ಜಿಲ್ಲೆಗಳು

ಉಡಾ ಮಾರಾಟ : ಆರೋಪಿ ಬಂಧನ

ವಿಜಯನಗರ: ಅಕ್ರಮವಾಗಿ ಉಡಾ ಮಾರಾಟ ಮಾಡಲು ಮುಂದಾಗಿದ್ದ ಆರೋಪಿಯನ್ನು ಹೊಸಪೇಟೆಯ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.           ಅಳಿವಿನಂಚಿನಲ್ಲಿರುವ ಉಡಾ ಮಾರಾಟಕ್ಕಿದೆ ಅಂತ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ಎಂಬ ಆರೋಪದಡಿ ಹುಲುಗಪ್ಪ ಎಂಬಾತನನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಬಂಧಿಸಿದ್ದಾರೆ.           ಆರೋಪಿ  ಹುಲುಗಪ್ಪ ಉಡಾ ಮಾರಾಟಕ್ಕಿದೆ ಅಂತ ವಾಟ್ಸಾಪ್ ಸ್ಟೇಟಸ್ ಇಟ್ಟುಕೊಂಡಿದ್ದ.  ಇದನ್ನು ಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ಮಾಡಿ, ಜೀವಂತ ಉಡಾ ಸಮೇತ ಆರೋಪಿಯ ಬಂಧಿಸಿದ್ದಾರೆ.

ಜನಾಂಗದ ಮಕ್ಕಳು ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತುನೀಡಿ : ಜಯರಾಜ್

ದೇವನಹಳ್ಳಿ: ವಿದ್ಯಾಭ್ಯಾಸಕ್ಕೆ ಜಾತಿ ಬೇಧದ ಹಂಗಿಲ್ಲ. ವಿದ್ಯೆ ಯಾರ ಸ್ವತ್ತೂ ಅಲ್ಲ. ನಾವು ಪಡೆದ ಶಿಕ್ಷಣ ನಮ್ಮ‌ಮುಂದಿನ ಭವಿಷ್ಯಕ್ಕೆ ದಾರಿದೀಪವಾಗುತ್ತದೆ ಎಂದು ವಹ್ನಿಕುಲ ಕ್ಷತ್ರಿಯ ತಿಗಳರ ಸಂಘದ ರಾಜ್ಯಾಧ್ಯಕ್ಷ ಜಯರಾಜ್ ತಿಳಿಸಿದರು. ದೇವನಹಳ್ಳಿ ತಾಲ್ಲೂಕು ವಿಜಯಪುರ ಪಟ್ಟಣದ ಯುವ ಪ್ರತಿಭೆ ಧನುಷ್ ಕುಮಾರ್ ರವರು ಉನ್ನತ ವಿದ್ಯಾಭ್ಯಾಸಕ್ಕಾಗಿ (ಯು.ಪಿ.ಎಸ್.ಸಿ) ವಹ್ನಿಕುಲ ಕ್ಷತ್ರಿಯ ತಿಗಳರ ಸಂಘದ ರಾಜ್ಯಾಧ್ಯಕ್ಷ ಜಯರಾಜ್ ರವರು ಆರ್ಥಿಕ ಸಹಾಯವನ್ನು ಶಿವನಾಪುರದ ಶ್ರೀ ಆದಿಶಕ್ತಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಪ್ರಣವಾನಂದ ಮಹಾಸ್ವಾಮಿಗಳ ಮೂಲಕ ನೀಡಿ. ಮಾತನಾಡಿ, …

ಜನಾಂಗದ ಮಕ್ಕಳು ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತುನೀಡಿ : ಜಯರಾಜ್ Read More »

ಶ್ರೀ ಶಿವರಾಜ್ ಎಸ್ ತಂಗಡಗಿಯವರ ನೇತ್ರತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ

