ಮೇಷ : ಸಮಯವನ್ನು ವ್ಯರ್ಥ ಮಾಡಲು ಇಷ್ಟಪಡುವುದಿಲ್ಲ. ಇಂದು ನೀವು ನಿಮ್ಮ ಜವಾಬ್ದಾರಿಯ ಕಾರ್ಯದಲ್ಲಿ ಮಗ್ನರಾಗುವಿರಿ. ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಲು ಆಸಕ್ತಿಯು ಇರಲಿದೆ. ನಿಮ್ಮ ಪ್ರಾಮಾಣಿಕತೆಯನ್ನು ಪ್ರಶ್ನಿಸಬಹುದು. ವ್ಯಾಪಾರವನ್ನು ಬಹಳ ಉತ್ಸಾಹದಿಂದ ಮಾಡುವಿರಿ. ಸಂಗಾತಿಯನ್ನು ಭೇಟಿಯಾಗಲು ಕಾರಣವನ್ನು ಹುಡುಕುವಿರಿ. ತಾಯಿಗೆ ನೋವನ್ನು ಕೊಡುವ ಸಾಧ್ಯತೆ ಇದೆ. ವೃತ್ತಿಯಲ್ಲಿ ನಿಮ್ಮ ಸೇವೆಯು ಗಣನೀಯವಾಗಿರಲಿದೆ. ಏರು ದನಿಯಲ್ಲಿ ಹಿರಿಯ ಜೊತೆ ಮಾತನಾಡುವುದು ನಿಮಗೆ ಶೋಭೆ ತರದು. ನಿಮ್ಮನ್ನು ನಂಬಿಸಿ ಕೆಲಸವನ್ನು ಮಾಡಿಕೊಳ್ಳುವರು.
ವೃಷಭ : ಹಿತವಚನವು ನಿಮಗೆ ಯಾವ ಪರಿವರ್ತನೆಯನ್ನೂ ತರದು. ನಿಮ್ಮದು ಅಸಹಜತೆ ಎಂದು ಕೆಲವರಿಗೆ ಅನ್ನಿಸಬಹುದು. ಅನಿರೀಕ್ಷಿತ ಬದಲಾವಣೆಯನ್ನು ನೀವು ಸ್ವೀಕರಿಸಬೇಕಸದೀತು. ಎಂದೋ ಕಳೆದುಕೊಂಡ ವಸ್ತುವು ಇಂದು ಪ್ರಾಪ್ತವಾಗಿ ಸಂತೋಷವಾಗುವುದು. ಹಣದ ಅಭಾವವಿದ್ದರೂ ಖರ್ಚನ್ನು ಮಾಡಬೇಕಾದೀತು. ಮನೆಯಿಂದ ದೂರವಿದ್ದು ಬೇಸರವಾಗಬಹುದು. ನಿಮ್ಮ ಅಭಿಪ್ರಾಯಗಳನ್ನು ಹೇಳಲು ನೀವು ಮುಜುಗರ ಪಡುವಿರಿ. ಆಸ್ತಿಯ ವಿಚಾರವಾಗಿ ಮನೆಯಲ್ಲಿ ಮಾತನಾಡುವಿರಿ.
ಮಿಥುನ : ನೀವು ಏನಾದರೂ ನಿರ್ಧರಿಸಿದರೆ ನಿಮಗೆ ಸಂಪೂರ್ಣ ಬೆಂಬಲವು ಸಿಗಲಿದೆ. ಮನೆಗೆ ಬೇಕಾದ ವಸ್ತುಗಳನ್ನು ನೀವು ಖರೀದಿಸಲಿದ್ದೀರಿ. ವಾತಕ್ಕೆ ಸಂಬಂಧಿಸಿದ ಖಾಯಿಲೆಗಳೂ ಕಾಣಿಸಿಕೊಳ್ಳಬಹುದು. ಭವಿಷ್ಯದ ಬಗ್ಗೆ ಚಿಂತೆ ಇದ್ದರೂ ಬಂದಂತೆ ಸ್ವೀಕರಿಸಬೇಕು ಎನ್ನುವ ನಿರ್ಧಾರವನ್ನೂ ನೀವು ಮಾಡಲಿದ್ದೀರಿ. ಸಂಗಾತಿಯ ಮಾತು ನಿಮಗೆ ಸಿಟ್ಟನ್ನು ತಂದೀತು. ಮಕ್ಕಳ ವಿಚಾರದಲ್ಲಿ ಕರುಣೆ ಬಂದು ಅವರಿಗೆ ಇಷ್ಟವಾದುದನ್ನು ಮಾಡುವಿರಿ. ಕಛೇರಿಯಲ್ಲಿ ನಿಮಗೆ ಸ್ವಲ್ಪ ಬಿಡುವುದು ಸಿಗಲಿದೆ. ಆಟದತ್ತ ನಿಮಗೆ ಗಮನ ಹೆಚ್ವಿರಲಿದೆ. ನಿಮ್ಮ ಬೇಸರವನ್ನು ಆಪ್ತರ ಜೊತೆ ಹಂಚಿಕೊಳ್ಳುವಿರಿ.
