ದಾವಣಗೆರೆ

ರೈಲಿನಲ್ಲಿ ಬಿಟ್ಟು ಹೋದ 7.31 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರಿಗೆ ತಲುಪಿಸಿದ ರೈಲ್ವೆ ರಕ್ಷಣೆ ಪಡೆ

ದಾವಣಗೆರೆ: ರೈಲಿನಿಂದ ಇಳಿಯುವಾಗ ರೈಲಿನಲ್ಲಿಯೇ ಬಿಟ್ಟು ಹೋಗಿದ್ದ 7.31 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ 12 ಸಾವಿರ ನಗದು ಹೊಂದಿದ್ದ ಬ್ಯಾಗ್ ಅನ್ನು ವಾರಸುದಾರರಿಗೆ ರೈಲ್ವೆ ರಕ್ಷಣೆ ತಲುಪಿಸಿದ್ಧಾರೆ. ಹರಿಹರ ತಾಲ್ಲೂಕಿನ ಕುಂಬಳೂರು ಗ್ರಾಮದ ಶ್ರೀನಿವಾಸ ರಾಜ್ ಕೆ.ಎಂ ಅವರು ಬೆಂಗಳೂರಿನ ಕೆಂಗೇರಿಯಿಂದ ಹರಿಹರಕ್ಕೆ ಭಾನುವಾರ ಬೆಳಗ್ಗೆ ಬಂದು ಇಳಿದು ಹೋಗಿದ್ದರು. ಈ ವೇಳೆ 7.31 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ 12 ಸಾವಿರವಿದ್ದ ಬ್ಯಾಗನ್ನು ರೈಲಿನಲ್ಲಿಯೇ ಬಿಟ್ಟು ಇಳಿದು ಹೋಗಿದ್ದರು. ಈ ವಿಚಾರ ಗಮನಕ್ಕೆ ಬಂದ …

ರೈಲಿನಲ್ಲಿ ಬಿಟ್ಟು ಹೋದ 7.31 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರಿಗೆ ತಲುಪಿಸಿದ ರೈಲ್ವೆ ರಕ್ಷಣೆ ಪಡೆ Read More »

ಶಾಮನೂರು ಬಳಿ ಬೆಸ್ಕಾಂಗೆ ಸೇರಿದ 3.60 ಲಕ್ಷ ಮೌಲ್ಯದ ಎಲೆಕ್ಟ್ರಿಕಲ್ ವೈರ್ ಕಳವು

ದಾವಣಗೆರೆ: ನಗರದ ಹೊರ ವಲಯದ ಶಾಮನೂರು ಬಳಿ ಬೆಸ್ಕಾಂಗೆ ಸೇರಿದ 3.60 ಲಕ್ಷ ಮೌಲ್ಯದ ಎಲೆಕ್ಟ್ರಿಕಲ್ ವೈರ್ ಕಳ್ಳತನವಾಗಿದೆ. ಸುನಂದಮ್ಮ ಎನ್ನುವರಿಗೆ ಸೇರಿದ 2 ಲಕ್ಷ ಮೌಲ್ಯದ 4 ಕಿ.ಮೀ ಉದ್ದದ ಎಲೆಕ್ಟ್ರಿಕಲ್ ವೈರ್ ಹಾಗೂ ಪುಷ್ಬ ಎಂಬುವರಿಗೆ ಸೇರಿದ 1.60 ಲಕ್ಷ ಮೌಲ್ಯದ 3 ಕಿ.ಮೀ ಉದ್ದದ ವೈರ್ ಕಳ್ಳತನವಾಗಿದೆ ಎಂದು ಬೆಸ್ಕಾಂ ಸಹಾಯಕ ಎಂಜಿನಿಯರ್ ರಾಘವೇಂದ್ರ ಪ್ರಸಾದ್ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ಧಾರೆ.