ಕಾರಟಗಿ: ಪಟ್ಟಣದ ಶಿವರಾಜ್ ತಂಗಡಗಿ ನಿವಾಸದ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷದ ತತ್ವಸಿದ್ಧಾಂತಗಳನ್ನು ಹಾಗೂ ಸನ್ಮಾನ್ಯ ಶ್ರೀ ಶಿವರಾಜ್ ಎಸ್ ತಂಗಡಗಿಯವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ, ಹೆಬ್ಬಾಳ ಗ್ರಾಮದ ಬಿ.ಜೆ.ಪಿ. ಪಕ್ಷದ ಕಾರ್ಯಕರ್ತರು ಇಂದು ಸನ್ಮಾನ್ಯ ಶ್ರೀ ಶಿವರಾಜ್ ಎಸ್ ತಂಗಡಗಿಯವರ ನೇತ್ರತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು ನಂತರ ಮಾತನಾಡಿದ ಶಿವರಾಜ್ ತಂಗಡಗಿ ಅವರು ಕಾಂಗ್ರೆಸ್ ಪಕ್ಷ ದೇಶದ ಅಭಿವೃದ್ಧಿ ಗ್ರಾಮದ ಅಭಿವೃದ್ಧಿ ನಮ್ಮ ಪಕ್ಷದ ತತ್ವಸಿದ್ಧಾಂತಗಳನ್ನು ಅರ್ಥ ಮಾಡಿಕೊಂಡು ಪಕ್ಷಕ್ಕೆ ಸೇರ್ಪಡೆ ಯಾಗಿದ್ದಾರೆ ಎಂದರು. ಈ ಸಂದರ್ಭದಲ್ಲಿ …

ಶ್ರೀ ಶಿವರಾಜ್ ಎಸ್ ತಂಗಡಗಿಯವರ ನೇತ್ರತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ Read More »

ಸೂರ್ಯೋದಯವನ್ನು ಕಣ್ತುಂಬಿಕೊಂಡ ಪ್ರವಾಸಿಗರು

ವಿಜಯನಗರ : ಹಂಪಿಯಲ್ಲಿ ಸೂರ್ಯೋದಯವನ್ನು ಕಣ್ತುಂಬಿಕೊಂಡ ಪ್ರವಾಸಿಗರು. ಹಂಪಿಯ ಮಾತಂಗ ಪರ್ವತದ ಮೇಲೆ ಕುಳಿತು ಸೂರ್ಯೋದಯ ವೀಕ್ಷಣೆ ಮಾಡಿದ ಪ್ರವಾಸಿಗರು. ವಿಕೇಂಡ್ ಹಿನ್ನಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ಸೂರ್ಯೋದ ನೋಡಿ ಖುಷಿ ಪಟ್ಟ, ಹಂಪಿಯ ಸ್ಮಾರಕಗಳನ್ನು ವೀಕ್ಷಣೆಗೆ ಆಗಮಿಸಿರೋ ಜನ.

ಕೆರೆಗೆ ಬಾಗಿನ ಅರ್ಪಿಸಿದ ಶಾಂತಕುಮಾರ್

ದೇವನಹಳ್ಳಿ: ಕಳೆದ ಒಂದು ವಾರದಿಂದ ಸುರಿದ ಮಳೆಯಿಂದಾಗಿ ದೇವನಹಳ್ಳಿ ತಾಲ್ಲೂಕು ತೂಬಗೆರೆ ಹೋಬಳಿಯ ಮೆಳೇಕೋಟೆ ಕೆರೆ ತುಂಬಿದ್ದು ಗ್ರಾಮಸ್ಥರದಲ್ಲಿ ಸಂತಸ ಮೂಡಿಸಿದೆ ನವರಾತ್ರಿ ಹಬ್ಬದ ಬೆನ್ನಲ್ಲೆ ಸಾಂಪ್ರದಾಯಿಕ ಶ್ರದ್ಧೆಯಿಂದ ಬಾಗಿನದ ಮೊರವನ್ನು ಗಂಗೆಯ ಒಡಲಿಗೆ ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಶಾಂತಕುಮಾರ್ ಸಮರ್ಪಿಸಿದರು. ನಂತರ ಮಾತನಾಡಿ ಶುದ್ಧವಾದ ನೀರು ಮಾತ್ರ ಕೆರೆಯ ಒಡಲನ್ನು ಸೇರುವಂತೆ ಕ್ರಮ ಕೈಗೊಳ್ಳಲಾಗಿದೆ. ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಇದು ಉಪಯುಕ್ತವಾದ ಕ್ರಮವಾಗಿದೆ ಸರ್ಕಾರ ಕೆರೆಗಳ ಹೂಳು ತೆಗೆದು ನಾಲೆಗಳ ದುರಸ್ತಿ ಮಾಡಲು ಮೊದಲ …