ಕಟಕ : ನಿಮ್ಮ ಚೌಕಟ್ಟನ್ನು ಬಿಟ್ಟು ಆಚೆ ಇರಲಾರಿರಿ. ನೀವು ಸ್ವಾರ್ಥಿಗಳಂತೆ ತೋರಬಹುದು. ಸರ್ಕಾರದ ಸೌಲಭ್ಯವನ್ನು ಪಡೆಯಲು ನೀವು ಓಡಾಟ ಮಾಡಬೇಕಾದೀತು. ಮಾತಿನಿಂದ ನೀವು ಗೆಲ್ಲಲು ಯತ್ನಿಸುವಿರಿ. ಆರ್ಥಿಕತೆಗಾಗಿ ನಿರಂತರ ಶ್ರಮಿಸಬೇಕಾದೀತು. ಚಿತ್ತವನ್ನು ಸಮಾಧಾನವಾಗಿ ಇಟ್ಟಕೊಳ್ಳಲು ಪ್ರಯತ್ನಿಸಿ ವಿಫಲರಾಗುವಿರಿ. ಮನೋರಂಜನೆಗೆ ಹೆಚ್ಚಿನ ಸಮಯವನ್ನು ನೀವು ಕೊಡುವಿರಿ. ಇನ್ನೊಬ್ಬರಿಗೆ ಕೊಡುವುದು ನಿಮಗೆ ಇಷ್ಟವಾಗದು. ಆರೋಗ್ಯವು ಸ್ಥಿರವಾಗಿರಲಿದೆ. ಧಾರ್ಮಿಕ ಆಚರಣೆಗಳು ನಿಮಗೆ ಇಷ್ಟವಾಗದ ವಿಚಾರವಾಗಲಿದೆ.
ಸಿಂಹ : ಒಂಟಿಯಾಗಿ ಸುತ್ತಾಡಬೇಕು ಎಂದು ಅನ್ನಿಸಬಹುದು. ನಿಮ್ಮ ಬಳಿ ಸಾಮಾಜಿಕ ಕಳಕಳಿಯಿಂದ ಜನರು ಬರಬಹುದು. ಬಾರದೆಂದು ತಿಳಿದ ಹಣವು ಇಂದು ನಿಮ್ಮ ಕೈ ಸೇರಬಹುದು. ಕರ್ತವ್ಯಗಳತ್ತ ನಿಮ್ಮ ಗಮನವಿರಲಿದೆ. ನಿಮ್ಮ ಮೇಲೆ ಬಂದ ಅಪವಾದವನ್ನು ನೀವು ಇನ್ನೊಬ್ಬರ ಮೇಲೆ ಹಾಕಲಿದ್ದೀರಿ. ಮಾನಸಿಕ ನೋವನ್ನು ಕೊಡುವಲ್ಲಿ ಇಂದು ಆನಂದವನ್ನು ಹೊಂದುವಿರಿ. ಪ್ರಾಣಿಗಳ ಮೇಲೆ ಪ್ರೀತಿ ಅತಿಯಾಗಬಹುದು. ಅನುಮಾನವನ್ನು ಬಿಟ್ಟು ನೇರವಾಗಿ ಇರಲು ಪ್ರಯತ್ನಿಸಿ. ಇಂದು ನೀವು ಹೆಚ್ಚು ನಗಲಿದ್ದೀರಿ.
