3.5 ಕೋಟಿ ಪಡೆದು ವಂಚನೆ ಮಾಡಿದ ಕಾಂಗ್ರೆಸ್ ಮುಖಂಡ

ಬಳ್ಳಾರಿ : ಕಾಂಗ್ರೆಸ್ ಮುಖಂಡ ಟಿ.ಜಿ.ಎರಿಸ್ವಾಮಿ ಎಂಬುವವರು ನನಗೆ ಮೇಯರ್ ಸ್ಥಾನ ಕೊಡಿಸುವುದಾಗಿ ಭರವಸೆ ನೀಡಿ ನನ್ನಿಂದ ೩.೫ ಕೋಟಿ ರೂಗಳನ್ನು ಪಡೆದು, ಇದೀಗ ಹಣ ಕೇಳಿದರೆ ಜೀವ ಬೆದರಿಕೆ ಹಾಕುತ್ತಿದ್ದಾರೆಂದು ಆರೋಪಿಸಿ ಪಾಲಿಕೆಯ ೩೦ನೇ ವಾರ್ಡ್ ಸದಸ್ಯ ಕಾಂಗ್ರೆಸ್ ಪಕ್ಷದ ಎನ್.ಎಂ.ಡಿ ಆಸೀಫ್ ಅವರು ಕೌಲ್ ಬಜಾರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

     ಕೌಲ್‌ಬಜಾರ್ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ನಮೂದು ಮಾಡಿರುವುದನ್ನು ನೋಡುವುದಾದರೆ, ಕಾಂಗ್ರೆಸ್ ಮುಖಂಡ ಟಿ.ಜಿ.ಎರಿಸ್ವಾಮಿ ಯವರು ತನ್ನ ಕಡೆಯಿಂದ ೩.೫ (ಮೂರುವರೆ) ಕೋಟಿ ರೂ ಪಡೆದು. ಮೇಯರ್ ಸ್ಥಾನ ಕೊಡಿಸುವುದಾಗಿ ನಂಬಿಸಿ ನಗದು ಹಣವನ್ನು ಪಡೆದುಕೊಂಡಿದ್ದರು.

     ಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ನಿನಗೆ ಕೊಡಿಸುವುದಾಗಿ ಹೇಳಿ ಹಣ ಪಡೆದಿದ್ದರು. ಆದರೆ ಈಗ ಮೀಸಲಾತಿ ಬದಲಾವಣೆ ಆಗಿದೆಂದು ಮೇಯರ್ ಸ್ಥಾನ ಕೊಡಿಸಲಿಲ್ಲ. ಹಾಗಾಗಿ ಯರ್ರಿಸ್ವಾಮಿ ಅವರಿಗೆ ನೀಡಿದ ಹಣವನ್ನು ವಾಪಾಸ್ ನೀಡುವಂತೆ ಕೇಳಿದಾಗಲೆಲ್ಲಾ ತನಗೆ ಜೀವ ಬೆದರಿಕೆ ಹಾಕುತ್ತಿದ್ದಾರೆ.

ಹಣ ಕೇಳಿದಾಗಲೆಲ್ಲಾ ಇಂದಲ್ಲ, ನಾಳೆ ಕೊಡುತ್ತೇನೆ ಎಂದು ಈಗ ಜೀವ ಬೆದರಿಕೆ ಹಾಕಿ ಮೋಸ ಮಾಡಿರುತ್ತಾರೆಂದು ಎನ್.ಎಂ.ಡಿ ಆಸೀಫ್ ಬಾಷ ಪ್ರಕರಣ ದಾಖಲು ಮಾಡಿದ್ದಾರೆ. ಈ ಬಗ್ಗೆ ಎಸ್ಪಿ ಕಚೇರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಇನ್ನೂ ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

Leave a Comment

Your email address will not be published. Required fields are marked *

Translate »
Scroll to Top