ವಿದ್ಯುತ್ ಪ್ರವಹಿಸುತ್ತಿದ್ದ ಕಂಬ ಮುಟ್ಟಿ ಯುವಕ ಸ್ಥಳದಲ್ಲಿಯೇ ಸಾವು

ದಾವಣಗೆರೆ: ನಿನ್ನೆ ತುಂತುರು ಮಳೆ ಹಿಡಿದುಕೊಂಡ ಹಿನ್ನೆಲೆ ಬೆಸ್ಕಾಂ ಕಂಬವೊಂದರಲ್ಲಿ ವಿದ್ಯುತ್ ಪ್ರವಹಿಸಿದೆ. ಇದನ್ನು ಗಮನಿಸದ ಯುವಕ, ಕಂಬ ಮುಟ್ಟಿದ ಪರಿಣಾಮ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ನಡೆದಿದೆ. ಭರತ್ ಕಾಲೋನಿಯ ಮನೋಜ್ ಮಜ್ಜಿಗೆ(23) ಮೃತ ದುರ್ದೈವಿ. ಯಲ್ಲಮ್ಮ ನಗರದ ಕುಂದುವಾಡ ರಸ್ತೆಯ ಬಳಿ ತಡರಾತ್ರಿ ಈ ಘಟನೆ ನಡೆದಿದೆ. ಮೂತ್ರ ವಿಸರ್ಜನೆಗೆ ಹೋದ ಸಂದರ್ಭದಲ್ಲಿ ವಿದ್ಯುತ್ ಕಂಬ ಗ್ರೌಂಡ್ ಆಗಿದೆ. ಇದನ್ನು ಗಮನಿಸದ ಯುವಕ ಕಂಬ ಮುಟ್ಟಿದ್ದಾನೆ. ಇದರಿಂದ ಸ್ಥಳದಲ್ಲೇ ಯುವಕ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಬಡಾವಣೆ ಠಾಣೆಯ …

ವಿದ್ಯುತ್ ಪ್ರವಹಿಸುತ್ತಿದ್ದ ಕಂಬ ಮುಟ್ಟಿ ಯುವಕ ಸ್ಥಳದಲ್ಲಿಯೇ ಸಾವು Read More »

ಅಕ್ರಮವಾಗಿ ಸಾಗಿಸುತ್ತಿದ್ದ 148 ಕ್ವಿಂಟಾಲ್ ಪಡಿತರ ಅಕ್ಕಿ ವಶ

ದಾವಣಗೆರೆ: ಆಜಾದ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ಲಾರಿಯನ್ನು ಪೊಲೀಸರು ವಶಪಡಿಸಿಕೊಂಡಿದ್ಧಾರೆ. ಲಾರಿಯಲ್ಲಿದ್ದ 148 ಕ್ವಿಂಟಾಲ್ ಅಕ್ಕಿಯನ್ನು ಹಾಗೂ ಒಂದು ಲಾರಿಯನ್ನು ಸೀಜ್ ಮಾಡಲಾಗಿದೆ. ಡಿಸಿಆರ್ ಬಿ ಘಟಕದ ಪೊಲೀಸ್ ಡಿವೈಎಸ್ಪಿ ಬಿ. ಎಸ್ ಬಸವರಾಜ್ ನೇತೃತ್ವದ ಪೊಲೀಸ್ ತಂಡ ದಾಳಿ ನಡೆಸಿತ್ತು. ಈ ಬಗ್ಗೆ ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫಾರ್ಮ್ ಹೌಸ್ ನಲ್ಲಿ ಕೆಲಸಕ್ಕೆ ಸೇರಿ ಐದೇ ದಿನದಲ್ಲಿ 8 ಲಕ್ಷ ಮೌಲ್ಯ ಚಿನ್ನ , 20 ಸಾವಿರ ನಗದು ದೋಚಿ ಪರಾರಿ

ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಫಾರ್ಮ್ ಹೌಸ್ ವೊಂದರಲ್ಲಿ ಕೆಲಸಕ್ಕೆ ಸೇರಿ ಐದೇ ದಿನದಲ್ಲಿ ವ್ಯಕ್ತಿಯೊಬ್ಬ 8 ಲಕ್ಷ ಮೌಲ್ಯದ ಚಿನ್ನ, 20 ಸಾವಿರ ನಗದು ದೋಚಿ ಪರಾರಿಯಾದ ಘಟನೆ ನಡೆದಿದೆ. ಶಿವಮೂರ್ತಿ ಅವರ ಫಾರ್ಮ್ ಹೌಸ್ ನಲ್ಲಿ ಕೆಲಸ ಸೇರಿಕೊಂಡ ವಿಜಯ್ ಕಳ್ಳತನ ಮಾಡಿದ ವ್ಯಕ್ತಿಯಾಗಿದದ್ಧಾನೆ. ವಿಜಯ್ ಕೆಲಸ ಮುಗಿಸಿಕೊಂಡು ಚನ್ನಗಿರಿ ಕಣದ ಸಾಲು ಬಡಾವಣೆಯ ಶಿವಮೂರ್ತಿ ಅವರ ಬಂದಿದ್ದಾನೆ. ಮನೆಯ ಒಡತಿ ಕೆಲಸಗಾರನಿಗೆ ಟೀ ಕೊಟ್ಟು ಬಟ್ಟೆ ಒಣ ಹಾಕಲು ಹೋಗಿದ್ದಾರೆ. ಆಗ ಖದೀಮ …

ಫಾರ್ಮ್ ಹೌಸ್ ನಲ್ಲಿ ಕೆಲಸಕ್ಕೆ ಸೇರಿ ಐದೇ ದಿನದಲ್ಲಿ 8 ಲಕ್ಷ ಮೌಲ್ಯ ಚಿನ್ನ , 20 ಸಾವಿರ ನಗದು ದೋಚಿ ಪರಾರಿ Read More »

ಜಿಲ್ಲೆಯಲ್ಲಿ ಮಳೆಯಿಂದ 21.25 ಲಕ್ಷ ನಷ್ಟ

ದಾವಣಗೆರೆ: ಜಿಲ್ಲೆಯಲ್ಲಿ ಅ.07 ರಂದು 5.03 ಮಿ.ಮೀ ನಷ್ಟು ಮಳೆಯಾಗಿದ್ದು, ಒಟ್ಟು ರೂ.21.25 ಲಕ್ಷ ರೂ. ನಷ್ಟದ ಉಂಟಾಗಿದೆ. ಚನ್ನಗಿರಿ 15.20 ಮಿ.ಮೀ., ದಾವಣಗೆರೆ 5.70 ಮಿ.ಮೀ., ಹರಿಹರ 0.25 ಮಿ.ಮೀ., ಜಗಳೂರು 4.04 ಮಿ.ಮೀ. ಮಳೆಯಾಗಿದ್ದು, ಜಿಲ್ಲೆಯಲ್ಲಿ ಒಟ್ಟು 5.03 ಮಿ.ಮೀ. ಮಳೆಯಾಗಿದೆ. ದಾವಣಗೆರೆ ತಾಲ್ಲೂಕು ವ್ಯಾಪ್ತಿಯಲ್ಲಿ 5 ಕಚ್ಚಾ ಮನೆ ಭಾಗಶ: ಹಾನಿಯಾಗಿದ್ದು ರೂ.2 ಲಕ್ಷ ಅಂದಾಜು ನಷ್ಟ ಸಂಭವಿಸಿರುತ್ತದೆ. ಹಾಗೂ ನರಗನಹಳ್ಳಿ ಗ್ರಾಮದಲ್ಲಿ ಎಂ.ಕೆ ಮಂಜುನಾಥ ಎಂಬುವರು ಹೆಚ್ಚಿನ ಮಳೆಯಿಂದಾಗಿ ಮನೆ ಗೋಡೆ …

ಜಿಲ್ಲೆಯಲ್ಲಿ ಮಳೆಯಿಂದ 21.25 ಲಕ್ಷ ನಷ್ಟ Read More »