ಕೆರೆಗೆ ಬಾಗಿನ ಅರ್ಪಿಸಿದ ಶಾಂತಕುಮಾರ್ Read More »

ಬಹಳ ಅರ್ಥ ಪೂರ್ಣವಾಗಿ ನಡೆದ ಗರ್ಭಿಣಿಯರಿಗೆ ಸೀಮಂತ ಕಾರ್ಯ ಕಾರ್ಯಕ್ರಮ

ಕುಷ್ಟಗಿ: ಕುಷ್ಟಗಿ ಪಟ್ಟಣದ ಶ್ರೀ ಕರಿಬಸವೇಶ್ವರ ಸ್ವಾಮಿ ಮದ್ದಾನೇಶ್ವರ ಹಿರೇಮಠದಲ್ಲಿ ಕರ್ನಾಟಕ ಸರ್ಕಾರ ಜಿಲ್ಲಾ ಪಂಚಾಯತ ಕೊಪ್ಪಳ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ,‌ ಶಿಶು ಅಭಿವೃದ್ಧಿ ಯೋಜನೆ ಕುಷ್ಟಗಿ ಇವರ ಸಂಯುಕ್ತ ಆಶ್ರಯದಲ್ಲಿ ಮಾತೃವಂದನಾ, ಮಾತೃಪೂರ್ಣ, ಮಾತೃಶ್ರೀ ಯೋಜನೆ ಹಾಗೂಶಾಲಾ-ಪೂರ್ವ ಶಿಕ್ಷಣ (ಟಾಟಾ ಟ್ರಸ್ಟ್ ಕಲಕಾ-ವಿಭಾಗ) ಕಾರ್ಯಕ್ರಮಗಳ ಜಾಗೃತಿ ಶಿಬಿರ ಹಾಗೂ ಅಂಗನವಾಡಿ ಕೇಂದ್ರ ಸಂಖ್ಯೆ ೮, ಕೇಂದ್ರ ಸಂಖ್ಯೆ ೯, ಕೇಂದ್ರ ಸಂಖ್ಯೆ ೨೫, ಮತ್ತು‌ ೨೬ನೇ ಅಂಗನವಾಡಿ ಕೇಂದ್ರ ಸಂಖ್ಯೆಯಲ್ಲಿ ಆಯೋಜನೆ ಮಾಡಲಾಗಿದ್ದ …

ಬಹಳ ಅರ್ಥ ಪೂರ್ಣವಾಗಿ ನಡೆದ ಗರ್ಭಿಣಿಯರಿಗೆ ಸೀಮಂತ ಕಾರ್ಯ ಕಾರ್ಯಕ್ರಮ Read More »

