ಜಿಲ್ಲೆಗಳು

ಕ್ಷಯ ರೋಗಿಗಳ ಬೆಂಬಲಸಭೆ

ಕುಷ್ಟಗಿ :- ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕೇಂದ್ರ ಕೊಪ್ಪಳ. ತಾಲೂಕ ಆಸ್ಪತ್ರೆ ಕುಷ್ಟಗಿ ಹಾಗೂ ಕರ್ನಾಟಕ ಆರೋಗ್ಯ ಸಂವಹರ್ಧನ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ಕ್ಷಯರೋಗಿಗಳ ಬೆಂಬಲ ಗುಂಪುಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸುಶೀಲ ಮೇಡಂ PHSI ಇವರು ಕ್ಷಯರೋಗಿಗಳಿಗೆ ಪೌಷ್ಟಿಕ ಆಹಾರದ ಪಾಕೀಟನ್ನು ವಿತರಿಸಿ ಮಾತನಾಡಿದ ಇವರು ಕ್ಷಯರೋಗಿಗಳಿಗೆ ಆತ್ಮಸ್ಥೈರ್ಯ ಹಾಗೂ ಆರೋಗ್ಯದ ಕಾಳಜಿ ಎಲ್ಲಾ ಕ್ಷಯರೋಗಿಗಳಿಗೆ ಕ್ಷಯರೋಗಕ್ಕೆ ಯಾರು ಭಯಪಡುವ ಅಗತ್ಯವಿಲ್ಲ , ಪೌಷ್ಟಿಕಾಂಶಯುಕ್ತ ಆಹಾರ ಮತ್ತು …

ಕ್ಷಯ ರೋಗಿಗಳ ಬೆಂಬಲಸಭೆ Read More »

ಶರಣರ ಆದರ್ಶವನ್ನು ನಿತ್ಯ ಜೀವನದಲ್ಲಿ ಪಾಲಿಸಿ: ರುದ್ರೇಶ್ ಮೂರ್ತಿ

ದೇವನಹಳ್ಳಿ:ಶರಣರ ಸವೆಸಿದ ಜೀವನ ಮಾರ್ಗ ದಿಂದ ಸುಲಭಮುಕ್ತಿ ಸಾಧ್ಯ. ಶರಣರ ಆದರ್ಶಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದುಬೆಂಗಳೂರು ಗ್ರಾಮಾಂತರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎಚ್.ಎಸ್.ರುದ್ರೇಶಮೂರ್ತಿ ತಿಳಿಸಿದರು.ದೇವನಹಳ್ಳಿ ತಾಲ್ಲೂಕು ವಿಜಯಪುರ ಪಟ್ಟಣದ ಮೇಲೂರು ಮುಖ್ಯ ರಸ್ತೆಯ ಅರಿವಿನ ಮನೆ ಸಭಾಂಗಣದಲ್ಲಿ ಶ್ರೀ ವೀರಭದ್ರಸ್ವಾಮಿ ಗೋಷ್ಠಿ ಅಕ್ಕನಬಳಗ ಸೇವಾ ಟ್ರಸ್ಟ್, ತಾಲೂಕು ಶರಣ ಸಾಹಿತ್ಯ ಪರಿಷತ್ತು, ಅರಿವಿನಮನೆ ವತಿಯಿಂದ ತಿಂಗಳ ಬೆಳಕು ಮತ್ತು ಮಾತೆ ಕಾಮಾಕ್ಷಮ್ಮ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳ ದಿಸೆಯಿಂದಲೇ ವಚನಸಾಹಿತ್ಯ, ದಾಸಸಾಹಿತ್ಯದ …

ಶರಣರ ಆದರ್ಶವನ್ನು ನಿತ್ಯ ಜೀವನದಲ್ಲಿ ಪಾಲಿಸಿ: ರುದ್ರೇಶ್ ಮೂರ್ತಿ Read More »

