ಬೆಂಗಳೂರು: ರಾಜ್ಯದಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು, ಬಿಜೆಪಿ ಸರ್ಕಾರದ ವಿರುದ್ಧ ಕಿಡಿ ಕಾರಿದೆ. ಎರಡು ಗುಂಪಿನ ನಡುವೆ ಭಯಾನಕ ಗ್ಯಾಂಗ್ ವಾರ್ ನಡೆದಿರುವ ಘಟನೆ ಉಡುಪಿಯಲ್ಲಿ ವರದಿಯಾಗಿದ್ದು, ಈ ಘಟನೆಯ ವಿಡಿಯೋ ಹಂಚಿಕೊಂಡಿರುವ ತೇಜಸ್ವಿ ಸೂರ್ಯ ಕಾಂಗ್ರೆಸ್ ಸರ್ಕಾರ, ಕರ್ನಾಟಕದ ಕಾನೂನು & ಸುವ್ಯವಸ್ಥೆಯ ಸಂಪರ‍್ಣ ಜವಾಬ್ದಾರಿಯನ್ನು ಮತಾಂಧರು, ಪುಂಡರು, ಸಮಾಜ ಘಾತಕ ಶಕ್ತಿಗಳ ‘ಕೈ’ ಗೆ ಒಪ್ಪಿಸಿದೆ ಎಂದು ಹೇಳಿದ್ದಾರೆ.
ಸರ್ಕಾರ ಪೊಲೀಸ್ ಇಲಾಖೆಯನ್ನು ಕೈಗೊಂಬೆ ಮಾಡಿಕೊಂಡಿರುವ ಪರಿಣಾಮ ಸಾಮಾನ್ಯ ಜನತೆ ಭಯದ ವಾತಾವರಣದಲ್ಲಿ ಬದುಕುವಂತಾಗಿದೆ ಎಂದು ಸಂಸದರು ಟ್ವೀಟ್ ಮಾಡಿದ್ದಾರೆ. ಗೃಹ ಸಚಿವರು ಜವಾಬ್ದಾರಿ ಮರೆತು ಉಡಾಫೆ ಉತ್ತರಗಳಿಗೆ ಸೀಮಿತರಾಗಿದ್ದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯದ ಅರಾಜಕತೆಯನ್ನೇ ರ‍್ನಾಟಕದ ಮಾಡೆಲ್ ಎಂದು ಬಿಂಬಿಸುತ್ತಿರುವುದು ಶೋಚನೀಯ.
ಸಮಾಜಘಾತಕ ಶಕ್ತಿಗಳಿಗೆ ಪೊಲೀಸ್ ಇಲಾಖೆ, ಕಾನೂನು & ಸುವ್ಯವಸ್ಥೆಯನ್ನು ಒತ್ತೆ ಇಟ್ಟಿರುವ ಈ ರೀತಿಯ ಮಾಡೆಲ್ ನಿಂದ ರಾಜ್ಯದ ಮಾನ ಹರಾಜು ಹಾಕುತ್ತಿರುವ ರ‍್ಕಾರದ ಬೇಜವಾಬ್ದಾರಿ ರ‍್ತನೆ ರಾಜ್ಯಕ್ಕೆ ಅಂಟಿರುವ ಶಾಪ ಎಂದು ತೇಜಸ್ವಿ ಸರ‍್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.