ಕನ್ಯಾ : ನಿಮ್ಮ ಮಾತಿನ ಮೇಲೆ ವಿಶ್ವಾಸದ ಕೊರತೆ ಅಧಿಕವಾಗಿ ಕಾಣಲಿದೆ.ವಾಹನವನ್ನು ಚಲಾಯಿಸುವಾಗ ಸಾವಧಾನತೆ ಇರಲಿ. ದೂರ ಹೋಗುವವರಿದ್ದರೆ ಹಿರಿಯರ ಆಸೀರ್ವಾದವನ್ನು ಪಡೆಯುವುದು ಉತ್ತಮ. ಸಂಗಾತಿಯು ನಿಮ್ಮ ಜೊತೆ ಜಗಳವಾಡಿ ಹಳೆಯ ವಿಚಾರವನ್ನು ಕೆದಕಿ ತೆಗೆಯಬಹುದು. ಸ್ತ್ರೀಸಂಬಂಧವಾದ ಅಪವಾದಗಳೂ ಬರಲಿದೆ. ಸಾರ್ವಜನಿಕ ಕೆಲಸದಲ್ಲಿ ನಿಮಗೆ ಮುಜುಗರವು ಹೆಚ್ಚಾದೀತು. ಆರೋಗ್ಯದ ವಿಚಾರವಾಗಿ ವೈದ್ಯರ ಜೊತೆ ಮಾತನಾಡಿ. ವಿವಾಹವಿಲ್ಲದೇ ನಿಮಗೆ ಬೇಸರವಾದೀತು. ಸಜ್ಜನರ ಜೊತೆ ಸಮಯವನ್ನು ಕಳೆಯುವಿರಿ.
ತುಲಾ : ಯಾರು ಏನೇ ಅಂದರೂ ನಿಮ್ಮ ತೀರ್ಮಾನವನ್ನು ಬದಲಿಸಿಕೊಳ್ಳಲಾರಿರಿ. ಸಾಮರಸ್ಯವನ್ನು ತಂದುಕೊಳ್ಳಲು ದಂಪತಿಗಳು ಶ್ರಮಿಸುವರು. ನಿಮಗೆ ಹಳೆಯ ಘಟನೆಗಳು ನೆನಪಾಗಿ ದುಃಖಿಸುವಿರಿ. ನೀವು ತಪ್ಪುಗಳನ್ನು ಒಪ್ಪಿಕೊಳ್ಳದೇ ಅಹಂಕಾರವನ್ನು ತೋರುವಿರಿ. ನಿಮ್ಮ ಬಗ್ಗೆ ಕಲಿಕಾರಭಾವವು ಇರಲಿದೆ. ನಿಮ್ಮಅಸಾಮಾನ್ಯ ಚಿಂತನೆಯಿಂದ ನೀವು ದೊಡ್ಡವರಾಗಬಹುದು. ಹೊಸ ಉದ್ಯೋಗವನ್ನು ಆರಂಭಿಸುವ ಬಗ್ಗೆ ನಿಮ್ಮೊಳಗೆ ಚಿಂತನೆಗಳು ನಡೆಯಬಹುದು. ನಿಮ್ಮ ಮಾತುಗಳು ನೇರವೂ ಕಠೋರವೂ ಅಗಿರಲಿದ್ದು, ನಿಮ್ಮ ಇಷ್ಟಪಡದವರ ಗುಂಪೊಂದು ತಯಾರಾಗಲಿದೆ.