ಫರ್ನಿಚರ್ ಅಂಗಡಿ ಬೀಗ ಮುರಿದು1.25 ಲಕ್ಷ ನಗದು; ಸಿಸಿ ಕ್ಯಾಮೆರಾ, ಡಿವಿಆರ್ ಕಳ್ಳತನ

ದಾವಣಗೆರೆ: ನಗರದ ಎಸ್ ಎಸ್ ಲೇಔಟ್ ನ ಬಿ ಬ್ಲಾಕ್ ನ ರಿಂಗ್ ರಸ್ತೆಯ ಶಾರದಮ್ಮ ದೇವಸ್ಥಾನ ಬಳಿಯ ಫರ್ನಿಚರ್ ಅಂಗಡಿ ಬೀಗ ಮುರಿದು ಕೌಂಟರ್ ನಲ್ಲಿದ್ದ 1.25 ಲಕ್ಷ ನಗದು ಹಣದ ಜತೆ ಅಂಡಿಯಲ್ಲಿದ್ದ ಸಿಸಿ‌ ಕ್ಯಾಮೆರಾ, ಡಿವಿಆರ್ ಕಳ್ಳತನ ಮಾಡಿದ್ದಾರೆ. ನಿಜಲಿಂಗಪ್ಪ ಬಡಾವಣೆಯ ಹರ್ಷ ಎಂಬುವರಿಗೆ ಸೆರಿದ ಅಂಗಡಿಯಲ್ಲಿ ಕಳ್ಳತನವಾಗಿದೆ. ಎಂದಿನಂತೆ ದಿನದ ವ್ಯಾಪಾರ ಮುಗಿಸಿ ಬೀಗ ಹಾಕಿಕೊಂಡು ಮನೆಗೆ ಹೋಗಿದ್ದರು. ರಾತ್ರಿ ವೇಳೆ ಅಂಗಡಿ ಬೀಗ‌ ಮುರಿದು 1.25 ಲಕ್ಷ ಕಳ್ಳತನ ಮಾಡಿದ್ದಲ್ಲದೆ, …

ಫರ್ನಿಚರ್ ಅಂಗಡಿ ಬೀಗ ಮುರಿದು1.25 ಲಕ್ಷ ನಗದು; ಸಿಸಿ ಕ್ಯಾಮೆರಾ, ಡಿವಿಆರ್ ಕಳ್ಳತನ Read More »

ಮಧ್ಯ ರಾತ್ರಿ ಇದ್ದಕ್ಕಿದಂತೆ ಕುಸಿದ ಗೋಡೆ; 2 ಹಸು ಸಾವು, 12 ಜನ ಬಚಾವ್

ದಾವಣಗೆರೆ: ಜಿಲ್ಲೆಯಲ್ಲಿ ಭಾರಿ ದುರಂತವೊಂದು ತಪ್ಪಿದೆ. ಮನೆಯಲ್ಲಿ ಮಲಗಿದ್ದ ವೇಳೆ ಮಧ್ಯ ರಾತ್ರಿ ಇದ್ದಕ್ಕಿದಂತೆ ಮನೆಯೊಂದರ ಗೋಡೆ ಕುಸಿದಿದ್ದು, ಅದೃಷ್ಟವಶಾತ್ 13 ಜನ ಪಾರಾಗಿದ್ದಾರೆ. ಈ ಘಟನೆಯಲ್ಲಿ ಇಬ್ಬರಿಗೆ ಮಹಿಳೆಯರಿಗೆ ಗಾಯವಾಗಿದ್ದು, ಒಬ್ಬರ ಸ್ಥಿತಿ ತೀರ ಗಂಭೀರವಾಗಿದೆ. ಹರಿಹರ ತಾಲೂಕಿನ ಕಮಲಾಪುರ ಗ್ರಾಮದಲ್ಲ ಈ ಘಟನೆ ನಡೆದಿದೆ. ಜಿಲ್ಲೆಯಲ್ಲಿ ಕಳೆದ 6 ದಿನದಿಂದ ಭಾರಿ ಮಳೆ ಸುರಿಯುತ್ತಿದ್ದು, ಅದರಲ್ಲೂ ಬುಧವಾರ ಸತತ ಮಳೆ ಸುರಿದಿತ್ತು. ಇದರ ಪರಿಣಾಮ ಹಳೆಯ ಮನೆಯ ಗೋಡೆಗಳು ಕುಸಿತ ಪ್ರಕರಣಗಳು ಜಿಲ್ಲೆ ಕಾಣಿಸಿಕೊಂಡಿವೆ. …

