ವಿಜಯಪುರ ಪಟ್ಟಣದ ಹೊರವಲಯದ ಸರ್ವೋದಯ ಸರ್ವೀಸ್ ಸೊಸೈಟಿ ಆವರಣದಲ್ಲಿ ತಮ್ಮ ಹುಟ್ಟು ಹಬ್ಬವನ್ನು ನಿರಾಶ್ರಿತರಿಗೆ ಊಟ ನೀಡುವ ಮೂಲಕ ಸರಳವಾಗಿ ಆಚರಿಸಿದ ವೇಳೆ ಮಾತನಾಡಿ ಸಾರ್ವಜನಿಕವಾಗಿ ಉಪಯೋಗವಾಗುವ ಕಾರ್ಯಗಳನ್ನು ಮಾಡಬೇಕು ಮಧ್ಯಪಾನ ಮೋಜು ಮಸ್ತಿ ಯಂತಹ ದುಷ್ಚಟಗಳಿಗೆ ದಾಸರಾಗದೇ ಸಮಾಜಕ್ಕೆ ನಮ್ಮಿಂದಾಗುವ ಉಪಯೋಗವನ್ನು ಸೇವೆ ಮಾಡುವ ಮೂಲಕ ಆಚರಣೆ ಮಾಡಬೇಕು, ನನ್ನ ಸ್ನೇಹಿತರ ಸಹಕಾರದಿಂದ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದು ಕೋವಿಡ್ ಎರಡನೇ ಅಲೆ ಸಂದರ್ಭದಲ್ಲಿ ಬಡವರಿಗೆ ಮಧ್ಯಾಹ್ನದ ಊಟ, ದಿನಸಿ ಕಿಟ್ ವಿತರಣೆ , ರೋಗಿಗಳಿಗೆ ಹಣ್ಣು ಹಂಪಲು ನೀಡಿದ್ದೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕಿರಣ್ ಗೌಡ, ಗಿರೀಶ್, ವಿನಯ್, ಹರ್ಷ, ನಿಖಿಲ್ ಮಹೇಶ್, ಮುರಳಿಕೃಷ್ಣ ಹಾಗು ಮಯೂರ ಯುವಕ ಸಂಘದ ಪದಾಧಿಕಾರಿಗಳು ಇನ್ನು ಅವರ ಸ್ನೇಹಿತರ ಬಳಗ ಇದ್ದರು.