2 ಲಕ್ಷ ಸಾಲದ ಆಸೆಗೆ 1ಲಕ್ಷ ಕಳೆದುಕೊಂಡ ಕಿರಾಣಿ ಅಂಗಡಿ ವ್ಯಾಪಾರಿ

ದಾವಣಗೆರೆ: ಬಜಾಜ್ ಫೈನಾನ್ಸ್ ಕಂಪನಿ ಅಧಿಕಾರಿ ಎಂದು ಕರೆ ಮಾಡಿದ ಅಪರಿಚಿತ ವ್ಯಕ್ತಿ, 2 ಲಕ್ಷ ಸಾಲ ಕೊಡುವುದಾಗಿ ಹೇಳಿದ್ದನ್ನು ನಂಬಿದ ಕಿರಾಣಿ ಅಂಗಡಿಯ ವ್ಯಾಪಾರಿ 1.04 ಲಕ್ಷ ಕಳೆದುಕೊಂಡಿದ್ದಾರೆ. ಈ ಬಗ್ಗೆ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಾವಣಗೆರೆ ನಗರದ ವಿದ್ಯಾನಗರ ನಿವಾಸಿ ಕಿರಾಣಿ ಅಂಗಡಿ ವ್ಯಾಪಾರಿ ಉಮಾಶಂಕರ್ ಹಣ ಕಳೆದುಕೊಂಡ ವ್ಯಕ್ತಿಯಾಗಿದ್ಧಾರೆ. ಬಜಾಜ್ ಫೈನ್ ಅಧಿಕಾರಿ ಎಂದು ಅಪರಿತ ವ್ಯಕ್ತಿಯೊಬ್ಬರು ಉಮಾಶಂಕರ್ ಅವರಿಗೆ ಕರೆ ಮಾಡಿದ್ದರು. ನಿಮಗೆ 2 ಲಕ್ಷ ಸಾಲ …

2 ಲಕ್ಷ ಸಾಲದ ಆಸೆಗೆ 1ಲಕ್ಷ ಕಳೆದುಕೊಂಡ ಕಿರಾಣಿ ಅಂಗಡಿ ವ್ಯಾಪಾರಿ Read More »

ಭತ್ತದ ಬೆಳೆಯಲ್ಲಿ ಕಾಣಿಸಿಕೊಳ್ಳುವ ಬೆಂಕಿ ರೋಗ ನಿರ್ವಹಣೆಗೆ ಮಾಹಿತಿ

ದಾವಣಗೆರೆ: ದಾವಣಗೆರೆ ಜಿಲ್ಲೆಯಾದ್ಯಂತ ಭತ್ತದ ಬೆಳೆಯು ಬೆಳವಣಿಗೆಯಿಂದ ತೆನೆ ಒಡೆಯುವ ಹಂತದವರೆಗೆ ಇದ್ದು, ಅಲ್ಲಲ್ಲಿ ಬೆಂಕಿರೋಗದ ಬಾಧೆ ಕಾಣಿಸಿಕೊಳ್ಳುತ್ತಿರುವುದು ಗಮನಕ್ಕೆ ಬಂದಿರುತ್ತದೆ. ಬೆಂಕಿ ರೋಗ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲು ಕೃಷಿ ಇಲಾಖೆಯು ರೈತರಿಗೆ ಸಲಹೆ ನೀಡಿದೆ. ಮೋಡ ಮುಸುಕಿದ, ಹೆಚ್ಚು ಆದ್ರ್ರತೆಯಿಂದ ಕೂಡಿದ ವಾತಾವರಣದಲ್ಲಿ ಬೆಂಕಿ ರೋಗ ಬಾಧೆಯ ತೀವ್ರತೆ ಹೆಚ್ಚಾಗುವ ಸಾಧ್ಯತೆಯಿರುತ್ತದೆ. ಇದೊಂದು ಶಿಲೀಂಧ್ರದಿಂದ ಬರುವ ರೋಗವಾಗಿದ್ದು, ಬೆಳೆಯ ಎಲ್ಲಾ ಹಂತಗಳಲ್ಲೂ ಕಾಣಿಸಿಕೊಂಡು ಇಳುವರಿ ಮೇಲೆ ಪರಿಣಾಮ ಬೀರುತ್ತದೆ. ರೋಗದ ಲಕ್ಷಣಗಳು : ಗರಿಗಳ …

ಭತ್ತದ ಬೆಳೆಯಲ್ಲಿ ಕಾಣಿಸಿಕೊಳ್ಳುವ ಬೆಂಕಿ ರೋಗ ನಿರ್ವಹಣೆಗೆ ಮಾಹಿತಿ Read More »