ತಂಬಾಕು ಸೇವನೆಯಿಂದ ಮನುಷ್ಯನ ಆರೋಗ್ಯ ಹದಗೆಡುತ್ತದೆ: ಡಾ.ವಿದ್ಯಾರಾಣಿ

ದೇವನಹಳ್ಳಿ: ಪ್ರತಿಯೊಂದು ಅಂಗಡಿ ಮುಂಗಟ್ಟುಗಳಲ್ಲಿ ಹೋಟೆಲ್, ಬೇಕರಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಲಾಗಿದೆ ಎಂದು ನಾಮಫಕ ಹಾಕುವುದು ಖಡ್ಡಾಯವಾಗಿರುತ್ತದೆ ಶಾಲೆಗಳ ಸುತ್ತಮುತ್ತ 93 ಮೀಟರ್ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವಂತಿಲ್ಲಾ ಮಾರಿದರೆ ದಂಡ ವಿಧಿಸುತ್ತದೆ ನಂತರವೂ ಮಾರುವುದು ಮುಂದುವರಿದರೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರಿನ ಮೂಲಕ ಎಫ್.ಐ.ಆರ್ ದಾಖಲಿಸುವುದಾಗಿ ಜಿಲ್ಲಾ ತಂಬಾಕು ನಿಯಂತ್ರಣಾ ಘಟಕದ ಸಲಹೆಗಾರರಾದ ಡಾ. ವಿದ್ಯಾರಾಣಿ ತಿಳಿಸಿದರು. ದೇವನಹಳ್ಳಿ ತಾಲ್ಲೂಕು ವಿಜಯಪುರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸ್ಥಳೀಯ ಪುರಸಭೆ ಹಾಗೂ …

ತಂಬಾಕು ಸೇವನೆಯಿಂದ ಮನುಷ್ಯನ ಆರೋಗ್ಯ ಹದಗೆಡುತ್ತದೆ: ಡಾ.ವಿದ್ಯಾರಾಣಿ Read More »

ಡಿ. 01ರನಂತರ ಸಂಚಾರ ನಿಯಮ ಉಲ್ಲಂಘಿಸಿದ್ರೆ ಕಟ್ಟುನಿಟ್ಟಿನ ದಂಡ; ಜಿಲ್ಲಾ ಪೊಲೀಸ್ ಎಚ್ಚರಿಕೆ

ದಾವಣಗೆರೆ; ನಗರದಲ್ಲಿ ಸಂಚಾರ ನಿಯಮ ಮತ್ತು ಸುರಕ್ಷತೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಜಿಲ್ಲಾ ಪೊಲೀಸ್ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ನವೆಂಬರ್ 31ರ ವರೆಗೆ ಸಾರ್ವಜನಿಕರಿಗೆ ಯಾವುದೇ ದಂಡ ವಿಧಿಸದೇ ಜಾಗೃತಿ ಮೂಡಿಸಲಿದೆ.‌ ಡಿ.1 ರಿಂದ ಕಟ್ಟುನಿಟ್ಟಾಗಿ ದಂಡ ವಿಧಿಸುವುದಾಗಿ ಜಿಲ್ಲಾ ಪೊಲೀಸ್ ಎಚ್ಚರಿಕೆ ನೀಡಿದೆ. ಈ ಬಗ್ಗೆ ಸಾರ್ವಜನಿಕರು ಸಂಚಾರಿ ನಿಯಮವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವ ಮೂಲಕ ಜಿಲ್ಲಾ ಪೊಲೀಸ್ ಜೊತೆ ಕೈಜೋಡಿಸಬೇಕು ಎಂದು ಮನವಿ ಮಾಡಿದೆ.

ಧರ್ಮವಿರೋಧಿ ಚಟುವಟಿಕೆಗಳಿಕೆ ಕಡಿವಾಣ ಹಾಕಬೇಕು : ಘಟನೆಯ ಹಿನ್ನೆಲೆಯಲ್ಲಿ ಪೊಲೀಸರ ಕರ್ತವ್ಯ ಲೋಪ ಎದ್ದು ಕಾಣುತ್ತಿದೆ: ಬಸವರಾಜ್