ವೃಶ್ಚಿಕ : ಭಾವನಾತ್ಮಕ ವಿಚಾರಗಳಿಗೆ ಸ್ಪಂದಿಸಲು ಕಷ್ಟವಾದೀತು. ನಿಮ್ಮವರ ಮಾತುಗಳು ಬೇಸರವನ್ನು ತರಿಸಬಹುದು. ಸಾಲಗಾರರ ಕಿರಿಕಿರಿ ಅತಿಯಾಗಲಿದೆ. ಜನಜಾಗರಣ ಕಾರ್ಯದಲ್ಲಿ ಇಂದು ತೊಡಗಿಕೊಳ್ಳುವಿರಿ. ವಿದೇಶಕ್ಕೆ ಬರಲು ಆಹ್ವಾನವೂ ಬರಲಿದೆ. ಆತುರದ ಪ್ರಯಾಣವು ಬೇಡ. ಇಚ್ಛೆ ಇಲ್ಲದಿದ್ದರೂ ಸ್ನೇಹಿತರ ಮನೆಗೆ ಹೊಇಗಬೇಕಸದೀತು. ಆದಾಯದ ಬಗ್ಗೆ ಗಮನಹರಿಸಿ ಆರೋಗ್ಯವನ್ನು ಕಡೆಗಣಿಸುವಿರಿ. ಪುತ್ರೋತ್ಸವದ ಸುದ್ದಿಯಿಂದ ಖುಷಿ ಇರಲಿದೆ. ನಿಮ್ಮವರ ಮಾತಿನಲ್ಲಿ ಸತ್ತ್ವವಿಲ್ಲ ಎನಿಸಬಹುದು. ಉದ್ಯೋಗವನ್ನು ಹುಡುಕುವಲ್ಲಿ ಮಗ್ನರಾಗುವಿರಿ.
ಧನುಸ್ಸು : ವೃತ್ತಿಯಲ್ಲಿ ಯಾವುದೇ ತೊಂದರೆಗಳಿಲ್ಲದೇ ಎಲ್ಲವೂ ಮುಗಿಯಬಹುದು. ಸ್ತ್ರೀಯರಿಗೆ ಸಂಬಂಧಿಸಿದ ಖಾಯಿಲೆಯು ಹೆಚ್ಚಾಗಬಹುದು. ಬೇರೆ ಊರಿಗೆ ಹೋಗಿ ಸಂಕಟಪಡುವಿರಿ. ದಾಂಪತ್ಯದಲ್ಲಿ ಹೊಂದಾಣಿಯನ್ನು ತರಲು ಬಹಳ ಶ್ರಮವನ್ನು ವಹಿಸಬೇಕಾದೀತು. ಅಪರಿಚಿತ ವ್ಯಕ್ತಿಯಿಂದ ನೀವು ಹೆದರಿ ಸಂಪತ್ತನ್ನು ಕಳೆದುಕೊಳ್ಳಲಿದ್ದೀರಿ. ನಿಮಗೆ ಪ್ರೀತಿ ಪಾತ್ರರಿಂದ ಉಡುಗೊರೆ ಸಿಗಲಿದೆ. ವಿದ್ಯಾಭ್ಯಾಸವು ಯೋಗ್ಯರೀತಿಯಲ್ಲಿ ನಡೆಯಲಿದೆ. ಸ್ಥಳಾಂತರದ ಭೀತಿ ನಿಮ್ಮನ್ನು ಕಾಡಬಹುದು. ನಿಮ್ಮವರನ್ನು ನೀವು ಕಳೆದುಕೊಳ್ಳುವ ಭೀತಿಯಲ್ಲಿ ಇರುವಿರಿ. ಮಕ್ಕಳ ಜೊತೆ ಕಾಲವನ್ನು ಕಳೆಯುವಿರಿ.
ಮಕರ : ಮಾನಸಿಕ ನೋವಿನಿಂದ ಬಳಲುವಿರಿ. ಹೊಸತನ್ನು ಅಭ್ಯಾಸ ಮಾಡಬೇಕು ಎನ್ನುವ ಹಂಬಲವು ನಿಲ್ಲುವುದು. ನಟನೆಗೆ ಆಸಕ್ತಿಯು ಬರಲಿದೆ. ಸಾಮಾಜಿಕ ಕಾರ್ಯದಲ್ಲಿ ಮೆಚ್ಚುಗೆ ಸಿಗಲಿದೆ. ಕುಲದೇವರ ದರ್ಶನವನ್ನು ಮಾಡುವಿರಿ. ಕೋಪದ ಕೈಯಲ್ಲಿ ಬುದ್ಧಿಯನ್ನು ಅನಾಹುತವನ್ನು ಮಾಡಕೊಳ್ಳುವಿರಿ. ಆಕರ್ಷಕ ವಸ್ತುಗಳನ್ನು ಖರೀದಿಸಲಿದ್ದೀರಿ. ಅಧಿಕಾರ ವಿಶ್ವಾಸವನ್ನು ಗಳಿಸಿ ಹೆಚ್ಚಿನ ಜವಾಬ್ದಾರಿಯನ್ನು ಪಡೆಯುವಿರಿ. ಕೆಲಸದಲ್ಲಿ ನಿಮಗೆ ಗೊಂದಲವಿರಲಿದೆ. ರಾಜಕಾರಿಣಿಗಳ ಭೇಟಿಯಾಗಲಿದೆ. ನಿಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುವಿರಿ. ಪ್ರವಾಸದಿಂದ ನಿಮಗೆ ತೊಂದರೆಯಾಗಲಿದೆ.
