ಬಳ್ಳಾರಿ: ಕಳೆದ 10 ವರ್ಷಗಳಲ್ಲಿ ಉಳ್ಳವರ ಪರವಾಗಿ ಅಡಳಿತ ನಡೆಸಿದ ಬಿಜೆಪಿ ಪಕ್ಷ ವನ್ನು ಧಿಕ್ಕರಿಸುವ ಮೂಲಕ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ನೀಡಬೇಕು ಎಂದು ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಚಿವ ಎಂ.ದಿವಾಕರಬಾಬು ತಿಳಿಸಿದ್ದಾರೆ.
ಬಳ್ಳಾರಿಯಲ್ಲಿ ಯುವಕಾಂಗ್ರೆಸ್ ಕಾಂಗ್ರೆಸ್ ಅಭ್ಯರ್ಥಿ ಈ ತುಕಾರಾಂ ರವರಿಗೆ ಮತನೀಡಲು ಹಮ್ಮಿಕೊಂಡಿದ್ದ ಸೈಕಲ್ ರ್ಯಾಲಿಗೆ ಎಂ.ದಿವಾಕರ ಬಾಬು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು.ಕಳೆದ 10 ವರ್ಷಗಳಲ್ಲಿ ದೇಶ ಬಂಡವಾಳ ಶಾಹಿಗಳ ಪರವಾಗಿ ಹಿಂದೂಳಿದ.ದೀನ ದಲಿತರ ಬಡವರ ಪರ ಯಾವುದೇ ಯೋಜನೆಗಳನ್ನು ಜಾರಿಗೆ ಮಾಡದೇ ಬಡವರನ್ನು ಬಡತನಕ್ಕೆ ದೂಡಿದ ಬಿಜೆಪಿ ಸರ್ಕಾರಕ್ಕೆ ಚುನಾವಣೆಯಲ್ಲಿ ತಕ್ಕಪಾಠ ಕಲಿಸಬೇಕು ಎಂದರು.
ರಾಜ್ಯದ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿಗಳ ಮೂಲಕ ನುಡಿದಂತೆ ನಡೆದ ಸರ್ಕಾರವಾಗಿದೆ.ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸದ ಪಕ್ಷ ನೀಡಿದ ಗ್ಯಾರಂಟಿ ಸಹ ಜಾರಿಗೆ ತರುವುದರೊಂದಿಗೆ ಬಡ ಜನತೆಗೆ ಅನೇಕ ಯೋಜನೆಗಳನ್ನು ಅಧಿಕಾರಕ್ಕೆ ಬಂದ ತಕ್ಷಣ ಜಾರಿಗೆ ತರಲಿದೆ ಎಂದರು. ರಾಜ್ಯ ಸರ್ಕಾರದ ಸಾಧನೆಗಳನ್ನು ಇತರೇ ರಾಜ್ಯಗಳು ಅನುಷ್ಠಾನಕ್ಕೆ ತರುತ್ತಲಿದ್ದು ಇದನ್ನು ಗಮನಿಸಿದರೇ ಜನ ಸಾಮನ್ಯರ ಕಷ್ಟಗಳಲ್ಲಿ ಬೆರೆಯುವಂತಹಗ್ಯಾರಂಟಿ ಯೋಜನೆಗಳು ಇದಾಗಿವೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ.ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷ ಅತೀ ಹೆಚ್ವಿನ ಸ್ಧಾನಗಳನ್ನು ಗೆಲ್ಲಲಿದೆ.ಇದರಿಂದಾಗಿ ಬಳ್ಳಾರಿ ಲೋಕಸಭಾ ಅಭ್ಯರ್ಥಿ ಈ ತುಕಾರಾಂ ರವರಿಗೆ ಅತೀ ಹೆಚ್ಚಿನ ಮತಗಳ ಅಂತರದಲ್ಲಿ ಗೆಲ್ಲಿಸಬೇಕು ಎಂದರು. ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸೈಕಲ್ ರ‍್ಯಾಲಿಯಲ್ಲಿ ಭಾಗವಹಿದ್ದರು.
ಈ ಸಂದರ್ಬದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಎಸ್.ಅರ್.ಎಸ್.ಚಾಂದಭಾಷ.ಉಪಾಧ್ಯಕ್ಷ ವೇಣುಗೋಪಾಲ್.ಬ್ಲಾಕ್ ಅದ್ಯಕ್ಷ ತೇಜಸ್ಸ್ ಕುಮಾರ್.ಶಿವರಾಮ ಕೃಷ್ಣ.ಪಾಲಿಕೆಯ ನಾಮ ನೀರ್ದೇಶಿತ ಸದಸ್ಯ ಸಮೀರ್.ಗೌತಮ್.ಅಬ್ಧುಲ್ ಸೇರಿದಂತೆ ಮುಖಂಡರುಗಳಾದ ಮಾರ್ಕೆಟ್ ಬುಜ್ಜಿ.ಹಮಾಲಿ ವಿರೇಶ್.ದೇವಿನಗರ ಸತ್ಯ.ಡಿಶ್ ರಾಮಾಂಜೀನಿ ದಾರದ ಮೀಲ್ ಶೇಖರ್.ಜಾಶ್ವ.ಡಿ.ಸುರೇಶ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.