ದೇವನಹಳ್ಳಿ: ಧರ್ಮವನ್ನು ಜಾಗೃತ ಮಾಡಲು ಹೊರಟರೆ ನಾವು ಕೋಮುವಾದಿಗಳು ಎನ್ನುತ್ತಾರೆ ಗೋಹತ್ಯೆ ಮಾಡಬೇಡಿ ಎಂದರೆ ಬೇಕಾಗಿಯೇ ಮಾಡುತ್ತಾರೆ. ಪುರಾಣ ಪ್ರಸಿದ್ಧ, ಇತಿಹಾಸ ಪ್ರಸಿದ್ಧ ಪವನಸುತ ವೀರಾಂಜನೇಯ ದೇವಾಲಯಕ್ಕೆ ಅಮೇದ್ಯವನ್ನು ಎರಚಿರುವುದು ಸಣ್ಣ ಘಟನೆಯಲ್ಲ ಎಂದುಹಿಂದೂ ವೇದಿಕೆಯ ಪ್ರಾಂತ ಕಾರ್ಯದರ್ಶಿ ತಿಳಿಸಿದರು.ದೇವನಹಳ್ಳಿ ತಾಲ್ಲೂಕು ವಿಜಯಪುರ ಪಟ್ಟಣದ ಶಿವಗಣೇಶ ವೃತ್ತದಲ್ಲಿ ಹಿಂದೂ ಜಾಗರಣಾ ವೇದಿಕೆ ಹಾಗೂ ಹಲವು ಹಿಂದೂ ಪರ ಸಂಘಟನೆಗಳು ಒಗ್ಗೂಡಿ ಧರ್ಮವಿರೋಧಿ ಚಟುವಟಿಕೆಗಳಿಕೆ ಕಡಿವಾಣ ಹಾಕುವಂತೆ ಬೃಹತ್ ಪ್ರತಿಭಟನೆ ನಡೆಸಿ ಮಾತನಾಡಿ, ಪುರಾಣ ಪ್ರಸಿದ್ಧ, ಇತಿಹಾಸ ಪ್ರಸಿದ್ಧ …

ಧರ್ಮವಿರೋಧಿ ಚಟುವಟಿಕೆಗಳಿಕೆ ಕಡಿವಾಣ ಹಾಕಬೇಕು : ಘಟನೆಯ ಹಿನ್ನೆಲೆಯಲ್ಲಿ ಪೊಲೀಸರ ಕರ್ತವ್ಯ ಲೋಪ ಎದ್ದು ಕಾಣುತ್ತಿದೆ: ಬಸವರಾಜ್ Read More »

ಮತದಾರರ ಜಾಗೃತಿ ಕಾರ್ಯಕ್ರಮ

ಕೊಪ್ಪಳ ನಗರದ ತಾಲೂಕು ಕ್ರೀಡಾಂಗಣದಲ್ಲಿ ಮತದಾರರ ವಿಶೇಷ ನೋಂದಣಿ ಅಭಿಯಾನ ೨೦೨೧, ಚುನಾವಣಾಧಿಕಾರಿಗಳ ಕಾರ್ಯಾಲಯ ಕೊಪ್ಪಳ, ಜಿಲ್ಲಾ ಸ್ವೀಪ್ ಸಮಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಕೊಪ್ಪಳ ಇವರ ಸಹಯೋಗದಲ್ಲಿ ನಡೆದ ಮತದಾರರ ಜಾಗೃತಿ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಅವರು ಸಸಿ ನೀರು ಹಾಕುವುದರ ಮೂಲಕ ಉದ್ಘಾಟಿಸಿದರು. ನಂತರ ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ಮಾನವ ಸರಪಳಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ‌ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಫೌಜಿಯಾ ತರನ್ನುಮ್ ಸೇರಿದಂತೆ ಜಿಲ್ಲಾ ಮತ್ತು …

ಮತದಾರರ ಜಾಗೃತಿ ಕಾರ್ಯಕ್ರಮ Read More »

ಪೇದೆಯಿಂದ ಅಕ್ರಮ ಸಂಬಂಧ: ಮಹಿಳೆಯನ್ನು ಕೊಲೆ ಮಾಡಿರುವ ಆರೋಪ ದೂರು

ಶಿಡ್ಲಘಟ್ಟ : ಕಾನೂನಿನ ಅರಿವಿರೋ ಪೊಲೀಸ್‌ ಆತ.ಖಾಕಿ ತೊಟ್ಟು ಕಾನೂನನ್ನು ರಕ್ಷಣೆ ಮಾಡಬೇಕಾಗಿದ್ದವರು. ಆದರೆ ಆ ಖಾಕಿಯೊಳಗಿದ್ದ ಕಾಮ ಮಾತ್ರ ಆ ಪೊಲೀಸ್​ನಿಂದ ಮಾಡಬಾರದ ಕೆಲಸ ಮಾಡಿಸಿಬಿಟ್ಟಿತ್ತು.ಮಾಡಿದ ತಪ್ಪಿಗೆ ಖಾಕಿ ಕಳಚಿಟ್ಟು ಕಂಬಿ ಹಿಂದೆ ಸೇರಿದ್ದಾರೆ ಆ ಪೊಲೀಸ್‌ ಕಾನ್ಸ್ಟೇಬಲ್.ಚಿಕ್ಕಬಳ್ಳಾಪುರ ನಗರದಲ್ಲಿ ಸಂಚಾರಿ ಪೊಲೀಸ್ ಕೆಲಸ ನಿರ್ವಹಿಸಿಕೊಳ್ಳುತ್ತಿದ್ದ ಅನಂತಕುಮಾರ್. ಈತ ಖಾಕಿ ತೊಡುತ್ತಿದ್ದ ಈ ಪೊಲೀಸಪ್ಪ ಇಲಾಖೆಗೆ ಸಂಬಂಧಿಸಿದ ಕೆಲಸ ಮಾಡಿಕೊಂಡು ಇದ್ದಿದ್ದರೆ ಸಾಕಾಗುತ್ತಿತ್ತು. ಆದರೆ ಮಾಡಿದ್ದೇ ಬೇರೆ. ಶಿಡ್ಲಘಟ್ಟ ನಗರದಲ್ಲಿ ವಾಸವಾಗಿರುವ ವೆಂಕಟೇಶ್ ಪತ್ನಿಯೊಂದಿಗೆ ಅಕ್ರಮ …