ಮಧ್ಯ ರಾತ್ರಿ ಇದ್ದಕ್ಕಿದಂತೆ ಕುಸಿದ ಗೋಡೆ; 2 ಹಸು ಸಾವು, 12 ಜನ ಬಚಾವ್ Read More »

ಸಿಎಂ ಬಸವರಾಜ ಬೊಮ್ಮಾಯಿ ಗ್ರಾಮ ವಾಸ್ತವ್ಯ

ದಾವಣಗೆರೆ: ಸಿಎಂ ಬಸವರಾಜ ಬೊಮ್ಮಾಯಿ ಅವರು ಅ.16 ರಂದು ಹೊನ್ನಾಳಿ ತಾಲ್ಲೂಕಿನ ಕುಂದೂರು ಹಾಗೂ ನ್ಯಾಮತಿ ತಾಲ್ಲೂಕಿನ ಸುರಹೊನ್ನೆಯಲ್ಲಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ತಿಳಿಸಿದ್ದಾರೆ. ಈ ಬಗ್ಗೆ ಬುಧವಾರ ಮುಖಮಂತ್ರಿಗಳ ನಿವಾಸದಲ್ಲಿ ಬಸವರಾಜ ಬೊಮ್ಮಾಯಿ ಹಾಗೂ ಮಾನ್ಯ ಕಂದಾಯ ಸಚಿವ ಆರ್ ಅಶೋಕ್ ಅವರನ್ನು ಭೇಟಿಮಾಡಿ ಹೊನ್ನಾಳಿ-ನ್ಯಾಮತಿ ಅವಳಿ ತಾಲ್ಲೂಕಿನ ಸುರಹೊನ್ನೆ & ಕುಂದೂರು ಗ್ರಾಮದ ಗ್ರಾಮ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಆಹ್ವಾನಿಸಿದರು.

ನಿನ್ನೆ ಬಿದ್ದ ಭಾರಿ ಮಳೆಗೆ ಹರಿಹರ ನಗರದ ಕೇಶವನಗರದಲ್ಲಿ ನಿಂತು ನೀರು

ಹರಿಹರ : ನಿನ್ನೆ ಬಿದ್ದ ಭಾರಿ ಮಳೆಗೆ ಹರಿಹರ ನಗರದ ನೀಲಕಂಠ ನಗರ, ಕೇಶವನಗರದಲ್ಲಿ ನೀರು ನಿಂತು ಸಾರ್ವಜನಿಕರಿಗೆ ತೊಂದರೆಯಾಗಿರುವುದನ್ನು ಮಾನ್ಯ ಜನಪ್ರಿಯ ಶಾಸಕರಾದ ಎಸ್ ರಾಮಪ್ಪನವರು ಸ್ಥಳ ಪರಿಶೀಲಿಸಿ ನಗರಸಭಾ ಪೌರಾಯುಕ್ತರಿಗೆ ಕೂಡಲೆ ಸರಿಪಡಿಸುವಂತೆ ಸೂಚಿಸಿದರು. ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ದಾದಾಪೀರ್,ಅಲೀಮ್ ಹಾಗೂ ಶ್ರೀಮತಿ ಸುಮಿತ್ರಾ ಕೆ.ಎಮ್ ರವರು ಇದ್ದರು.

Translate »
Scroll to Top