ಅಸಂಘಟಿತ ಕಾರ್ಮಿಕರಾಗಿರುವ ಟೈಲರ್ ಗಳ ಹಿತ ಕಾಯಲು ಸರ್ಕಾರ ಬದ್ದ: ಸಿ.ಎಂ ಸಿದ್ದರಾಮಯ್ಯ ಅಭಯ

ಟೈಲರ್ ಗಳ ಕ್ಷೇಮನಿಧಿ ಮಂಡಳಿ ರಚನೆ ಬಗ್ಗೆ ಕಾರ್ಮಿಕ ಸಚಿವರ ಜತೆ ಚರ್ಚಿಸಿ ಸೂಕ್ತ ತೀರ್ಮಾನ: ಸಿ.ಎಂ.ಸಿದ್ದರಾಮಯ್ಯ

ಬೆಂಗಳೂರು: ಟೈಲರ್ ಗಳ ಕ್ಷೇಮನಿಧಿ ಮಂಡಳಿ ರಚನೆ ಬಗ್ಗೆ ಕಾರ್ಮಿಕ ಸಚಿವರ ಜತೆ ಚರ್ಚಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು  ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.

ಜಯನಗರ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ಟೈಲರ್ಸ್ ಅಸೋಸಿಯೇಷನ್ ನ 25 ನೇ ವರ್ಷದ ರಜತ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.

 

ಅಸಂಘಟಿತ ಕಾರ್ಮಿಕರಾಗಿರುವ ಟೈಲರ್ ಗಳ ಹಿತ ಕಾಯಲು ಸರ್ಕಾರ ಬದ್ದವಾಗಿದೆ. ಶ್ರಮಿಕ ವರ್ಗದ ಜನ ಈ ನಾಡಿನ ಆಸ್ತಿ. ಅಸಂಘಟಿತ ಕಾರ್ಮಿಕರಾಗಿರುವ ಟೈಲರ್ ಗಳ ರಕ್ಷಣೆ ನಮ್ಮ ಕರ್ತವ್ಯ. ನಾವು ನಿಮ್ಮ ಜತೆಗೆ ಇದ್ದೇವೆ  ಎಂದರು. 

ಇಂದು ಹುತಾತ್ಮರ ದಿನ. ನಮಗೆ ಸ್ವಾತಂತ್ರ್ಯ ದೊರಕಿಸಿಕೊಟ್ಟ ಶ್ರೀರಾಮನ ಅಪಾರ ಭಕ್ತ ಮಹಾತ್ಮಗಾಂಧಿಯನ್ನು ನಾಥೂರಾಂ ಗೋಡ್ಸೆ ಕೊಂದು ಹಾಕಿದ ದಿನ. ಹಂತಕ ಗೋಡ್ಸೆ ಬೆಂಬಲಕ್ಕೆ ನಿಂತಿರುವವರು ಯಾರು ಎನ್ನುವುದು ಎಲ್ಲರಿಗೂ ಗೊತ್ತಿದೆ. ಅವರು ಸಮಾಜ ವಿರೋಧಿಗಳು ಎಂದರು.

 

ವಸತಿ ಸಚಿವ ಜಮೀರ್ ಅಹಮದ್, ಶೃಂಗೇರಿ ಶಾಸಕರಾದ ರಾಜುಗೌಡ, ಅಸೋಸಿಯೇಷನ್ ಅಧ್ಯಕ್ಷರಾದ ನಾರಾಯಣ್ ಸೇರಿ ಹಲವು ಪದಾಧಿಕಾರಿಗಳು ಉಪಸ್ಥಿತರಿದ್ದರು.

Facebook
Twitter
LinkedIn
Telegram
XING
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top