ಕುಂಭ : ಉದ್ಯೋಗವನ್ನು ಬದಲಿಸಲು ಇಚ್ಛೆ ಇಲ್ಲದಿದ್ದರೂ ನಿಮಗೆ ಅನಿವಾರ್ಯ ಆದೀತು. ಬಿದ್ದು ಪೆಟ್ಟು ಮಾಡಿಕೊಳ್ಳುವ ಸಾಧ್ಯತೆ ಇದೆ. ಬಂಧುಗಳು ನಿಮಗೆ ಸಹಕಾರವನ್ನು ಕೊಡದೇ ಹೋಗಬಹುದು. ಮಾನಸಿಕ ನೋವನ್ನು ಮರೆಯಲು ಎಲ್ಲಿಗಾದರೂ ದೂರ ಹೋಗಲಿದ್ದೀರಿ. ಅಧ್ಯಾತ್ಮಕ್ಕೆ ಸಮಯ ಕೊಡುವುದು ಕಷ್ಟವಾದೀತು. ತೀರ್ಥಕ್ಷೇತ್ರಗಳ ದರ್ಶನವನ್ನು ನೀವು ಪಡೆಯುವಿರಿ. ಅನಾರೋಗ್ಯದಿಂದ ಕೆಲಸಗಳಿಗೆ ತೊಂದರೆಯಾಗಲಿದೆ. ಇನ್ನೊಬ್ಬರ ಮಾತಿನ್ನು ಕೇಳಿ ಯಾವ ತೀರ್ಮಾನವನ್ನು ತೆಗೆದುಕೊಳ್ಳುವುದು ಬೇಡ. ಹಿರಿಯರ ಮಾರ್ಗದರ್ಶನ ಸಿಗಲಿದೆ.
ಮೀನ : ಸ್ಥಿರಾಸ್ತಿಯನ್ನು ಖರೀದಿಸುವ ಸಂದರ್ಭದಲ್ಲಿ ನಾನಾ ತೊಂದರೆಗಳು ಬರಬಹುದು. ಗೊಂದಲಗಳು ನಿಮ್ಮ ಖರೀದಿಸುವ ತೀರ್ಮಾನವನ್ನು ಬದಲಿಸಲೂಬಹುದು. ಆರ್ಥಿಕ ಒತ್ತಡದಿಂದ ನೀವು ಆಚೆ ಬಂದು ನೆಮ್ಮದಿಯನ್ನು ಕಾಣುವಿರಿ. ನಿಮ್ಮಲ್ಲಿ ಇಂದು ಹೆಚ್ಚು ಉತ್ಸಾವಿರಲಿದ್ದು ಕೆಲಸಕ್ಕೆ ಪೂರಕವಾಗಲಿದೆ. ಹಣದ ಹರಿವು ಸಾಧಾರಣವಾಗಿ ಇರುವುದು. ಪ್ರೀತಿಪಾತ್ರರ ವರ್ತನೆಯಿಂದ ಕಿರಿಕಿರಿ ಉಂಟಾಗಲಿದೆ. ನೀವೇ ನಿಮ್ಮ ಬಗ್ಗೆ ಹೇಳಿಕೊಳ್ಳುವುದು ಸರಿಯಾಗಲಾರದು. ಉಳಿದವರಿಗೆ ಇದು ಮುಜುಗರವನ್ನು ತಂದೀತು. ಉದ್ಯೋಗದಲ್ಲಿ ಆಲಸ್ಯದಿಂದ ಇರುವ ಕಾರಣ ಅಧಿಕಾರಿಗಳಿಂದ ಎಚ್ಚರಿಕೆಯ ಮಾತುಗಳೂ ಬರಬಹುದು.