ಪೇದೆಯಿಂದ ಅಕ್ರಮ ಸಂಬಂಧ: ಮಹಿಳೆಯನ್ನು ಕೊಲೆ ಮಾಡಿರುವ ಆರೋಪ ದೂರು Read More »

ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆ.ಸಿ.ಕೊಂಡಯ್ಯ

ಕರ್ನಾಟಕ ವಿಧಾನಪರಿಷತ್ ಬಳ್ಳಾರಿ ಸ್ಥಳೀಯ ಸಂಸ್ಥೆಗಳ ಸ್ಥಾನಕ್ಕೆ ಉಮೇದುವಾರಿಕೆ ಬಯಸಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆ.ಸಿ.ಕೊಂಡಯ್ಯ ಅವರು ಚುನಾವಣಾಧಿಕಾರಿ ಪವನಕುಮಾರ್ ಮಾಲಪಾಟಿ ಅವರಿಗೆ ನಾಮಪತ್ರ ಸಲ್ಲಿಸಿದರು. ಸಂಸದ ಸೈಯದ್ ನಾಸೀರ್ ಹುಸೇನ್, ಶಾಸಕರಾದ ಪಿ.ಟಿ.ಪರಮೇಶ್ವರ ನಾಯಕ್,ಈ. ತುಕಾರಾಂ, ಬಿ.ನಾಗೇಂದ್ರ ಇದ್ದರು.

ಅಕಾಲಿಕ ಮಳೆಯಿಂದ ದ್ರಾಕ್ಷಿ ಬೆಳೆ ನಾಶ

ಕುಷ್ಟಗಿ:-ಕೊಪ್ಪಳ ಕುಷ್ಟಗಿ ತಾಲೂಕಿನ ಗುಮಗೇರಾ ಗ್ರಾಮದ ಹುಲಗಪ್ಪ ಬಾಲಪ್ಪ ಹರಿಜನ ಇವರಿಗೆ ಸೇರಿದ ದ್ರಾಕ್ಷಿ ಬೆಳೆ ಅಕಾಲಿಕ ಮಳೆಯಿಂದ ಸಂಪೂರ್ಣವಾಗಿ ನಾಶವಾಗಿದೆ. ಅಕಾಲಿಕ ಮಳೆಗೆ ನಾಶವಾದ ಬೆಳೆಯನ್ನು ಕಂಡು ರೈತ ತಾನು ಗೊಬ್ಬರ, ಕುಲಿಹಾಳು ಔಷಧಿ ಸಿಂಪರಣೆ ಖರ್ಚು ಮಾಡಿದ ಖರ್ಚು ಕೂಡ ಬರುವದಿಲ್ಲ ಆದ್ದರಿಂದ ಸರಕಾರ ಕೂಡಲೇ ನಷ್ಟದ ಪರಿಹಾರ ನೀಡಬೇಕು ಎಂದು‌ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಪಕ್ಷೇತರ ಅಭ್ಯರ್ಥಿಯಾಗಿ ಗಂಗೀರೆಡ್ಡಿ

ಬಳ್ಳಾರಿ : ಕರ್ನಾಟಕ ವಿಧಾನಪರಿಷತ್ ಬಳ್ಳಾರಿ ಸ್ಥಳೀಯ ಸಂಸ್ಥೆಗಳ ಸ್ಥಾನಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಗಂಗೀರೆಡ್ಡಿ ಅವರು ಚುನಾವಣಾಧಿಕಾರಿ ಪವನಕುಮಾರ್ ಮಾಲಪಾಟಿ ಅವರಿಗೆ ನಾಮಪತ್ರ ಸಲ್ಲಿಸಿದರು.

Translate »
Scroll to Top