ಅ.19 ರಂದು ಜಿಲ್ಲಾ ಉಸ್ತುವಾರಿ ಸಚಿವರ ಆಗಮನ

ದಾವಣಗೆರೆ: ನಗರಾಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ.ಬಸವರಾಜ ಅವರು ಅ.19 ರ ಮಂಗಳವಾರ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. ಅ.19 ರ ಬೆಳಿಗ್ಗೆ ಬೆಂಗಳೂರಿನಿಂದ ಹೊರಟು, ಬೆ. 11 ಗಂಟೆಗೆ ನ್ಯಾಮತಿಗೆ ಆಗಮಿಸುವರು. ಬಳಿಕ ಕೋವಿಡ್-19 ನಿಯಂತ್ರಣಕ್ಕೆ ಸಹಕರಿಸಿದ 4 ಸಾವಿರ ಕೊರೋನಾ ವಾರಿಯರ್ಸ್‍ಗಳಿಗೆ ನ್ಯಾಮತಿಯ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಏರ್ಪಡಿಸಿರುವ ಸನ್ಮಾನ ಸಮಾರಂಭದಲ್ಲಿ ಭಾಗವಹಿಸುವರು. ಸಚಿವರು ಅದೇ ದಿನ ಮಧ್ಯಾಹ್ನ 2.30 ಕ್ಕೆ ಬೆಂಗಳೂರಿಗೆ ಪ್ರಯಾಣ ಬೆಳೆಸುವರು ಸಚಿವರ ಆಪ್ತ ಕಾರ್ಯದರ್ಶಿ ತಿಳಿಸಿದ್ದಾರೆ.

ದೇಶದ ನಗರ ಪ್ರದೇಶಗಳನ್ನು ಕಸಮುಕ್ತ ಗೊಳಿಸೋಣ -ರಾಜೇಶ್ವರಿಎಸ್.ಭಾಸ್ಕರ್

ದೇವನಹಳ್ಳಿ: ನಮ್ಮ ನಗರ ಸ್ವಚ್ಛವಾದರೆ ದೇಶ ತನ್ನಂತಾನೇ ಸ್ವಚ್ಛವಾಗುತ್ತದೆ ಎಂದು ವಿಜಯಪುರ ಪಟ್ಟಣ ಪುರಸಭೆಯ ಅಧ್ಯಕ್ಷೆ ರಾಜೇಶ್ವರಿಎಸ್.ಭಾಸ್ಕರ್ ತಿಳಿಸಿದರು. ದೇವನಹಳ್ಳಿ ತಾಲ್ಲೂಕು ವಿಜಯಪುರ ಪಟ್ಟಣದ ರೂಬಿ ಪ್ರೌಢಶಾಲೆಯ ಆವರಣದಲ್ಲಿ ಭಾರತ ಸರ್ಕಾರದ ಬೆಂಗಳೂರು ಗ್ರಾಮಾಂತರ ಜಿಲ್ಲಾ ನೆಹರು ಯುವ ಕೇಂದ್ರ,ಯುವಜನ ಸೇವೆ ಮತ್ತು ಕ್ರೀಡಾ ಸಚಿವಾಲಯ,ಪುರಸಭೆ ವಿಜಯಪುರ,ರೂಬಿ ಆಂಗ್ಲ ಪ್ರೌಢಶಾಲೆ ವಿಜಯಪುರ, ಇನ್ಸ್ ಪೈರ್ ಇನ್ಸ್ ಸ್ಟಿಟೂಟ್ ಆಫ್ ಸೈನ್ಸ್ ಅಂಡ್ ಕಾಮರ್ಸ್ಕಾ ಲೇಜು ವಿಜಯಪುರ, ಸ್ವಾಮಿ ವಿವೇಕಾನಂದ ಐಟಿಐ ಕಾಲೇಜು ವಿಜಯಪುರ ಹಾಗೂ ಸರ್ವಿಸ್ ಸಿವಿಲ್ …

ದೇಶದ ನಗರ ಪ್ರದೇಶಗಳನ್ನು ಕಸಮುಕ್ತ ಗೊಳಿಸೋಣ -ರಾಜೇಶ್ವರಿಎಸ್.ಭಾಸ್ಕರ್ Read More »

Translate »
Scroll to Top